ಬೆಂಗಳೂರು: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಆಗಾಗ ತಮ್ಮ ಫಿಟ್ನೆಸ್ ಜರ್ನಿ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮ ತೂಕದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹಚ್ಚ ಹಸಿರಿನ ಮಧ್ಯೆ ನಟಿ ಬೆಳ್ಳಂಬೆಳಗ್ಗೆಯೇ ವರ್ಕೌಟ್ ಮಾಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ.
“ಬೆಳಗಿನ ಸೂರ್ಯನನ್ನು ನೋಡುವುದು… ಅತ್ಯುತ್ತಮ ರೀತಿಯ ಮುಂಜಾನೆ, ”ಎಂದು ಸಮಂತಾ ಬರೆದಿದ್ದಾರೆ. ಅವರ ದೇಹದ ತೂಕ ಈಗ 50.1 ಕೆಜಿಯಂತೆ. 36 ವರ್ಷದ ಅವರ ಮೆಟಾಬಾಲಿಕ್ ಏಜ್ 23 ಎಂಬುದನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರ ದೇಹದಲ್ಲಿ 12 ಕೆಜಿ ಫ್ಯಾಟ್ ಮಾಸ್ ಇದೆಯಂತೆ. ಮಸಲ್ ಮಾಸ್ 35.9 ಕೆಜಿ, ಬೋನ್ ಮಾಸ್ 2.2 ಕೆಜಿ ಎಂಬುದನ್ನು ಸಮಂತಾ ವಿವರಿಸಿದ್ದಾರೆ.
ಸಮಂತಾ ಇತ್ತೀಚೆಗೆ ಪಾಡ್‌ಕಾಸ್ಟ್ ಮೂಲಕ ಮತ್ತೆ ಕೆಲಸಕ್ಕೆ ಕಮ್‌ಬ್ಯಾಕ್ ಆಗುತ್ತೇನೆ ಎಂದಿದ್ದರು. ಅದರಂತೆ ಪಾಡ್‌ಕಾಸ್ಟ್ ಕಾರ್ಯಕ್ರಮ ಆರಂಭಿಸಿದ್ದರು. ಸಮಂತಾ ಯುಟ್ಯೂಬ್ ಚಾನೆಲ್‌ನಲ್ಲಿ ಮೊದಲ ಎಪಿಸೋಡ್ ಹಂಚಿಕೊಂಡಿದ್ದಾರೆ. 2022ರಲ್ಲಿ ಸಮಂತಾ ಸಿನಿಮಾದಿಂದ ಬ್ರೇಕ್ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಆದರೆ ಆ ಬಳಿಕ ನಿಲುವು ಬದಲಿಸಿದ್ದರು. ಸಮಂತಾ ಮುಂದೆ ನಿರ್ದೇಶಕ ರಾಜ್ ಮತ್ತು ಡಿಕೆ ಅವರ ‘ಸಿಟಾಡೆಲ್: ಇಂಡಿಯಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರುಣ್ ಧವನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ: Samantha Ruth Prabhu: ನಾಗ ಚೈತನ್ಯ ಜತೆ ಡಿವೋರ್ಸ್ ಪಡೆದ ವರ್ಷ ಅತ್ಯಂತ ಕಷ್ಟಕರವಾಗಿತ್ತು ಎಂದ ಸಮಂತಾ!
ಸಮಂತಾ ಕೊನೆಯ ಬಾರಿಗೆ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಹಿಂದಿಯ ರ್‍ಯಾಪ್ ರಿಯಾಲಿಟಿ ಶೋ ಜಡ್ಜ್ ಹನಿ ಸಿಂಗ್ ಜತೆ ಸಮಂತಾ ವೇದಿಕೆ ಹಂಚಿಕೊಂಡಿದ್ದರು. MTV ರಿಯಾಲಿಟಿ ಶೋನಲ್ಲಿ ಸಮಂತಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬ್ಯಾನರ್ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಪ್ರಾರಂಭಿಸುವುದರೊಂದಿಗೆ, ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಕುರಿತು ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.