Site icon Vistara News

Director Surya Kiran: ʻಸಂಭ್ರಮʼ ಸಿನಿಮಾ ಖ್ಯಾತಿ ನಟಿಯ ಮಾಜಿ ಪತಿ ನಿಧನ

Telugu film director Surya Kiran passes away

ಚೆನ್ನೈ: ತೆಲುಗು ನಟ-ನಿರ್ದೇಶಕ ಸೂರ್ಯ ಕಿರಣ್ ಅವರು ಜಾಂಡೀಸ್‌ನಿಂದಾಗಿ ಚೆನ್ನೈನಲ್ಲಿ ನಿಧನರಾದರು. ತೆಲುಗು ಚಿತ್ರ ಸೂರ್ಯ ಕಿರಣ್‌ ಅವರಿಗೆ 48 ವರ್ಷ ವಯಸ್ಸಾಗಿತ್ತು. ಸೂರ್ಯ ಅವರ ನಿಧನದ ಸುದ್ದಿಯನ್ನು ಅವರ ವಕ್ತಾರರು ಎಕ್ಸ್ ಖಾತೆ ಮೂಲಕ ಖಚಿತಪಡಿಸಿದ್ದಾರೆ. ಕನ್ನಡದ ‘ಸಂಭ್ರಮ’, ‘ರಾಮಕೃಷ್ಣ’ ಮುಂತಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಕಲ್ಯಾಣಿ ಅವರ ಜತೆಗೆ ಸೂರ್ಯ ಕಿರಣ್ ಮದುವೆ ಆಗಿದ್ದರು. ಸಾಕಷ್ಟು ಸಮಸ್ಯೆಗಳು ಎದುರಾದ ಕಾರಣ ಈ ಜೋಡಿ ದೂರವಾಯ್ತು.

“ನಿರ್ದೇಶಕ ಸೂರ್ಯಕಿರಣ್ ಅವರು ಜಾಂಡೀಸ್‌ನಿಂದ ನಿಧನರಾಗಿದ್ದಾರೆ. ತೆಲುಗು ಚಿತ್ರಗಳು, ʻಸತ್ಯಂʼ, ʻರಾಜು ಭಾಯ್ʼ ಮತ್ತು ಇತರ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಬಿಗ್‌ಬಾಸ್ ತೆಲುಗಿನ ಮಾಜಿ ಸ್ಪರ್ಧಿಯಾಗಿದ್ದರು. ಓಂ ಶಾಂತಿ” ಎಂದು ಸುರೇಶ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸೂರ್ಯ ಕಿರಣ್ ಯಾರು?

ಬಿಗ್ ಬಾಸ್ ತೆಲುಗು ಖ್ಯಾತಿಯ ನಟ ಟಾಲಿವುಡ್ ಚಲನಚಿತ್ರಗಳಲ್ಲಿ ‘ಸತ್ಯಂ’ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರು. ಸುಮಂತ್ ಮತ್ತು ಜೆನಿಲಿಯಾ ದೇಶಮುಖ್ ನಟಿಸಿದ, ರೊಮ್ಯಾಂಟಿಕ್ ‘ಸತ್ಯಂ’ ಸಿನಿಮಾ ಭಾರಿ ಮೆಚ್ಚುಗೆ ಪಡೆದಿತ್ತು. 150 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಅಕ್ಕಿನೇನಿ ಕುಟುಂಬದ ಸುಮಂತ್ ಹೀro ಆಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಮೊದಲು ಬಾರಿಗೆ ತೆಲುಗು ಚಿತ್ರರಂಗಕ್ಕೆ ಜೆನಿಲಿಯಾ ಕಾಲಿಟ್ಟಿದ್ದರು. ನಾಗಾರ್ಜುನ ನಿರ್ಮಾಣದ ಈ ಸಿನಿಮಾದ ದೊಡ್ಡ ಹಿಟ್ ಆಗಿತ್ತು. ಸೂರ್ಯ ಕಿರಣ್‌ಗೂ ಒಳ್ಳೆಯ ಬ್ರೇಕ್ ಸಿಕ್ಕಿತ್ತು.

ಇದನ್ನೂ ಓದಿ: ಪೇಟಿಎಂ ನಿರ್ಬಂಧ; ಫಾಸ್ಟ್‌ಟ್ಯಾಗ್‌ಗೆ ನಾಳೆಯೊಳಗೆ ಮೊದಲು ಈ ಕೆಲಸ ಮಾಡಿ

ʻಬ್ರಹ್ಮಾಸ್ತ್ರಂʼ (2006), ʻರಾಜು ಭಾಯ್ʼ (2007) ಮತ್ತು ʻಅಧ್ಯಾಯ 6ʼ (2020) ಮುಂತಾದ ತೆಲುಗು ಚಲನಚಿತ್ರಗಳನ್ನು ಸಹ ಸೂರ್ಯ ನಿರ್ದೇಶಿಸಿದ್ದಾರೆ. 2020ರಲ್ಲಿ ರಿಯಾಲಿಟಿ ಶೋ ʻಬಿಗ್ ಬಾಸ್ ತೆಲುಗುʼ ಸೀಸನ್ 4ರಲ್ಲಿ ಕಾಣಿಸಿಕೊಂಡರು.

ಮೂಲತಃ ಕೇರಳದ ತಿರುವನಂತಪುರದವರಾದ ಸೂರ್ಯ ಚೆನ್ನೈನಲ್ಲಿ ಜನಿಸಿದ್ದರು. ಬಾಲನಟನಾಗಿ ‘ಸ್ನೇಹಿಖಾನ್ ಒರು ಪೆನ್ನು’ ನಲ್ಲಿ ಕಾಣಿಸಿಕೊಂಡಿದ್ದರು. 200ಕ್ಕೂ ಹೆಚ್ಚು ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸೂರ್ಯ ಅವರ ಸಹೋದರಿ ಸುಜಿತಾ ಧನುಷ್ ಕೂಡ ನಟಿಯಾಗಿದ್ದಾರೆ.

Exit mobile version