Site icon Vistara News

Samantha Ruth Prabhu: ಫಾಲೋವರ್ಸ್‌ಗಳನ್ನು ದಾರಿ ತಪ್ಪಿಸಿದ್ರಾ ಸಮಂತಾ? ವೈದ್ಯರಿಂದ ಸಖತ್‌ ಕ್ಲಾಸ್‌!

Samantha Ruth Prabhu Gets Slammed for Misleading 3 Cr Followers

ಬೆಂಗಳೂರು: ಖ್ಯಾತ ತೆಲುಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ತಮ್ಮ ಫಾಲೋವರ್ಸ್‌ಗಳಿಗೆ ಲಿವರ್‌ ಡೆಟಾಕ್ಸಿಫಿಕೇಶನ್‌ (liver detoxification) ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದು, ಇದೀಗ ಟೀಕೆಗಳನ್ನು ಎದುರಿಸುತ್ತಿದ್ದಾರೆ. ʻದಿ ಲಿವರ್ ಡಾಕ್ ಆನ್ ಎಕ್ಸ್ʼ ( Liver Doc on X) ಎಂದು ತಮ್ಮನ್ನು ಗುರುತಿಸಿಕೊಳ್ಳುವ ವೈದ್ಯರು ಸಮಂತಾ ಅವರ ಆರೋಗ್ಯ ಪಾಡ್‌ಕಾಸ್ಟ್‌ ಸಿರೀಸ್‌ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ನಲ್ಲಿ, ವೈದ್ಯರು ಸಮಂತಾ ಅವರ ಪಾಡ್‌ಕಾಸ್ಟ್‌ 45 ಸೆಕೆಂಡುಗಳ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಸಮಂತಾ ಅವರು ಲಿವರ್‌ ಆರೋಗ್ಯಕ್ಕಾಗಿ ʻದಂಡೇಲಿಯನ್‌ʼನಂತಹ ಗಿಡಮೂಲಿಕೆಗಳ ಬಳಕೆ ಬಗ್ಗೆ ಚರ್ಚಿಸಿದ್ದಾರೆ. ಇದೀಗ ಈ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ವೈದ್ಯರು (dandelion for liver health) ಸಮಂತಾ ಅವರನ್ನು ಟೀಕಿಸಿದ್ದಾರೆ.

ವೈದ್ಯರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸಮಂತಾ ಅವರ ಪಾಡ್‌ಕಾಸ್ಟ್‌ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ. “ಇದು ಸಿನಿಮಾ ತಾರೆ ಸಮಂತಾ ರುತ್ ಪ್ರಭು, 33 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ, ಇಷ್ಟೂ ಜನ ಫಾಲೋವರ್ಸ್‌ಗೆ ಲಿವರ್‌ ಡೆಟಾಕ್ಸಿಫಿಕೇಶನ್‌ ಬಗ್ಗೆ ತಪ್ಪು ಮಾಹಿತಿ ನೀಡಿ ತಪ್ಪುದಾರಿಗೆ ಎಳೆದು ತರುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಇತ್ತೀಚೆಗೆ ಪಾಡ್‌ಕಾಸ್ಟ್‌ ಮೂಲಕ, ಮತ್ತೆ ಕೆಲಸಕ್ಕೆ ಕಮ್‌ಬ್ಯಾಕ್‌ ಆಗುತ್ತೇನೆ ಎಂದಿದ್ದರು. ಅದರಂತೆ ಪಾಡ್‌ಕಾಸ್ಟ್‌ ಕಾರ್ಯಕ್ರಮ ಆರಂಭಿಸಿದ್ದರು. ಇದೀಗ ಲಿವರ್‌ ಡೆಟಾಕ್ಸಿಫಿಕೇಶನ್‌ ಬಗ್ಗೆ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ʻದಿ ಲಿವರ್ ಡಾಕ್ ಆನ್ ಎಕ್ಸ್ʼ ಎಂದು ಕರೆಯಲ್ಪಡುವ ವೈದ್ಯರು ಆರೋಪಿಸಿದ್ದಾರೆ.

ವೈದ್ಯರು ತಮ್ಮ ಎಕ್ಸ್‌ ಖಾತೆಯಲ್ಲಿ ʻʻಇಂತಹ “ಆರೋಗ್ಯ ಪಾಡ್‌ಕಾಸ್ಟ್‌ಗಳಲ್ಲಿ” ವಿಜ್ಞಾನ, ಔಷಧ ಮತ್ತು ಆರೋಗ್ಯದ ಕುರಿತು ಮಾತನಾಡಲು ಅದರ ಬಗ್ಗೆ ಜ್ಞಾನವೇ ಇಲ್ಲದವರನ್ನು ಕರೆ ತರುತ್ತಾರೆ. ಸೈನ್ಸ್‌ ಗೊತ್ತಿಲ್ಲದ ಇಬ್ಬರು ಆರೋಗ್ಯದ ಬಗ್ಗೆ ಸಲಹೆ ನೀಡುತ್ತಾರೆ. ಅಲ್ಲಿರುವ ವ್ಯಕ್ತಿ ವೈದ್ಯ ಇಲ್ಲ. ಈ ಬಗ್ಗೆ ಅವರಿಗೆ ಮಾಹಿತಿಯೂ ಗೊತ್ತಿಲ್ಲ. ಅವರು ಹೇಳುತ್ತಾರೆ, ಲಿವರ್‌ ಆರೋಗ್ಯವನ್ನು ಸುಧಾರಿಸಲು ಉತ್ತಮ ಮೂಲಿಕೆ ʻದಂಡೇಲಿಯನ್ʼ ಎಂದು. ನಾನು ಲಿವರ್‌ ವೈದ್ಯ, ತರಬೇತಿ ಪಡೆದ ಹೆಪಟಾಲಜಿಸ್ಟ್ , ಒಂದು ದಶಕದಿಂದ ಲಿವರ್‌ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತ ಬಂದಿದ್ದೇನೆ. ದಂಡೇಲಿಯನ್ ಅನ್ನು ಸಲಾಡ್‌ನಲ್ಲಿ ಬಳಸಬಹುದು. ಸುಮಾರು 100 ಗ್ರಾಂ ದಂಡೇಲಿಯನ್ ನಿಮ್ಮ ದೈನಂದಿನ ಪೊಟ್ಯಾಸಿಯಮ್ ಅವಶ್ಯಕತೆಗಳಲ್ಲಿ ಸುಮಾರು 10-15% ಅನ್ನು ಒದಗಿಸುತ್ತದೆ. ಆದರೆ ಯಾವುದೇ ಕ್ಯಾಲೊರಿ ಅದರಲ್ಲಿ ಇಲ್ಲ. ದಂಡೇಲಿಯನ್‌ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇವರಿಗೆ ಪೂರ್ಣ ಜ್ಞಾನವಿಲ್ಲದೇ ಆರೋಗ್ಯದ ಬಗ್ಗೆ ಹೀಗೆ ಸಲಹೆ ಕೊಡುವುದು ತಪ್ಪು. ಇವರ ಮಾತುಗಳು ಬುಲ್‌ಶಿಟ್‌ ಎಂದೇ ಹೇಳಬಹುದುʼʼ‌ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha Ruth Prabhu:  ಸ್ವಿಮ್ ಸೂಟ್ ನಲ್ಲಿ ಹಾಟ್‌ ಪೋಸ್‌ ಕೊಟ್ಟ ಸಮಂತಾ; ಇಲ್ಲಿವೆ ಚಿತ್ರಗಳು

ಈ ಟೀಕೆಗಳಿಗೆ ಸಮಂತಾ ಇದುವರೆಗೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ. ಆದರೆ, ಸೆಲೆಬ್ರಿಟಿಗಳು ತಮ್ಮ ಫಾಲೋವರ್ಸ್‌ಗಳಿಗೆ ಆರೋಗ್ಯ ಮಾಹಿತಿಯನ್ನು ಹಂಚಿಕೊಳ್ಳುವಾಗ ಜವಾಬ್ದಾರಿಯತವಾಗಿರಬೇಕು ಎಂದು ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು. ಇದೀಗ ಈ ವಿವಾದವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Exit mobile version