ಜ್ಞಾನವೇಲ್ ರಾಜ್ ನಿರ್ಮಾಣದ, ಪಾ ರಂಜಿತ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್ ಅಭಿನಯದ ‘ತಂಗಲಾನ್ʼ ಚಿತ್ರವು (Thangalaan Movie) ಇಂದು ಆಗಸ್ಟ್ 15 ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 2011 ರಲ್ಲಿ ನಟ ವಿಕ್ರಮ್ ಅಭಿನಯದ ‘ದೈವತಿರುಮಗಳು’ ಚಿತ್ರದ ನಂತರ ಗುಣಮಟ್ಟದ ಬ್ರೇಕ್ ನೀಡುವ ಚಿತ್ರಗಳು ಬಂದಿಲ್ಲ. ಏಕೆಂದರೆ ಈ ಚಿತ್ರದ ನಂತರ ಬಿಡುಗಡೆಯಾದ ಐ, ಇರುಮುಗನ್, ಕೋಬ್ರಾ, ಸಾಮಿ ಸ್ಕ್ವೇರ್ ಮುಂತಾದ ಬಿಗ್ ಬಜೆಟ್ ಚಿತ್ರಗಳು ಮಿಶ್ರ ವಿಮರ್ಶೆಗಳನ್ನು ಕಂಡವು. ಆದರೆ, ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ತೆರೆಕಂಡ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ವಿಕ್ರಮ್ ಗೆ ಮತ್ತೆ ಹಿಟ್ ಆಯಿತು.ಇದೀಗ ‘ತಂಗಾಲನ್’ ಅದ್ಭುತವಾದ ಸಿನಿಮಾ, ಕೆಲವು ಅದ್ಭುತ ದೃಶ್ಯಗಳನ್ನು ಪಾ ರಂಜಿತ್ ಕಟ್ಟಿಕೊಟ್ಟಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ ಸಿನಿ ರಸಿಕರು.
ʻʻಈ ಚಿತ್ರವನ್ನು ಹಾಲಿವುಡ್ ಗುಣಮಟ್ಟದಲ್ಲಿ ಚಿತ್ರೀಕರಿಸಲಾಗಿದೆ. ನಿರ್ದೇಶಕ ಪಾ.ರಂಜಿತ್ ಬಗ್ಗೆ ಹೇಳಲು ಪದಗಳಿಲ್ಲ. ಅದೇ ರೀತಿ ನಟ ವಿಕ್ರಮ್ ಕೂಡ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಿದ್ದಾರೆʼ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.
ವಿಜಯ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿ, ‘2024ರಲ್ಲಿ ಈವರೆಗೆ ಬಿಡುಗಡೆ ಆದ ಸಿನಿಮಾಗಳಲ್ಲಿ ಇದು ಅತ್ಯುತ್ತಮ ಸಿನಿಮಾ. ಈ ಸಿನಿಮಾದ ನಟನೆಗೆ ಚಿಯಾನ್ ವಿಕ್ರಂಗೆ ಪ್ರಶಸ್ತಿ ನೀಡಬೇಕು. ಜಿವಿ ಪ್ರಕಾಶ್ ಸಂಗೀತ ಅತ್ಯದ್ಭುತ. ಎಲ್ಲ ಕ್ರೆಡಿಟ್ ಹೋಗಬೇಕಿರುವುದು ನಿರ್ದೇಶಕ ಪಾ ರಂಜಿತ್ಗೆ. ಎಂದಿನಂತೆ ಪಾ ರಂಜಿತ್ ನಿರ್ದೇಶನ ಅದ್ಭುತವಾಗಿತ್ತು. ದ್ವಿತೀಯಾರ್ಧ ನನಗೆ ಹೆಚ್ಚು ಇಷ್ಟವಾಯ್ತು’ ಎಂದಿದ್ದಾರೆ. ಸಿನಿಮಾ ನೋಡಿರುವ ಬಹುತೇಕ ನೆಟ್ಟಿಗರು ‘ತಂಗಲಾನ್’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಖ್ಯಾತ ಚಿತ್ರ ವಿಮರ್ಶಕ ಕ್ರಿಸ್ಟೋಫರ್ ಕನಕರಾಜ್ ನಿನ್ನೆಯಿಂದ ‘ತಂಗಳನ್’ ಚಿತ್ರದ ಬಗ್ಗೆ ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ, ಇದು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯುತ್ತಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Physical Abuse : ಭೀಮಾ ಸಿನಿಮಾ ನೋಡಲು ಬಂದು ಲೇಡಿಸ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟ ಅಪ್ರಾಪ್ತ!
ಕನ್ನಡದಲ್ಲಿ ‘ಕೃಷ್ಣಂ ಪ್ರಣಯ ಸಖಿ’, ‘ಗೌರಿ’, ತೆಲುಗಿನಲ್ಲಿ ‘ಮಿಸ್ಟರ್ ಬಚ್ಚನ್’ ಮತ್ತು ‘ಡಬಲ್ ಇಸ್ಮಾರ್ಟ್’ ಇನ್ನು ತಮಿಳಿನಲ್ಲಿ ಚಿಯಾನ್ ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ತೆರೆಗೆ ಬಂದಿದೆ.
ಈ ಚಿತ್ರದ ಪಾತ್ರಕ್ಕಾಗಿ ವಿಕ್ರಮ್ ಆರು ತಿಂಗಳ ತಯಾರಿ ನಡೆಸಿದ್ದಾರಂತೆ ಹಾಗೂ ತುಂಬಾ ತೂಕವನ್ನು ಕಳೆದುಕೊಂಡಿದ್ದಾರಂತೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು. ಪ್ರತಿ ದಿನ ನಾಲ್ಕೈದು ಗಂಟೆಗಳ ಕಾಲ ಮೇಕಪ್ ಹಾಕಿಕೊಳ್ಳಬೇಕಿತ್ತು ಎಂದು ಚಿತ್ರೀಕರಣ ಸಮಯದ ಅನುಭವವನ್ನು ವಿಕ್ರಮ್ ಈ ಹಿಂದೆ ಹಂಚಿಕೊಂಡಿದ್ದರು.