Site icon Vistara News

Actor Chiranjeevi: ಚಿರಂಜೀವಿ ಭೇಟಿ ಮಾಡಿದ ʻಅನಿಮಲ್‌ʼ, ʻದಸರಾʼ ನಿರ್ದೇಶಕರು!

Sandeep Reddy Vanga meets Padma Vibhushan awardee Chiranjeevi

ಬೆಂಗಳೂರು: ಗಣರಾಜ್ಯೋತ್ಸವದ ಮುನ್ನಾ ದಿನ ಗುರುವಾರ (ಜ.25) ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ (Actor Chiranjeevi), ಕಲಾವಿದೆ ವೈಜಯಂತಿಮಾಲಾ ಬಾಲಿ, ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು (Venkaiah Naidu) ಅವರಿಗೆ ʻಪದ್ಮ ವಿಭೂಷಣʼ ಪ್ರಶಸ್ತಿ ಸಂದಿದೆ.  ಈ ಸಂದರ್ಭದಲ್ಲಿ ಚಿರಂಜೀವಿ ಅವರನ್ನು ಅಭಿನಂದಿಸಲು, ‘ಅನಿಮಲ್‌’ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಮತ್ತು ‘ದಸರಾ’ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರ ಹೈದರಾಬಾದ್ ನಿವಾಸಕ್ಕೆ ಭೇಟಿ ನೀಡಿದ್ದರು. ಇದೀಗ ಭೇಟಿ ಕೊಟ್ಟ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಾಗಿ ಚಿರಂಜೀವಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ಸಂದೀಪ್‌ ರೆಡ್ಡಿ ವಾಂಗ ಅವರನ್ನು ಅಭಿನಂದಿಸಿದರು. ಇದೀಗ ಈ ಫೋಟೊ ವೈರಲ್‌ ಆಗಿದೆ. ಫೋಟೋದಲ್ಲಿ, ಚಿರಂಜೀವಿ ಬೂದು ಬಣ್ಣದ ಶರ್ಟ್ ಧರಿಸಿದ್ದರೆ, ಸಂದೀಪ್ ಮತ್ತು ಶ್ರೀಕಾಂತ್ ಅವರ ಮುಂದೆ ಕುಳಿತಿದ್ದಾರೆ.

ರಾಮ್ ಚರಣ್ ಅವರು ತಂದೆ ಚಿರಂಜೀವಿಯನ್ನು ಅಭಿನಂದಿಸಿದ್ದರು. “ಪ್ರತಿಷ್ಠಿತ ‘ಪದ್ಮ ವಿಭೂಷಣ’ ಸಿಕ್ಕಿದ್ದಕ್ಕೆ ಅಭಿನಂದನೆಗಳು. ಭಾರತೀಯ ಚಿತ್ರರಂಗ ಮತ್ತು ಸಮಾಜಕ್ಕೆ ನಿಮ್ಮ ಕೊಡುಗೆ, ನನಗೆ, ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಸ್ಫೂರ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಗೌರವ ಮತ್ತು ಮನ್ನಣೆಗಾಗಿ ಭಾರತ ಸರ್ಕಾರ ಮತ್ತು ನರೇಂದ್ರ ಮೋದಿಜೀ ಅವರಿಗೆ ಕೃತಜ್ಞತೆಗಳು. ಅರ್ಹವಾದ ಗೌರವ ʻಮೆಗಾಸ್ಟಾರ್ ಪದ್ಮವಿಭೂಷಣʼ ಚಿರಂಜೀವಿ ಅವರಿಗೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Chiranjeevi: ನಟ ಚಿರಂಜೀವಿಗೆ ʻಪದ್ಮ ವಿಭೂಷಣʼ ಪ್ರಶಸ್ತಿ; ಧನ್ಯವಾದ ತಿಳಿಸಿದ ನಟ!

150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2006ರಲ್ಲಿಯೇ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ʻಪದ್ಮ ವಿಭೂಷಣʼ ಗೌರವ ದೊರಕಿದೆ. ಚಿರಂಜೀವಿ ಅವರು 160ಕ್ಕೂ ಹೆಚ್ಚು ಚಿತ್ರಗಳಲ್ಲಿ (ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಸೇರಿದಂತೆ) ಕೆಲಸ ಮಾಡಿದ ಅತ್ಯಂತ ಯಶಸ್ವಿ ನಟರಲ್ಲಿ ಚಿರಂಜೀವಿ ಕೂಡ ಒಬ್ಬರು. 2006ರಲ್ಲಿ, ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಇದು ಅವರ ಎರಡನೇ ಪದ್ಮ ಪ್ರಶಸ್ತಿಯಾಗಿದೆ. ಬಿಂಬಿಸಾರ ಖ್ಯಾತಿಯ ವಸಿಷ್ಠ ನಿರ್ದೇಶನದ ʻವಿಶ್ವಂಭರʼ ಚಿತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.

Exit mobile version