Site icon Vistara News

Samantha Ruth Prabhu: ಸಮಂತಾಗೆ ಜೈಲಿಗೆ ಕಳಿಸಿ ಎಂದ ವೈದ್ಯ ; ನಟಿ ಹೇಳಿದ್ದೇನು?

Samantha Ruth Prabhu Doctor Calls Health Illiterate

ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾಮಾನ್ಯ ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಪರ್ಯಾಯ ಮಾರ್ಗದ ಬಗ್ಗೆ ಸಲಹೆ ನೀಡಿರುವ ಕುರಿತು ವಿವಾದಕ್ಕೆ ಒಳಗಾಗಿದ್ದಾರೆ. ವೈರಲ್ ಇನ್​ಫೆಕ್ಷನ್ ​ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಸಮಂತಾ ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆ ವೈದ್ಯರು ತಕರಾರು ತೆಗೆದಿದ್ದಾರೆ. ವಿಜ್ಞಾನ ಹಾಗೂ ವೈದ್ಯ ಲೋಕದಲ್ಲಿ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ ಎಂದು ಹೇಳಿದ್ದಾರೆ. ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ಸಮಂತಾಗೆ “ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರು” ಎಂದು ಕರೆದಿದ್ದಾರೆ. ಇಂತಹ ಚಿಕಿತ್ಸೆಯನ್ನು ಉತ್ತೇಜಿಸುವ ವ್ಯಕ್ತಿಗಳಿಗೆ ದಂಡ ವಿಧಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಟಿ ಪೋಸ್ಟ್‌ ಕೂಡ ಮಾಡಿದ್ದಾರೆ.

ಸಮಂತಾ ಸಲಹೆಗೆ ಪ್ರತಿಕ್ರಿಯಿಸಿದ ವೈದ್ಯರು, “ದುರದೃಷ್ಟವಶಾತ್ ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರಾಗಿರುವ ಭಾರತೀಯ ನಟಿ ಸಮಂತಾ ರುತ್ ಅವರು ತಮ್ಮ ಲಕ್ಷಾಂತರ ಫಾಲೋವರ್ಸ್‌ಗಳಿಗೆ ವೈರಲ್ ಇನ್​ಫೆಕ್ಷನ್​ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ. ಮತ್ತು ಉಸಿರಾಡಬೇಡಿ. ಏಕೆಂದರೆ ಇದು ಆರೋಗ್ಯಕ್ಕೆ ಅಪಾಯಕಾರಿ. ಅಮೇರಿಕದ ಸೈಂಟಿಫಿಕ್ ಸೊಸೈಟಿ ಅಸ್ತಮಾ ಮತ್ತು ಅಲರ್ಜಿ ಫೌಂಡೇಶನ್ ನವರೇ ಈ ಮಾತನ್ನು ಹೇಳಿದ್ದಾರೆ ಎಂದು ಕೂಡ ಹೇಳಿದ್ದಾರೆ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ .

ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು ಎಂದು ಕೂಡ ಆಗ್ರಹಿಸಿರುವ ವೈದ್ಯರು, ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ಸಂಸ್ಥೆ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಸುಮ್ಮನೆ ಇದ್ದು ಜನರನ್ನು ಸಾಯಲು ಬಿಡುತ್ತಾರಾ ಎಂದು ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ.

ಇದಾದ ಬಳಿಕ ಸಮಂತಾ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದಿರುವ ಸಮಂತಾ, ಹಲವು ಚಿಕಿತ್ಸೆಗಳು ತುಂಬಾ ದುಬಾರಿಯಾಗಿದ್ದವು. ನಾನು ನಿಭಾಯಿಸಬಲ್ಲೆ. ಆದರೆ ಕೆಲವರಿಗೆ ಅಸಾಧ್ಯ. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ.

ಇದನ್ನೂ ಓದಿ: Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

ಮಾತ್ರವಲ್ಲ ಜೈಲಿಗೆ ಕಳುಹಿಸಿ ಎಂದು ನನಗೆ ಹೇಳುವ ಬದಲು, ನನ್ನ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ನನ್ನ ಡಾಕ್ಟರನ್ನು ಅವರು ಕೇಳಬೇಕಿತ್ತು ಎಂದಿದ್ದಾರೆ. ಆಗ ಇಬ್ಬರು ವೃತ್ತಿಪರ ವೈದ್ಯರ ನಡುವೆ ಚರ್ಚೆಯಾಗುತ್ತಿತ್ತು. ಆ ಚರ್ಚೆಯಿಂದ ನಾನು ಇನ್ನೂ ಹೆಚ್ಚು ಕಲಿಯಬಹುದಿತ್ತು ಎಂದು ಕೂಡ ಸಮಂತಾ ಹೇಳಿದ್ದಾರೆ. . ಇನ್ನು ಮುಂದೆ ತಾನು ಹಂಚಿಕೊಳ್ಳುವ ವೈದ್ಯಕೀಯ ಸಲಹೆಯ ಬಗ್ಗೆ ‘ಹೆಚ್ಚು ಜಾಗರೂಕರಾಗಿರುತ್ತೇನೆ’ ಎಂದು ಹೇಳಿದ್ದಾರೆ ಸಮಂತಾ.

ಈ ಮುಂಚೆಯೂ ನಟಿ ಲಿವರ್‌ ಡೆಟಾಕ್ಸಿಫಿಕೇಶನ್‌ (liver detoxification) ಬಗ್ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಹಲವರು ಆರೋಪಿಸಿದ್ದರು. ಅಲ್ಲಿ ಸಮಂತಾ ಅವರು ಲಿವರ್‌ ಆರೋಗ್ಯಕ್ಕಾಗಿ ʻದಂಡೇಲಿಯನ್‌ʼನಂತಹ ಗಿಡಮೂಲಿಕೆಗಳ ಬಳಕೆ ಬಗ್ಗೆ ಚರ್ಚಿಸಿದ್ದರು. ಈ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ವೈದ್ಯರೊಬ್ಬರು ಸಮಂತಾ ಅವರನ್ನು ಟೀಕಿಸಿದ್ದರು.

Exit mobile version