ಬೆಂಗಳೂರು: ಸಪ್ತಮಿ ಗೌಡ ʻಕಾಂತಾರʼ ಸಿನಿಮಾ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರ ಆದವರು. ಇದಾದ ಬಳಿಕ ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್ (Yuva Rajkumar) ಅಭಿನಯದ ಯುವ ‘ಯುವ’ ಸಿನಿಮಾದಲ್ಲಿ ಸಪ್ತಮಿ ಗೌಡ (Sapthami Gowda) ಅವರು ನಾಯಕಿಯಾಗಿ ನಟಿಸಿದರು. ಇದೀಗ ನಟಿ ತೆಲುಗು ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ , ʻಪಾಪ್ ಕಾರ್ನ್ ಮಂಕಿ ಟೈಗರ್ʼ, ʻಕಾಂತಾರʼʻ ಯುವʼ ಹೀಗೆ ಮೂರು ಕನ್ನಡ ಸಿನಿಮಾಗಳನ್ನು ಮಾಡಿರುವ ಸಪ್ತಮಿ ಗೌಡ, ಇದೀಗ ತೆಲುಗು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. `ಜಯಂ’ ಸಿನಿಮಾ ಹೀರೊ ನಿತಿನ್ (Nithiin) ಅವರ ಮುಂದಿನ ಚಿತ್ರ ʻತಮ್ಮುಡುʼದಲ್ಲಿ (Thammudu) ಸಪ್ತಮಿ ಗೌಡ ಹೀರೊಯಿನ್.
ಟಾಲಿವುಡ್ ಎಂಟ್ರಿ ಬಗ್ಗೆ ನಟಿ (Sapthami Gowda) ಯುವ ಸಕ್ಸೆಸ್ ಮೀಟ್‌ನಲ್ಲಿಯೂ ಹಂಚಿಕೊಂಡಿದ್ದರು. ʻʻನಿತಿನ್ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಶೂಟಿಂಗ್ ಕೂಡ ಶುರವಾಗಿದೆʼʼಎಂದಿದ್ದಾರೆ. ಈ ಸಿನಿಮಾಗಾಗಿ ಸಪ್ತಮಿ ಗೌಡ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಆಗಿದ್ದಾರೆ. ಈ ಚಿತ್ರಕ್ಕಾಗಿ ಕುದುರೆ ಸವಾರಿಯನ್ನೂ ಕಲಿತಿದ್ದಾರೆ. ಪಾತ್ರದ ಬಗ್ಗೆ ನಟಿ ಹೆಚ್ಚೇನೂ ರಿವೀಲ್ ಮಾಡಿಲ್ಲ.
ಇದನ್ನೂ ಓದಿ: Sapthami Gowda: ʻಯುವʼ ಸಿನಿಮಾದಲ್ಲಿನ ಪಾತ್ರ ಬಹಿರಂಗ ಪಡಿಸಿದ ಹೊಂಬಾಳೆ; ಇದು ಸಪ್ತಮಿ ಗೌಡ ಬರ್ತಡೇ ಸ್ಪೆಷಲ್!
ʼತಮ್ಮಡುʼ ಸಿನಿಮಾಗೆ ಶ್ರೀರಾಮ್ ವೇಣು ನಿರ್ದೇಶನವಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನಿರ್ಮಿಸುತ್ತಿರುವ 56ನೇ ಸಿನಿಮಾ ಇದು. ʻದಿಲ್’ ಮತ್ತು “ಶ್ರೀನಿವಾಸ ಕಲ್ಯಾಣ’ ಚಿತ್ರಗಳ ನಂತರ, ನಿತಿನ್ ಮೂರನೇ ಬಾರಿಗೆ ದಿಲ್ ರಾಜು ಜತೆ ಕೈಜೋಡಿಸುತ್ತಿದ್ದಾರೆ.
ʻಕಾಂತಾರಾʼ ಪ್ರೀಕ್ವೆಲ್ನಲ್ಲಿ ಸಪ್ತಮಿ ಗೌಡ ಇಲ್ಲ!
ಕಾಂತಾರ ಮೊದಲ ಭಾಗದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ರಿಷಬ್ ಜತೆಗೆ ಅವರ ಪಾತ್ರಕ್ಕೂ ಮೆಚ್ಚುಗೆ ಲಭ್ಯವಾಗಿತ್ತು. ಚಾಪ್ಟರ್ 1ರಲ್ಲಿ ಅವರು ಅಭಿನಯಿಸಲಿದ್ದಾರಾ ಎನ್ನುವ ಪ್ರಶ್ನೆಗೆ ಮಾಧ್ಯಮವೊಂದರಲ್ಲಿ ನೀಡಿದ್ದರು.
ʻʻಕಾಂತಾರ: ಚಾಪ್ಟರ್ 1’ನಲ್ಲಿ ನಾನು ನಟಿಸುತ್ತಿಲ್ಲ. ಈಗ ಆಗುತ್ತಿರುವುದು ಪ್ರೀಕ್ವೆಲ್. ಪಾತ್ರವೇ ಇಲ್ಲ ಎಂದಾಗ ನಟಿಸುವುದು ಹೇಗೆ? ಆ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ. ʻಕಾಂತಾರʼ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆದರೂ ಈಗಲೂ ಅದರ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪ್ರೀಕ್ವೆಲ್ ಕೂಡ ಚೆನ್ನಾಗಿ ಮೂಡಿ ಬರಲಿದೆʼʼಎಂದು ಹೇಳಿದ್ದರು. ಈಗಾಗಲೇ ಸಪ್ತಮಿ ಗೌಡ ಹಿಂದಿಯಲ್ಲಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ವಿಜ್ಞಾನಿಯ ಪಾತ್ರ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.