ಬೆಂಗಳೂರು: ಸಮಂತಾ ರುತ್ ಪ್ರಭು ಅವರು ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಮೈಯೋಸಿಟಿಸ್ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಅಲ್ಕೇಶ್ ಎನ್ನುವವರೊಂದಿಗೆ ಮಾತುಕತೆ ನಡೆಸಿ ತಮಗಿರುವ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಎದುರಿಸಿದ ವರ್ಷವನ್ನು ನೆನಸಿಕೊಳ್ಳುತ್ತೇನೆ. ‘ಅತ್ಯಂತ ಕಷ್ಟಕರವಾದ ವರ್ಷʼ ಅದಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಜತೆಗೆ ಅದೇ ವರ್ಷ ಸಮಂತಾ ಅವರು ನಾಗ ಚೈತನ್ಯ ಜತೆ ಡಿವೋರ್ಸ್ ಪಡೆದುಕೊಂಡಿದ್ದರು.
ಸಮಂತಾ ಇತ್ತೀಚೆಗೆ ಪಾಡ್‌ಕಾಸ್ಟ್ ಮೂಲಕ ಮತ್ತೆ ಕೆಲಸಕ್ಕೆ ಕಮ್‌ಬ್ಯಾಕ್ ಆಗುತ್ತೇನೆ ಎಂದಿದ್ದರು. ಅದರಂತೆ ಪಾಡ್‌ಕಾಸ್ಟ್ ಕಾರ್ಯಕ್ರಮ ಆರಂಭಿಸಿದ್ದಾರೆ. ಸಮಂತಾ ಯುಟ್ಯೂಬ್ ಚಾನೆಲ್‌ನಲ್ಲಿ ಮೊದಲ ಎಪಿಸೋಡ್ ಹಂಚಿಕೊಂಡಿದ್ದಾರೆ. ಅಲ್ಕೇಶ್ ಅವರ ಜತೆ ಮಾತುಕತೆ ನಡೆಸಿದ್ದಾರೆ.
ಸಮಂತಾ ಮಾತನಾಡಿ, ” ಈ ಸಮಸ್ಯೆಯನ್ನು ಎದುರಿಸುವ ಹಿಂದಿನ ವರ್ಷವನ್ನು ನಾನು ಈಗ ನೆನಪಿಸಿಕೊಳ್ಳುತ್ತೇನೆ. ನನಗೆ ಅತ್ಯಂತ ಕಷ್ಟಕರವಾದ ವರ್ಷವಾಗಿತ್ತು. ಕಳೆದ ವರ್ಷದ ಜೂನ್‌ನಲ್ಲಿ ಮುಂಬೈನಿಂದ ಬರುವಾಗ ಕೊನೆಗೂ ನಾನು ನೆಮ್ಮದಿಯಾಗಿದ್ದೇನೆ ಎಂದು ನನ್ನ ಸ್ನೇಹಿತ/ನನ್ನ ಪಾರ್ಟನರ್/ಮ್ಯಾನೇಜರ್ ಹಿಮಾಂಕ್ ಬಳಿ ಹೇಳಿಕೊಂಡಿದ್ದೆ. ಇದಕ್ಕೂ ಮುಂಚೆ ನಾನು ಸ್ವಲ್ಪವೂ ವಿಶ್ರಾಂತಿ ಮತ್ತು ಆರಾಮದಾಯಕವನ್ನು ಅನುಭವಿಸಿರಲಿಲ್ಲ. ಈಗ ನನಗೆ ಉಸಿರಾಡಲು ಸಾಧ್ಯವಾಗಿದೆ. ಕಣ್ತುಂಬ ನಿದ್ದೆ ಮಾಡಬಹುದು, ಕೆಲಸದ ಬಗ್ಗೆ ಗಮನ ಹರಿಸಬಹುದು ಎಂದು ಅಂದಿಕೊಂಡಿದ್ದೆ. ಮೈಯೋಸಿಟಿಸ್‌ಗೆ ಒಳಗಾದೆʼʼ ಎಂದರು.
ಇದನ್ನೂ ಓದಿ: Samantha Ruth Prabhu: ಸಮಂತಾ ಮತ್ತೆ ಮದುವೆ ಆಗ್ತಾರಾ? ಅಭಿಮಾನಿಗೆ ನಟಿಯ ನೇರ ಉತ್ತರ!
ʻʻಈ ಪಾಡ್‌ಕಾಸ್ಟ್ ಮಾಡಲು ಬಯಸಿದ್ದು ಏಕೆಂದರೆ, ಒಂದು ಕೆಟ್ಟ ಅನುಭವವನ್ನು ಅನುಭವಿಸಿ ಹೊರಬಂದೆ. ಈ ಕಾಯಿಲೆ ಜೀವನಪರ್ಯಂತ ಇರುತ್ತದೆ. ಅದರೊಂದಿಗೆ ಬದುಕಬೇಕಿದೆ. ನನ್ನ ಅನುಭವ ಹಂಚಿಕೊಳ್ಳಲು ಆರಂಭಿಸಿದ ಕಾರ್ಯಕ್ರಮ ಇದುʼʼ ಎಂದು ಹೇಳಿಕೊಂಡಿದ್ದಾರೆ.
2022ರಲ್ಲಿ ಸಮಂತಾ ಸಿನಿಮಾದಿಂದ ಬ್ರೇಕ್ ಪಡೆಯುತ್ತಿರುವುದಾಗಿ ಘೋಷಿಸಿದರು. ನಟಿ ಮುಮದೆ ನಿರ್ದೇಶಕ ರಾಜ್ ಮತ್ತು ಡಿಕೆ ಅವರ ‘ಸಿಟಾಡೆಲ್: ಇಂಡಿಯಾ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರುಣ್ ಧವನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.