ಬೆಂಗಳೂರು: ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನಪ್ರಿಯ ನಟ ಸಯಾಜಿ ಶಿಂಧೆ (Sayaji Shinde ) ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಏಪ್ರಿಲ್ 11 ರಂದು ಸತಾರಾದಲ್ಲಿರುವ ಪ್ರತಿಭಾ ಆಸ್ಪತ್ರೆಗೆ ದಾಖಲಾಗಿದ್ದರು. ವರದಿಗಳ ಪ್ರಕಾರ ಹೃದಯದಲ್ಲಿ ಬ್ಲಾಕೇಜ್ ಆಗಿದೆ ಎನ್ನಲಾಗಿದೆ. ಸಯಾಜಿ ಆ್ಯಂಜಿಯೋಪ್ಲಾಸ್ಟಿ (Emergency Angioplasty) ಮಾಡಿಸಿಕೊಂಡಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ನಟ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು “ಹಾಯ್, ನಾನು ಚೆನ್ನಾಗಿದ್ದೇನೆ. ನನ್ನನ್ನು ಪ್ರೀತಿಸುವ ಎಲ್ಲ ಅಭಿಮಾನಿಗಳಿಗೆ, ನನ್ನೊಂದಿಗಿರುವ ಹಿತೈಷಿಗಳಿಗೆ ಹೇಳುವುದೇನೆಂದರೆ, ನೀವು ಆತಂಕ ಪಡುವ ಅಗತ್ಯವಿಲ್ಲ., ಧನ್ಯವಾದಗಳು”.ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು “ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿʼʼಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʻʻಶೀಘ್ರವಾಗಿ ಚೇತರಿಕೆ ಕಾಣಿರಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಸಯಾಜಿ ಶಿಂಧೆ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Akshay Kumar: ಅಕ್ಷಯ್ ಕುಮಾರ್-ಟೈಗರ್ ಶ್ರಾಫ್ ಸಿನಿಮಾಗೆ ಹೀನಾಯ ಸೋಲು! ಕಲೆಕ್ಷನ್ ಎಷ್ಟು?
Sayaji Shinde had heart surgery last night at the hospital at Satara. Wishing him speedy recovery 🙏 pic.twitter.com/TTiOiaCLvD
— Shikha Dhariwal (@ShikhaaDhariwal) April 12, 2024
ಸಯಾಜಿ ಶಿಂಧೆ ಅವರು ಶೂಲ್, ಸಿಂಗಂ, ನೆನೊಕ್ಕಡಿನ್, ಮತ್ತು ಆಂಟಿಮ್: ದಿ ಫೈನಲ್ ಟ್ರುತ್ (Antim: The Final Truth) ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಟ ಕೊನೆಯದಾಗಿ ನೆಟ್‌ಫ್ಲಿಕ್ಸ್ ವೆಬ್ ಸಿರೀಸ್ ʻಕಿಲ್ಲರ್ ಸೂಪ್ʼನಲ್ಲಿ ಮನೋಜ್ ಬಾಜ್‌ಪೇಯಿ ಮತ್ತು ಕೊಂಕಣ ಸೇನ್ ಶರ್ಮಾ ಅವರೊಂದಿಗೆ ಕಾಣಿಸಿಕೊಂಡರು. ನಟ ಕಮಿಟ್‌ಮೆಂಟ್: 60 ಅವರ್ಸ್ (Commitment: 60 Hours), ಮಾ ನನ್ನ ಸೂಪರ್‌ಹೀರೊ, ಸ್ಟ್ರಗ್ಲರ್ 2023, ವೈರಲ್ ಗರ್ಲ್ಸ್, ಸತ್ಯಂ, ಆಮ್‌ದರ್ ನಿವಾಸ್ ಮತ್ತು ಸುಸಾತ್ ಸೇರಿದಂತೆ ಕೆಲವು ಸಿನಿಮಾಗಳ ನಟನ ಕೈಯಲ್ಲಿವೆ.
ಸಯಾಜಿ ಶಿಂಧೆ ಹಿಂದಿ, ಮರಾಠಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹೆಚ್ಚಾಗಿ ಖಳ ನಾಯಕನ ಪಾತ್ರವನ್ನೇ ನಿಭಾಯಿಸುತ್ತಿದ್ದರು.