Site icon Vistara News

Rashmika mandanna: ರೇಷ್ಮೆ ಸೀರೆಯುಟ್ಟು, ಮೈತುಂಬ ಒಡವೆ ಧರಿಸಿ ಖಡಕ್‌ ಪೋಸ್‌ ಕೊಟ್ಟ ಶ್ರೀವಲ್ಲಿ!

Rashmika mandanna new poster Pushpa 2 Rashmika mandanna new poster Pushpa 2 for birthday

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika mandanna) ಅವರ ಜನ್ಮದಿನದ ಪ್ರಯುಕ್ತ ಪ್ರೊಡಕ್ಷನ್ ಹೌಸ್ ಮೈತ್ರಿ ಮೂವಿ ಮೇಕರ್ಸ್ (Mythri Movie Makers ) ಹೊಸ ಪೋಸ್ಟರ್‌ ಹಂಚಿಕೊಂಡಿದೆ (Pushpa: The Rule new poster ). ʻಪುಷ್ಪ: ದಿ ರೂಲ್‌ಗಾಗಿ ರಶ್ಮಿಕಾ ಹೊಸ ಅವತಾರ ತಾಳಿದ್ದಾರೆ. ʻಶ್ರೀವಲ್ಲಿʼ ರೇಷ್ಮೆ ಸೀರೆಯುಟ್ಟು, ಮೈ ತುಂಬ ಒಡವೆ ಧರಿಸಿ ಪೋಸ್‌ ಕೊಟ್ಟಿದ್ದಾರೆ. ಪೋಸ್ಟರ್‌ ನೋಡಿದರೆ ಹಾಡಿನ ಸ್ಟಿಲ್‌ನಂತೆ ಕಾಣುತ್ತಿದೆ. ‘ಪುಷ್ಪ’ ಚಿತ್ರದಲ್ಲಿನ ಲುಕ್​ಗೂ ಈ ಲುಕ್​ಗೂ ಸಾಕಷ್ಟು ಭಿನ್ನತೆ ಇದೆ.

ಮೊದಲ ಭಾಗದಲ್ಲಿ ರಶ್ಮಿಕಾ ಅವರು ಅತ್ಯಂತ ನಾಚಿಕೆಯಿಂದ, ನಾಜೂಕಾಗಿ ಕಂಡಿದ್ದರು. ಆದರೆ, ‘ಪುಷ್ಪ 2’ ಚಿತ್ರದಲ್ಲಿ ಅವರ ಪಾತ್ರ ಆ ರೀತಿ ಇರುವುದಿಲ್ಲ ಎನ್ನಲಾಗಿದೆ. ಪುಷ್ಪರಾಜ್ ಜತೆ ಸೇರಿ ಶ್ರೀವಲ್ಲಿ ಕೂಡ ಬದಲಾಗುತ್ತಾಳೆಯೇ ಎನ್ನುವ ಪ್ರಶ್ನೆಯನ್ನು ಪೋಸ್ಟರ್ ಹುಟ್ಟುಹಾಕಿದೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಕಮೆಂಟ್‌ ಮೂಲಕ ʻಮೇಡಂ ಏಪ್ರಿಲ್ 8ಕ್ಕೆ ಟೀಸರ್‌ಗಾಗಿ ಹುಚ್ಚನಂತೆ ಕಾಯುತ್ತಿದ್ದೇನೆʼʼಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು “ ಪ್ರತಿಭಾವಂತ ನಟಿಗೆ ಜನ್ಮದಿನದ ಶುಭಾಶಯಗಳು. ಹೆಚ್ಚಿನ ಯಶಸ್ಸನ್ನು ಹೀಗೆ ಪಡೆಯುತ್ತೀರಿ. ದೇವರು ನಿಮಗೆ ಉತ್ತಮ ಆರೋಗ್ಯ, ಶಾಂತಿ ಮತ್ತು ಸಂತೋಷವನ್ನು ಶಾಶ್ವತವಾಗಿ ನೀಡಲಿʼʼಎಂದು ಬರೆದುಕೊಂಡಿದ್ದಾರೆ.

ʼಪುಷ್ಪ 2ʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

ಚಿತ್ರದ ನಾಯಕ ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬವಾದ ಏಪ್ರಿಲ್‌ 8ರಂದು ʼಪುಷ್ಪ 2ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ. ʼಪುಷ್ಪ 2: ದಿ ರೂಲ್‌ʼ ಚಿತ್ರದ ಟೀಸರ್‌ ಏಪ್ರಿಲ್‌ 8ರಂದು ಹೊರ ಬರಲಿದೆ. ಈತ (ಪುಷ್ಪ) ಇನ್ನಷ್ಟು ಶಕ್ತಿಯೊಂದಿಗೆ (Double the fire) ನಿಮ್ಮ ಮುಂದೆ ಬರಲಿದ್ದಾನೆ. ʼಪುಷ್ಪ 2ʼ ಸಿನಿಮಾ ವಿಶ್ವಾದ್ಯಂತ 2024ರ ಆಗಸ್ಟ್‌ 15ರಂದು ತೆರೆಗೆ ಬರಲಿದೆʼʼ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಬರ್ತ್ ಡೇ: `ನ್ಯಾಷನಲ್‌ ಕ್ರಶ್‌’ ಕೈಯಲ್ಲಿರುವ ಸಿನಿಮಾಗಳೆಷ್ಟು?

ಅಂದಹಾಗೆ ʼಪುಷ್ಪ 2: ದಿ ರೂಲ್‌ʼ ಚಿತ್ರ 2021ರಲ್ಲಿ ತೆರೆಕಂಡ ʼಪುಷ್ಪ: ದಿ ರೈಸ್‌ʼ ಸಿನಿಮಾದ ಎರಡನೇ ಭಾಗ. ಅದನ್ನೂ ಸುಕುಮಾರ್‌ ನಿರ್ದೇಶಿಸಿದ್ದರು. ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ ಬಂದಿದ್ದ ಅದು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. 370 ಕೋಟಿ ರೂ.ಗಿಂತ ಅಧಿಕ ಬಾಚಿಕೊಂಡಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಮೊದಲ ಬಾರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಇಲ್ಲೂ ಮುಂದುವರಿದಿದ್ದಾರೆ. ಸದ್ಯ ಚಿತ್ರತಂಡ ವಿಶಾಖಪಟ್ಟಣದಲ್ಲಿ ಬೀಡು ಬಿಟ್ಟಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

ರಶ್ಮಿಕಾ ಅವರು ರಣಬೀರ್ ಕಪೂರ್ ಜತೆ ಬಾಲಿವುಡ್ ಸಿನಿಮಾ ʻಅನಿಮಲ್‌ʼನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

Exit mobile version