ಬೆಂಗಳೂರು: ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Hassan) ಅವರ ಪುತ್ರಿ ನಟಿ ಶ್ರುತಿ ಹಾಸನ್ (Shruti Haasan) ಪ್ರಿಯತಮ ಶಂತನು ಹಜಾರಿಕಾ (santanu hazarika) ಜತೆ ಬ್ರೇಕಪ್ ಮಾಡಿಕೊಂಡಿರುವ ವಿಚಾರ ಗೊತ್ತೇ ಇದೆ. ಇದೀಗ ಅಭಿಮಾನಿಯೊಬ್ಬ, ನಿಮ್ಮ ಮದುವೆ (Wedding) ಯಾವಾಗ ಎಂದಿದ್ದಕ್ಕೆ ನಟಿ ಗರಂ ಆಗಿದ್ದಾರೆ. ಖಡಕ್ ಆಗಿ ಶ್ರುತಿ ಉತ್ತರ ನೀಡಿದ್ದಾರೆ. ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.
ನಟಿ ಶ್ರುತಿ ಹಾಸನ್, ತಮ್ಮ ದೀರ್ಘಕಾಲದ ಗೆಳೆಯ ಶಂತನು ಹಜಾರಿಕಾ ಅವರೊಂದಿಗೆ ಬ್ರೇಕಪ್ ಮಾಡಿಕೊಂಡು ಕೆಲವು ತಿಂಗಳುಗಳಾಗಿವೆ. ಇದರ ಹೊರತಾಗಿಯೂ, ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಇನ್‌ಸ್ಟಾದಲ್ಲಿ ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ ನಟಿ. ಈ ವೇಳೆ ಹಲವರು ನಟಿಗೆ ಮಾದುವೆ ಯಾವಾಗ? ಎಬ ಪ್ರಶ್ನೆ ಇಟ್ಟಿದ್ದಾರೆ. ಅದಕ್ಕೆ ನಟಿ, ಇದು 2024 ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮದುವೆ ಯಾವಾಗ ಆಗ್ತೀರಾ ಎಂದು ಕೇಳಿದ್ದಾರೆ. ʻನಾನು ಮದುವೆ ಆಗುವುದಿಲ್ಲ ಎಂದು ಖಡಕ್ ಆಗಿ ಕಮಲ್ ಹಾಸನ್ (Kamal Haasan) ಪುತ್ರಿ ಉತ್ತರಿಸಿದ್ದಾರೆ. ಈ ಮೂಲಕ ನಾನು ಸಿಂಗಲ್ ಆಗಿಯೇ ಇರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Shruti Haasan: ಎರಡನೇ ಬಾಯ್‌ಫ್ರೆಂಡ್ ನಿಂದಲೂ ಕಮಲ್ ಹಾಸನ್ ಪುತ್ರಿ ಬ್ರೇಕಪ್?
ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು.ಶ್ರುತಿ ಹಾಸನ್ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆಗಾಗ ಶ್ರುತಿ ಹಾಸನ್ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಿದ್ದರು. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್ ಅಂತೆ. ಸಲಾರ್ (Salaar) ಬಳಿಕ ಸಲಾರ್ 2, ಡಕಾಯಿತ್, ಚೆನ್ನೈ ಸ್ಟೋರಿ ಸಿನಿಮಾಗಳಲ್ಲಿ ಶ್ರುತಿ ಹಾಸನ್ ಬ್ಯುಸಿಯಾಗಿದ್ದಾರೆ.