Site icon Vistara News

Rashmika Mandanna: ರಶ್ಮಿಕಾ ಮಂದಣ್ಣ ಬರ್ತ್ ಡೇ: `ನ್ಯಾಷನಲ್‌ ಕ್ರಶ್‌’ ಕೈಯಲ್ಲಿರುವ ಸಿನಿಮಾಗಳೆಷ್ಟು?

Rashmika Mandanna Movies List

ಬೆಂಗಳೂರು: ಇಂದು ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಜನುಮದಿನದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟಿ. 2016ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ʻಕಿರಿಕ್ʼ ಪಾರ್ಟಿಯೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. 2021 ರ ಪ್ಯಾನ್-ಇಂಡಿಯಾ ಚಲನಚಿತ್ರ ʻಪುಷ್ಪಾ: ದಿ ರೈಸ್‌ʼನ ಶ್ರೀವಲ್ಲಿ ಪಾತ್ರದ ಮೂಲಕ ಮಿಂಚಿದರು. ಇದಾದ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು, ನಟಿ ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರಂತಹ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡರು.

ʻಅಂಜನಿಪುತ್ರʼ (2017), ʻಚಮಕ್ʼ (2017), ʻಗೀತಾ ಗೋವಿಂದಂʼ (2018), ʻಡಿಯರ್ ಕಾಮ್ರೇಡ್ʼ (2019), ಮತ್ತು ʻಸರಿಲೇರು ನೀಕೆವ್ವರುʼ (2020) ನಂತಹ ಚಿತ್ರಗಳಲ್ಲಿ ಅವರ ಅದ್ಭುತ ಅಭಿನಯದೊಂದಿಗೆ,ಅನೇಕ ಫ್ಯಾನ್ಸ್‌ ಮನ ಗೆದ್ದರು.

ರಶ್ಮಿಕಾ ಮಂದಣ್ಣ ಟಾಪ್ ಚಲನಚಿತ್ರಗಳು

ಪುಷ್ಪಾ: ದಿ ರೈಸ್ (2021)

ಪುಷ್ಪ: ದಿ ರೈಸ್ ಸಕ್ಸೆಸ್‌ ನಂತರ ಮತ್ತೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಒಂದಾಗುತ್ತಿದ್ದಾರೆ. ಪುಷ್ಪ ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ನೋಡಿರುವುದು ಅರ್ಧ ಕಥೆ ಮಾತ್ರ. ಕಥಾ ನಾಯಕನ ಬದುಕಿನಲ್ಲಿ ಮುಂದೇನಾಯಿತು ಎಂಬುದನ್ನು ತಿಳಿಯುವ ಕುತೂಹಲ ಪ್ರೇಕ್ಷಕರಿಗೆ ಇದೆ.ಇದರಲ್ಲಿ ರಶ್ಮಿಕಾ ಶ್ರೀವಲ್ಲಿಯಾಗಿ ಮಿಂಚಿದರು.

ಇದನ್ನೂ ಓದಿ: Rashmika Mandanna: ಮತ್ತೊಮ್ಮೆ ಡೀಪ್‌ಫೇಕ್‌ ಜಾಲದಲ್ಲಿ ಸಿಲುಕಿದ ರಶ್ಮಿಕಾ; ವೈರಲ್‌ ವಿಡಿಯೊ ಇಲ್ಲಿದೆ

ಅನಿಮಲ್‌

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ʻಅನಿಮಲ್ʼ, ರಶ್ಮಿಕಾ ಹೆಸರಿಗೆ ಸೇರ್ಪಡೆಯಾದ ಮತ್ತೊಂದು ಯಶಸ್ವಿ ಚಿತ್ರ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ, ನಟಿ ರಣಬೀರ್ ಪತ್ನಿಯಾಗಿ ನಟಿಸಿದ್ದಾರೆ. ಮಿಷನ್ ಮಜ್ನು (2023), ವಾರಿಸು, ಗೀತಾ ಗೋವಿಂದಂ ಸಿನಿಮಾಗಳು ಹಿಟ್‌ ಪಟ್ಟಿಯಲ್ಲಿ ಸೇರಿವೆ.

ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬ್ಯುಸಿ ಕಲಾವಿದೆಯರಲ್ಲಿ ಒಬ್ಬರು. ವಿವಿಧ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಇದೀಗ ಸದ್ದಿಲ್ಲದೆ ತಮ್ಮ ನಾಲ್ಕನೇ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಬಾಲಿವುಡ್‌ ನಟ ವಿಕ್ಕಿ ಕೌಶಲ್‌ (Vicky Kaushalಜತೆ ಅಭಿನಯಿಸುತ್ತಿರುವ ಮೊದಲ ಚಿತ್ರ ʼಛಾವಾʼ (Chhava)ದ ಶೂಟಿಂಗ್‌ ಅನ್ನು ರಶ್ಮಿಕಾ ಪೂರ್ಣಗೊಳಿಸಿದ್ದಾರೆ. 

ಹಿಂದಿ ಮತ್ತು ಮರಾಠಿ ಚಿತ್ರಗಳನ್ನು ನಿರ್ದೇಶಿಸಿರುವ ಲಕ್ಷ್ಮಣ್‌ ಉಟೇಕರ್ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಐತಿಹಾಸಿಕ ಚಿತ್ರ ʼಛಾವಾʼ. ಈ ಮೂಲಕ ಅವರು ಮರಾಠ ಯೋಧ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್‌ ನಟಿಸುತ್ತಿದ್ದು, ಅವರ ಪತ್ನಿ ಯೇಸುಬಾಯಿಯಾಗಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿ ರಶ್ಮಿಕಾ ಐತಿಹಾಸಿಕ ಚಿತ್ರವೊಂದರ ಭಾಗವಾಗುತ್ತಿದ್ದಾರೆ.

ಧನುಷ್‌-ರಶ್ಮಿಕಾ ಅಭಿನಯದ ಸಿನಿಮಾದ ಟೈಟಲ್‌ ರಿವೀಲ್‌!

ಸೂಪರ್ ಸ್ಟಾರ್ ಧನುಷ್ (Actor Dhanush) ಅವರ ʻಡಿ 51ʼ ಸಿನಿಮಾ ಟೈಟಲ್‌ ರಿವೀಲ್‌ ಆಗಿದೆ.ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ. ಸದ್ಯ ಈ ಚಿತ್ರಕ್ಕೆ ‘ಕುಬೇರ’ ಎನ್ನುವ ಟೈಟಲ್ ಫಿಕ್ಸ್ ಆಗಿದೆ. ನಟ ಧನುಷ್ ಗಡ್ಡ ಬಿಟ್ಟು ನಗುತ್ತ ನೋಡುತ್ತಿರುವ ಪೋಸ್ಟರ್‌ ರಿಲೀಸ್ ಮಾಡಲಾಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ.

ಇದನ್ನೂ ಓದಿ: Rashmika Mandanna: ಜಪಾನ್‌ನಲ್ಲಿ ರಶ್ಮಿಕಾ: ವರ್ಷಗಳ ಕನಸು ನನಸಾಯ್ತು ಎಂದ ನ್ಯಾಷನಲ್‌ ಕ್ರಶ್‌!

‘ದಿ ಗರ್ಲ್‌ಫ್ರೆಂಡ್’

ನಟಿ ರಶ್ಮಿಕಾ ಮಂದಣ್ಣ (Rashmika Mandanna) ‘ದಿ ಗರ್ಲ್‌ಫ್ರೆಂಡ್’ ಎಂಬ ರೋಮಾಂಚಕ ಪ್ರೇಮಕಥೆಯಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಏಳು ವರ್ಷಗಳ ವೃತ್ತಿಜೀವನದಲ್ಲಿ ಇದು ನಟಿಯ 24ನೇ ಚಿತ್ರವಾಗಿದೆ. ‘ದಿ ಗರ್ಲ್‌ಫ್ರೆಂಡ್’ ರಶ್ಮಿಕಾ ಅವರ ಸೋಲೊ ಸಿನಿಮಾ ಎನ್ನಲಾಗಿದೆ. ಚಿತ್ರವನ್ನು ರಾಹುಲ್ ರವೀಂದ್ರನ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಗೆ ಕನ್ನಡದ ‘ದಿಯಾ’ ಚಿತ್ರದಲ್ಲಿ ನಟಿಸಿ ಗೆದ್ದಿದ್ದ ನಟ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನ ‘ದಸರಾ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟ ನಾನಿ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Exit mobile version