Site icon Vistara News

SS Rajamouli: ʻಬಾಹುಬಲಿ: ಕ್ರೌನ್ ಆಫ್ ಬ್ಲಡ್ʼ ಸಿರೀಸ್‌ ಅನೌನ್ಸ್‌ ಮಾಡಿದ ರಾಜಮೌಳಿ!

SS Rajamouli Announces Baahubali Crown of Blood Animated Series

ಬೆಂಗಳೂರು: ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಅವರು ತಮ್ಮ ಹೊಸ ಸಿರೀಸ್‌ ʻಬಾಹುಬಲಿ: ಕ್ರೌನ್ ಆಫ್ ಬ್ಲಡ್ʼ ( Baahubali Crown of Blood Animated Series) ಅನ್ನು ಮಂಗಳವಾರ (ಏ.30) ಘೋಷಿಸಿದರು. ಶೀಘ್ರದಲ್ಲೇ ಟ್ರೈಲರ್‌ ಬಿಡುಗಡೆಯಾಗಲಿದೆ ಎಂದು ರಾಜಮೌಳಿ ಅವರು ಖಚಿತಪಡಿಸಿದ್ದಾರೆ. ಟೈಟಲ್‌ ಜತೆಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಅನಿಮೇಟೆಡ್ ಸೀರಿಸ್. ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಎಂದು ಸರಣಿಗೆ ಹೆಸರಿಡಲಾಗಿದೆ. ರಿಲೀಸ್ ಮಾಡಿದ ವಿಡಿಯೋದ ಹಿನ್ನೆಲೆಯಲ್ಲಿ ʻಬಾಹುಬಲಿ.. ಬಾಹುಬಲಿʼ ಎಂಬ ಘೋಷ ಕೇಳುತ್ತಿದೆ.

ವಿಡಿಯೊದಲ್ಲಿ, ದೃಶ್ಯಗಳೊಂದಿಗೆ, ರಾಜಮೌಳಿ ಬರೆದಿದ್ದಾರೆ, “ಮಾಹಿಷ್ಮತಿಯ ಜನರು ಅವನ ಹೆಸರನ್ನು ಜಪಿಸಿದಾಗ, ಬ್ರಹ್ಮಾಂಡದ ಯಾವುದೇ ಶಕ್ತಿಯು ಅವನನ್ನು ಹಿಂತಿರುಗಿವುಕೆಯನ್ನು ತಡೆಯಲು ಸಾಧ್ಯವಿಲ್ಲ. ಬಾಹುಬಲಿ: ಕ್ರೌನ್ ಆಫ್ ಬ್ಲಡ್, ಆನಿಮೇಟೆಡ್ ಸಿರೀಸ್‌ ಟ್ರೈಲರ್‌ ಶೀಘ್ರದಲ್ಲೇ ಬರಲಿದೆ!ʼಎಂದು ಬರೆದುಕೊಂಡಿದ್ದಾರೆ. ರಾಜಮೌಳಿ ಅವರೇ ಇದನ್ನು ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಇದು ‘ಬಾಹುಬಲಿ’ ಸಿನಿಮಾ ಕಥೆಯನ್ನೇ ಹೊಂದಿರಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಬಾಹುಬಲಿಗೆ ಅನಿಮೇಟೆಡ್ ಸ್ಪಿನ್ ನೀಡಿರುವುದು ಇದೇ ಮೊದಲಲ್ಲ. 2017 ರಲ್ಲಿ, ರಾಜಮೌಳಿ ʻಬಾಹುಬಲಿ: ದಿ ಲಾಸ್ಟ್ ಲೆಜೆಂಡ್ಸ್; ಎಂಬ ಶೀರ್ಷಿಕೆಯ ನಾಲ್ಕು-ಋತುವಿನ ಅನಿಮೇಟೆಡ್ ಸರಣಿಯನ್ನು ಬಿಡುಗಡೆ ಮಾಡಿದರು. ಸರಣಿಯನ್ನು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: SS Rajamouli: ಹೆಂಡತಿ ಜತೆ ರಾಜಮೌಳಿ ಲವ್ಲಿ ಡ್ಯೂಯೆಟ್‌! ನೀವೆ ನೋಡಿ ಈ ಜೋಡಿಯ ಡ್ಯಾನ್ಸ್‌!

ಬಾಹುಬಲಿ ಬಿಡುಗಡೆಯ ನಂತರ ಭಾರತದಲ್ಲಿ ಮಾತ್ರವಲ್ಲದೆ ಜಪಾನ್, ಚೀನಾ ಮತ್ತು ಪ್ರಮುಖ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಲವಾರು ದಾಖಲೆಗಳನ್ನು ಮುರಿದಿದೆ. ಬಾಹುಬಲಿ 2 ಅನ್ನು ಎಸ್‌ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ. ದೇಶೀಯ ಬಾಕ್ಸ್ ಆಫೀಸ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ, ಬಾಹುಬಲಿ 2 ಈಗಾಗಲೇ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣನ್, ಸತ್ಯರಾಜ್ ಮತ್ತು ನಾಸರ್ ಸೇರಿದಂತೆ ಪ್ರತಿಭಾವಂತ ನಟರನ್ನು ಒಳಗೊಂಡಿತ್ತು ಬಾಹುಬಲಿ ಸಿನಿಮಾ.

‘ಆರ್​ಆರ್​ಆರ್​’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ರಾಜಮೌಳಿ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರ ಮುಂದಿನ ಸಿನಿಮಾ ಮಹೇಶ್ ಬಾಬು ಜತೆ. ಈ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: SS Rajamouli: ಜಪಾನ್‌ ಭೂಕಂಪದಲ್ಲಿ ಬದುಕುಳಿದ ರಾಜಮೌಳಿ, ಮಗ ಕಾರ್ತಿಕೇಯ!

ಟಾಲಿವುಡ್‌ ನಟ ಮಹೇಶ್‌ ಬಾಬು (Mahesh Babu) ಹಾಗೂ ನಿರ್ದೇಶಕ ರಾಜಮೌಳಿ (SS Rajamouli) ಅವರು ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫಿಕ್ಸ್‌ ಆಗಿಲ್ಲ. 2022ರಲ್ಲಿ ತೆರೆಕಂಡ ʼಆರ್‌.ಆರ್‌.ಆರ್‌.ʼ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶನದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಅವರು ಈ ಚಿತ್ರಕ್ಕಾಗಿಯೇ ಹಲವು ವರ್ಷಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ. ದಾಖಲೆ ಬರೆದ ʼಬಾಹುಬಲಿʼ, ʼಬಾಹುಬಲಿ 2ʼ, ʼಆರ್‌.ಆರ್‌.ಆರ್‌.ʼ ಮುಂತಾದ ಸಿನಿಮಾಗಳಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್‌ ಅವರೇ ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದ ಬರವಣಿಗೆಯಲ್ಲಿ ತೊಡಗಿರುವುದು ನಿರೀಕ್ಷೆ ಹೆಚ್ಚಲು ಮತ್ತೊಂದು ಕಾರಣ. ಇತ್ತೀಚೆಗೆ ತೆರೆಕಂಡ ಮಹೇಶ್‌ ಬಾಬು ಅಭಿನಯದ ʼಗುಂಟೂರು ಖಾರಂʼ ಸಿನಿಮಾ ಸಾಧಾರಣ ಗೆಲುವು ದಾಖಲಿಸಿದೆ. ಹೀಗಾಗಿ ಅವರು ʼಎಸ್‌.ಎಸ್‌.ಬಿ.ಎಂ. 29ʼ ಚಿತ್ರದತ್ತ ಗಮನ ಹರಿಸಿದ್ದಾರೆ.

Exit mobile version