ಮುಂಬೈ: ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಅದ್ದೂರಿ ವಿವಾಹದಲ್ಲಿ ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಮತ್ತು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಪಾಲ್ಗೊಂಡಿದ್ದರು. (Sudha Murty) ಅವರ ಜತೆ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸುಧಾ ಮೂರ್ತಿ ಜೊತೆಗಿನ ಫೋಟೊ ಶೇರ್ ಮಾಡಿ, ಈ ಕ್ಷಣವನ್ನು ಎಂದಿಗೂ ಮರೆಯುವುದಿಲ್ಲ ಎಂದು ನಮ್ರತಾ ಶಿರೋಡ್ಕರ್ ಬರೆದುಕೊಂಡಿದ್ದಾರೆ. ಜತೆಗೆ ಸುಧಾ ಮೂರ್ತಿ ಅವರ ಸರಳತೆಗೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಮಾತ್ರವಲ್ಲ ಕೊರಳಲ್ಲಿ ಮಂಗಳ ಸೂತ್ರ ಮಾತ್ರ ಧರಿಸಿ ಸಿಂಪಲ್ ಆಗಿ ಕಂಡಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಸುಧಾ ಮೂರ್ತಿ ಅವರು ವಿವಾಹ ಸಮಾರಂಭದಲ್ಲಿ ನೇರಳೆ ಬಣ್ಣದ ಸೀರೆಯನ್ನು ಧರಿಸಿ, ಕೇವಲ ಮಂಗಳಸೂತ್ರ ಮತ್ತು ಸ್ಮಾರ್ಟ್ ವಾಚ್‌ನೊಂದಿಗೆ ಸಿಂಪಲ್ ಆಗಿ ಬಂದಿದ್ದರು. ಅವರ ಸರಳತೆಗೆ ಹೆಚ್ಚು ಪ್ರಶಂಸೆಯನ್ನು ಗಳಿಸಿದರು. ನಮ್ರತಾ ಶಿರೋಡ್ಕರ್ ಅವರು ಸುಧಾ ಮೂರ್ತಿ ಅವರೊಂದಿಗಿನ ಚಿತ್ರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಈ ಬುದ್ಧಿವಂತ ಮಹಿಳೆಯ ಬಗ್ಗೆ ತುಂಬಾ ಕೇಳಿದ್ದೆ, ಅವರನ್ನು ಭೇಟಿಯಾದ ನಂತರ ನನ್ನ ನಂಬಿಕೆಯು ನಿಜವಾಯಿತು. ರೋಮಾಂಚಕ, ಜೀವನದಲ್ಲಿ ನೀಡಲು ತುಂಬಾ ಪ್ರೀತಿಯಿದೆ ಎನಿಸಿತು ಎಂದು ಮಹೇಶ್ ಬಾಬು ಪತ್ನಿ ನಮ್ರತಾ ಬಣ್ಣಿಸಿದ್ದಾರೆ.
ಇದನ್ನೂ ಓದಿ: Sudha Murty: ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ; ಇದಕ್ಕೆ ಕಾರಣ ಕಾಶಿಯಂತೆ!
ಇನ್ನು ಈ ಫೋಟೊ ವೈರಲ್ ಆಗುತ್ತಿದ್ದಂತೆ ಸುಧಾ ಮೂರ್ತಿ ಅವರನ್ನು ನೆಟ್ಟಿಗರು ಹೊಗಳಿದ್ದಾರೆ. ʻʻಬಿಲಿಯನೇರ್ ಮಹಿಳೆ ಕೇವಲ ಮಂಗಳಸೂತ್ರದೊಂದಿಗೆ ಹಾಜರಾಗುವುದನ್ನು ನೋಡಲು ಖುಷಿ ಆಗುತ್ತೆʼʼಎಂದು ಒಬ್ಬರು ಕಮೆಂಟ್ ಮಾಡಿದರೆ, ʻಸರಳ ಮತ್ತು ವಿನಮ್ರʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ʻಸ್ಫೂರ್ತಿದಾಯಕ ಮಹಿಳೆ. ಶೋ-ಆಫ್ ಇಲ್ಲʼʼಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ತಮ್ಮ ಸರಳತೆಯಿಂದಲೇ ಸುದ್ದಿಯಲ್ಲಿರುವ ರಾಜ್ಯಸಭೆಯ ನೂತನ (Rajya Sabha) ಸದಸ್ಯೆ (MP), ಲೇಖಕಿ, ಇನ್ಫೋಸಿಸ್‌ನ ಸಂಸ್ಥಾಪಕ (Infosys chairman) ನಾರಾಯಣ ಮೂರ್ತಿ (Narayana Murthy) ಅವರ ಪತ್ನಿ ಸುಧಾ ಮೂರ್ತಿ (Sudha Murty) ಅವರು ಕಳೆದ 30 ವರ್ಷಗಳಿಂದ ಒಂದೇ ಒಂದು ಸೀರೆಯನ್ನೂ ಖರೀದಿ ಮಾಡಿಲ್ಲವಂತೆ! ಇತ್ತೀಚಿಗೆ ಅವರು ನೀಡಿರುವ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದರು.
ಇದಕ್ಕೆ ಮುಖ್ಯ ಕಾರಣ ಕಾಶಿಗೆ ಪ್ರವಾಸ ಮಾಡಿರುವುದು ಎಂಬುದಾಗಿ ಅವರು ತಿಳಿಸಿದ್ದರು. ಅಪಾರ ಸಂಪತ್ತು ಇದ್ದರೂ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ತಮ್ಮ ಸರಳವಾದ ಉಡುಗೆ ತೊಡುಗೆಗಳಿಂದ, ಸಾಮಾನ್ಯ ಜೀವನ ಶೈಲಿಯಿಂದ ಎಲ್ಲರಿಗೂ ಸ್ಫೂರ್ತಿಯಾಗಿದ್ದರು ದಿ ವಾಯ್ಸ್ ಆಫ್ ಫ್ಯಾಶನ್‌ಗೆ ನೀಡಿದ ಸಂದರ್ಶನದಲ್ಲಿ ಸುಧಾ ಮೂರ್ತಿ ಅವರು ಈ ವಿಚಾರವನ್ನು ಹೀಗೆ ಹಂಚಿಕೊಂಡಿದ್ದರು