Site icon Vistara News

The Birthday Boy: ಹೆಸರು ಬದಲಾಯಿಸಿ ಕದ್ದು ಮುಚ್ಚಿ ಸಿನಿಮಾ ಮಾಡಿ, ಮಾಸ್ಕ್‌ ಧರಿಸಿ ಬಂದ ನಿರ್ದೇಶಕ! ಏನು ಕಥೆ?

The Birthday Boy Director Whisky Real Life Story

ಬೆಂಗಳೂರು: ಸಾಮಾನ್ಯವಾಗಿ ಅನೇಕರು ಸಿನಿಮಾ ನಿರ್ದೇಶನದ ಮೂಲಕವೇ ಜನಪ್ರಿಯರಾಗಬೇಕೆಂದು ಯೋಚಿಸುತ್ತಾರೆ. ಆದರೆ ತೆಲುಗು (The Birthday Boy) ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ದೇಶಕರೊಬ್ಬರು ತಮ್ಮ ಹೆಸರನ್ನು “ವಿಸ್ಕಿ’ ಎಂದು ಬದಲಾಯಿಸಿಕೊಂಡು ಸಿನಿಮಾ ನಿರ್ದೇಶಿಸಿದ್ದಾರೆ. ಪ್ರತಿ ಸಿನಿಮಾದ ಪ್ರಚಾರ ವೇಳೆ ಮುಖ ಕಾಣದಂತೆ ಮಾಸ್ಕ್‌ ಧರಿಸುತ್ತಾರೆ. ನಿರ್ದೇಶಕ ಈ ರೀತಿ ಇರೋದ್ಯಾಕೆ ಎಂದು ತಿಳಿಯಲು ಮುಂದೆ ಓದಿ.

ವಿಸ್ಕಿ ನಿರ್ದೇಶನದ ಸಿನಿಮಾಗಳನ್ನು ಅವರ ಮನೆಯವರು ಇಷ್ಟಪಡುವುದಿಲ್ಲ. ಹೀಗಾಗಿ ಅವರಿಗೆ ಗೊತ್ತಾಗದಂತೆ ವೇಷ ಬದಲಿಸಿ ತಿರುಗಾಡುತ್ತಿದ್ದಾರೆ. ನನಗೆ ಪ್ರಚಾರದ ಅವಶ್ಯಕತೆಯಿಲ್ಲ. ನಾನು ಬರೀ ಸಿನಿಮಾ ನಿರ್ದೇಶನ ಮಾಡಿ ಹೋಗೊಕೆ ಬಂದೆ ಅಷ್ಟೆ. ನನಗೆ ಕ್ಯಾಮೆರಾ ಮುಂದೆ ಬಂದು ಮಾತನಾಡುವುದಕ್ಕೆ ಇಷ್ಟವಿಲ್ಲ. ನಿಜ ಹೇಳಬೇಕು ಅಂದರೆ ನಾನು ಚಿತ್ರರಂಗಕ್ಕೆ ಬಂದಿರುವುದು ನಮ್ಮ ಮನೆಯವರಿಗೆ ಗೊತ್ತಿಲ್ಲ. ಕದ್ದು ಮುಚ್ಚಿ ಬಂದಿದ್ದೀನಿ. ಆ ವಿಚಾರ ಅವರಿಗೆ ಗೊತ್ತಾದರೆ ನೋವಾಗುತ್ತದೆ ಎನ್ನುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು ಸಿನಿಮಾ ಸುದ್ದಿಗೋಷ್ಠಿ, ಸಂದರ್ಶನದಲ್ಲಿ ಭಾಗಿ ಆಗುತ್ತಿದ್ದಾರೆ.

ಇದೀಗ ರ‌ವಿಕೃಷ್ಣ, ಸ‌ಮೀರ್ ಮ‌ಲ್ಲಾ ಮುಖ್ಯಭೂಮಿಕೆಯಲ್ಲಿರುವ ‘ದಿ ಬರ್ತ್‌ಡೇ ಬಾಯ್‌’ ತೆಲುಗು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ವಿಸ್ಕಿ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇದು ಅವರ ನಿಜವಾದ ಹೆಸರಲ್ಲ, ಚಿತ್ರಕ್ಕಾಗಿ ಬದಲಿಸಿಕೊಂಡಿದ್ದಾರೆ.

ಈ ಚಿತ್ರ ಇದೇ ತಿಂಗಳ 19 ರಂದು ಬಿಡುಗಡೆಯಾಗಲಿದೆ. ಭರತ್ ಇಮ್ಮಲರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರವಿಕೃಷ್ಣ ಮತ್ತು ರಾಜೀವ್ ಕಣಕಾಲ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. “ವಿಸ್ಕೀ” (ನಿರ್ದೇಶಕ ವಿಸ್ಕಿ) ಎಂಬ ಹೆಸರನ್ನು ಇಟ್ಟುಕೊಳ್ಳಲು ಕಾರಣವೆಂದರೆ ಅವರು ಒಂದು ನಾಯಿಮರಿಯನ್ನು ಸಾಕಿದ್ದರು. ನಾಯಿ ಕರೋನಾ ಸಮಯದಲ್ಲಿ ಸತ್ತು ಹೋಯ್ತು. ಅವರು ಅದಕ್ಕೆ ವಿಸ್ಕಿ ಎಂದು ಹೆಸರಿಟ್ಟಿದ್ದರು. ಹೀಗಾಗಿ ತಮ್ಮನ್ನು ಈ ರೀತಿ ಪರಿಚಯಿಸಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: ಹೊಸಬರ ತಂಡ ಸಿದ್ದಪಡಿಸಿರುವ ಹೊಸತನದ ಸಿನಿಮಾ; ಲೈಫ್ ಆಫ್ ಮೃದುಲ ಹಾಡು ಬಿಡುಗಡೆ!

ಐವರು ಅನಿವಾಸಿ ಭಾರತೀಯರ ಬದುಕಿನ ಮೂಲ ಕಥೆಗೆ ಸಿನಿಮಾ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಾಗಿದೆ. ನನ್ನ ಎರಡು ಸಿನಿಮಾಗಳು ಫ್ಲಾಪ್ ಆದರೆ ಚಿತ್ರರಂಗ ಬಿಟ್ಟುಬಿಡುತ್ತೇನೆ ಎಂದು ನಿರ್ದೇಶಕ ವಿಸ್ಕಿ ಹೇಳಿದ್ದಾರೆ. ಸದ್ಯ ಮಾಸ್ಕ್ ಹಾಕಿಕೊಂಡು ಆತ ಸಿನಿಮಾ ಪ್ರಚಾರ ಮಾಡುತ್ತಿರುವುದು ವೈರಲ್ ಆಗುತ್ತಿದೆ.


Exit mobile version