Site icon Vistara News

Rashmika Mandanna : ಮಹೇಶ್ ಬಾಬು ಫೋಟೊಗೆ ಹೋಲಿಸಿದ್ದಕ್ಕೆ ರಶ್ಮಿಕಾ ಮಂದಣ್ಣ ಕೊಟ್ಟ ರಿಯಾಕ್ಷನ್‌ ಏನು?

Rashmika Mandanna reacts to pic Mahesh Babu

ಬೆಂಗಳೂರು: ಏಪ್ರಿಲ್ 5 ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನುದಿನ ಸಂಭ್ರವಾಗಿತ್ತು. ಹೀಗಾಗಿ ʻಪುಷ್ಪ 2ʼ ಚಿತ್ರತಂಡ ರಶ್ಮಿಕಾ ಲುಕ್‌ ಪೋಸ್ಟರ್‌ ಹಂಚಿಕೊಂಡಿತ್ತು. ಪೋಸ್ಟರ್ ಬಿಡುಗಡೆಯಾದ ನಂತರ, ಕೆಲವು ಅಭಿಮಾನಿಗಳು ಮಹೇಶ್‌ ಬಾಬು (Mahesh Babu) ಅಭಿನಯದ ʻಗುಂಟೂರು ಖಾರಂʼನ (Guntur Kaaram) ಮಹೇಶ್ ಬಾಬು ಅವರ ಫೋಟೊಗೆ ಹೋಲಿಸಿದ್ದಾರೆ. ರಶ್ಮಿಕಾ ಅವರು ಕಣ್ಣಿನ ಹತ್ತಿರ ಕೈಗಳಿಂದ ನೀಡಿದ ಲುಕ್ ರೀತಿಯೇ ಮಹೇಶ್‌ ಬಾಬು ಪೋಸ್‌ ಕೊಟ್ಟಿದ್ದಾರೆ. ಈ ಕೊಲಾಜ್ ಕಂಡು ರಶ್ಮಿಕಾ ಪ್ರತಿಕ್ರಿಯೆ ನೀಡಿದ್ದಾರೆ.

ʻಪುಷ್ಪ 2ʼ ಶೇರ್‌ ಮಾಡಿಕೊಂಡ ಪೋಸ್ಟರ್‌ನಲ್ಲಿ ರಶ್ಮಿಕಾ ಅವರು ರೇಷೆಯ ಹಸಿರು ಸೀರೆಯುಟ್ಟಿದ್ದರು. ಹಣೆ ಬೊಟ್ಟನ್ನು ಹಾಕಿಕೊಂಡು, ಆಭರಣಗಳನ್ನು ಧರಿಸಿ, ಕೈಯಲ್ಲಿ ಬಣ್ಣ ಬಣ್ಣದ ಬಳೆಗಳು ಹೀಗೆ ಕಣ್ಣಿನ ಹತ್ತಿರ ಕೈಗಳಿಂದ ನೀಡಿದ ಲುಕ್ ಹಂಚಿಕೊಂಡಿತ್ತು. ʻಗುಂಟೂರು ಖಾರಂʼನಲ್ಲಿ ಮಹೇಶ್ ಬಾಬು ಕೂಡ ಇದೇ ರೀತಿ ಲುಕ್‌ ಕೊಟ್ಟಿದ್ದಾರೆ. ಈ ಕೊಲಾಜ್ ಕಂಡು ರಶ್ಮಿಕಾ ಮಂದಣ್ಣ ʻʻ”ಓಓಓ.. ನೈಸ್..ನನಗೆ ಈ ಕೊಲಾಜ್ ಇಷ್ಟವಾಯ್ತುʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika mandanna: ರೇಷ್ಮೆ ಸೀರೆಯುಟ್ಟು, ಮೈತುಂಬ ಒಡವೆ ಧರಿಸಿ ಖಡಕ್‌ ಪೋಸ್‌ ಕೊಟ್ಟ ಶ್ರೀವಲ್ಲಿ!

ʼಪುಷ್ಪ 2ʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

ಚಿತ್ರದ ನಾಯಕ ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬವಾದ ಏಪ್ರಿಲ್‌ 8ರಂದು ʼಪುಷ್ಪ 2ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ. ʼಪುಷ್ಪ 2: ದಿ ರೂಲ್‌ʼ ಚಿತ್ರದ ಟೀಸರ್‌ ಏಪ್ರಿಲ್‌ 8ರಂದು ಹೊರ ಬರಲಿದೆ. ಈತ (ಪುಷ್ಪ) ಇನ್ನಷ್ಟು ಶಕ್ತಿಯೊಂದಿಗೆ (Double the fire) ನಿಮ್ಮ ಮುಂದೆ ಬರಲಿದ್ದಾನೆ. ʼಪುಷ್ಪ 2ʼ ಸಿನಿಮಾ ವಿಶ್ವಾದ್ಯಂತ 2024ರ ಆಗಸ್ಟ್‌ 15ರಂದು ತೆರೆಗೆ ಬರಲಿದೆʼʼ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು.

ಅಂದಹಾಗೆ ʼಪುಷ್ಪ 2: ದಿ ರೂಲ್‌ʼ ಚಿತ್ರ 2021ರಲ್ಲಿ ತೆರೆಕಂಡ ʼಪುಷ್ಪ: ದಿ ರೈಸ್‌ʼ ಸಿನಿಮಾದ ಎರಡನೇ ಭಾಗ. ಅದನ್ನೂ ಸುಕುಮಾರ್‌ ನಿರ್ದೇಶಿಸಿದ್ದರು. ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ ಬಂದಿದ್ದ ಅದು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. 370 ಕೋಟಿ ರೂ.ಗಿಂತ ಅಧಿಕ ಬಾಚಿಕೊಂಡಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಮೊದಲ ಬಾರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಇಲ್ಲೂ ಮುಂದುವರಿದಿದ್ದಾರೆ. ಸದ್ಯ ಚಿತ್ರತಂಡ ವಿಶಾಖಪಟ್ಟಣದಲ್ಲಿ ಬೀಡು ಬಿಟ್ಟಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.

ಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಬರ್ತ್ ಡೇ: `ನ್ಯಾಷನಲ್‌ ಕ್ರಶ್‌’ ಕೈಯಲ್ಲಿರುವ ಸಿನಿಮಾಗಳೆಷ್ಟು?

ರಶ್ಮಿಕಾ ಅವರು ರಣಬೀರ್ ಕಪೂರ್ ಜತೆ ಬಾಲಿವುಡ್ ಸಿನಿಮಾ ʻಅನಿಮಲ್‌ʼನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ರಾಹುಲ್ ರವೀಂದ್ರನ್ ನಿರ್ದೇಶನದ ʻದಿ ಗರ್ಲ್‌ಫ್ರೆಂಡ್ʼ ಎಂಬ ತೆಲುಗು ಚಿತ್ರದಲ್ಲಿ ರಶ್ಮಿಕಾ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಶಾಂತರುಬನ್ ನಿರ್ದೇಶನದ ʻರೈನ್‌ಬೋʼ ಎಂಬ ದ್ವಿಭಾಷಾ ಚಿತ್ರದಲ್ಲೂ ಅವರು ನಟಿಸಲಿದ್ದಾರೆ. ಯೆಸುಬಾಯಿ ಭೋನ್ಸಾಲೆ ನಿರ್ದೇಶನದ ಮತ್ತು ವಿಕ್ಕಿ ಕೌಶಲ್, ಅಕ್ಷಯ್ ಖನ್ನಾ ಮತ್ತು ಪ್ರದೀಪ್ ರಾವತ್ ನಟಿಸಿರುವ ʻಛಾವʼ ಎಂಬ ಹಿಂದಿ ಚಲನಚಿತ್ರದಲ್ಲಿಯೂ ಅವರು ನಟಿಸಲಿದ್ದಾರೆ.

Exit mobile version