Site icon Vistara News

Sobhita Dhulipala: ಯುರೋಪ್‌ನಲ್ಲಿ ಜತೆಯಾಗಿ ಕಂಡ ನಾಗ ಚೈತನ್ಯ-ಶೋಭಿತಾ ಧೂಲಿಪಾಲ!

Sobhita Dhulipala Naga Chaitanya in Europe

ಬೆಂಗಳೂರು: ತೆಲುಗು ಸ್ಟಾರ್ ನಾಗ ಚೈತನ್ಯ (Naga Chaitanya) ಮತ್ತು ಬಾಲಿವುಡ್ ನಟಿ ಶೋಭಿತಾ ಧೂಲಿಪಾಲ (Sobhita Dhulipala ) ಅವರ ಡೇಟಿಂಗ್ ವದಂತಿಗಳು ಮತ್ತೊಮ್ಮೆ ಗಮನ ಸೆಳೆದಿವೆ. ಇದೀಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊ ವೈರಲ್‌ ಆಗಿದೆ. ಯುರೋಪ್‌ನಲ್ಲಿ ಜೋಡಿ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದೆ.

ವರದಿಗಳ ಪ್ರಕಾರ ಜೋಡಿ ಯುರೋಪ್‌ ವಕೇಶನ್‌ಗೆ ಹೋಗಿತ್ತು ಎನ್ನಲಾಗಿದೆ. ಇತ್ತೀಚಿನ ಸಂದರ್ಶನದಲ್ಲಿ, ಶೋಭಿತಾ ಧೂಲಿಪಾಲ ಅವರನ್ನು ನಾಗ ಚೈತನ್ಯ ಅವರನ್ನು ಪ್ರೀತಿಸುತ್ತಿದ್ದೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಟಿ ಉತ್ತರಿಸಿ ʻʻನಾನು ಯಾವಾಗಲೂ ಪ್ರೀತಿಸುತ್ತೇನೆʼʼ ಎಂದು ಹೇಳಿದ್ದರು.

ಈ ಮುಂಚೆ ಈ ಜೋಡಿ ಲಂಡನ್‌ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿಯೂ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೊ ವೈರಲ್ ಆಗಿತ್ತು. ಆ ಫೋಟೊಗಳು ಡೇಟಿಂಗ್ ವದಂತಿಗೆ ಪುಷ್ಟಿ ನೀಡಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ, ಇದು ಫೇಕ್ ಎನ್ನುವ ಮಾತು ಕೇಳಿ ಬಂದಿತ್ತು.

ಇದನ್ನೂ ಓದಿ: Cannes 2024: ಆಸ್ಕರ್‌ ಪ್ರಶಸ್ತಿಯ ಆಕಾರದಂತೆ ಕಂಡ ಶೋಭಿತಾ ಧೂಲಿಪಾಲ!

Naga Chaitanya and Sobhita spotted in Europe at a wine tasting few days ago 🍷👀
byu/Eternal-Wisdom-9999 inBollyBlindsNGossip

ಇದನ್ನೂ ಓದಿ: Kannada New Movie: ವಿಜಯ್‌ ರಾಘವೇಂದ್ರ “ಗ್ರೇ ಗೇಮ್ಸ್” ಸಿನಿಮಾ ಗೆಲುವು

ಶೋಭಿತಾ ಧೂಲಿಪಾಲ ಯಾರು?

ಆಂಧ್ರ ಪ್ರದೇಶದ ಶೋಭಿತಾ ಧೂಲಿಪಾಲ ಅವರು ಮಾಡೆಲ್ ಆಗಿದ್ದವರು. ಇಲ್ಲಿಯವರೆಗೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಶೋಭಿತಾ 2016ರಲ್ಲಿ ರಮನ್ ರಾಘವ್ 2.0 ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಗೂಢಚಾರಿ, ದಿ ಬಾಡಿ, ಘೋಸ್ಟ್ ಸ್ಟೋರೀಸ್, ಕುರುಪ್, ಮೇಜರ್ ಮುಂತಾದ ಸಿನಿಮಾಗಳಲ್ಲಿ ಶೋಭಿತಾ ಧೂಲಿಪಾಲ ನಟಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್: 1, ಸಿತಾರಾ, ಮಂಕಿ ಮ್ಯಾನ್ ಸಿನಿಮಾಗಳಲ್ಲಿಯೂ ಶೋಭಿತಾ ನಟಿಸಿದ್ದು, ಅವುಗಳು ರಿಲೀಸ್ ಆಗಬೇಕಿವೆ. 2013ರಲ್ಲಿ ಫೇಮಿನಾ ಮಿಸ್‌ ಇಂಡಿಯಾ ಅವಾರ್ಡ್‌ ಕೂಡ ಪಡೆದಿದ್ದಾರೆ. ಶೋಭಿತಾ ಧೂಲಿಪಾಲ ಕೊನೆಯದಾಗಿ ದೇವ್ ಪಟೇಲ್ ಅವರ ಆಕ್ಷನ್-ಥ್ರಿಲ್ಲರ್ ಮಂಕಿ ಮ್ಯಾನ್‌ನಲ್ಲಿ ಕಾಣಿಸಿಕೊಂಡಿದ್ದರು.

Exit mobile version