Site icon Vistara News

Actor Sharwanand: ಹೆಣ್ಣು ಮಗುವಿಗೆ ತಂದೆಯಾದ ನಟ ಶರ್ವಾನಂದ್


ಟಾಲಿವುಡ್ ನಟ ಶರ್ವಾನಂದ್ (Sharwanand) ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಶರ್ವಾನಂದ್ ಪತ್ನಿ ರಕ್ಷಿತಾ ರೆಡ್ಡಿ (Rakshitha Reddy) ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಾರ್ಚ್ 6 ಶರ್ವಾನಂದ್ ಹುಟ್ಟುಹಬ್ಬವಾಗಿದ್ದು, ಮಗಳ ಆಗಮನದ ಬಗ್ಗೆ ಸ್ಪೆಷಲ್ ಫೋಟೊ ಹಂಚಿಕೊಂಡಿದ್ದಾರೆ.

‘ಲೀಲಾ ದೇವಿ ಮೈನೇನಿ’ ಎಂದು ಮಗಳಿಗೆ ಹೆಸರಿಟ್ಟಿರೋದಾಗಿ ನಟ ರಿವೀಲ್ ಮಾಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಪತ್ನಿ ರಕ್ಷಿತಾ ರೆಡ್ಡಿ ಮಗಳ ಕಾಲು ಹಿಡಿದುಕೊಂಡಿರುವ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: Actor Sharwanand: ನಟ ಶರ್ವಾನಂದ್ ಮದುವೆಯ ಆನಂದದ ಫೋಟೊಗಳು

ಜೂನ್ 3ರಂದು ರಾಜಸ್ಥಾನದ ಜೈಪುರದಲ್ಲಿ ರಕ್ಷಿತಾ ರೆಡ್ಡಿಯೊಂದಿಗೆ ಶರ್ವಾನಂದ್ ಅದ್ಧೂರಿ ಮದುವೆ ನಡೆದಿತ್ತು.

ರನ್ ರಾಜಾ ರನ್, ಎಕ್ಸ್‌ಪ್ರೆಸ್‌ ರಾಜಾ, ಜಾನು, ಮಹಾಸಮುದ್ರಂ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಶರ್ವಾನಂದ್ ನಟಿಸಿದ್ದಾರೆ. 

Exit mobile version