ಬೆಂಗಳೂರು: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಮೈ ಚಳಿ ಬಿಟ್ಟು ನಟಿಸಿದ್ದಾರೆ. 2002ರಲ್ಲಿ ಬಂದಿದ್ದ `ಡಿಜೆ ಟಿಲ್ಲು’ ಚಿತ್ರದ ಮುಂದುವರಿದ ಭಾಗ ಈ `ಟಿಲ್ಲು ಸ್ಕ್ವೇರ್’. ಸಿದ್ದು ಜೊನ್ನಲಗಡ್ಡ ( Siddhu Jonnalagadda ) ಈ ಚಿತ್ರದ ನಾಯಕ. ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.
`ಟಿಲ್ಲು ಸ್ಕ್ವೇರ್’ ಒಳ್ಳೆಯ ಕಥಾಹಂದರ ಮತ್ತು ಆಕರ್ಷಕ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡಿದೆ.
ಟಿಲ್ಲು ಸ್ಕ್ವೇರ್ನ ನಿರ್ಮಾಪಕರ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಕೇವಲ 9 ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ದಾಟಿದೆ. ತೆಲುಗು ಚಿತ್ರ ಟಿಲ್ಲು ಸ್ಕ್ವೇರ್ 100 ಕೋಟಿ ಗಳಿಸಿದ ಮೊದಲ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ʻಜಾತಿ ರತ್ನಲುʼ ಸಿನಿಮಾ ಈ ಮುಂಚೆ ದಾಖಲೆ ಮಾಡಿತ್ತು.
ಟಿಲ್ಲು ಸ್ಕ್ವೇರ್ ಚಿತ್ರವನ್ನ ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. `ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇವೆ. ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಈ ಸಿನಿಮಾದಿಂದಾಗಿ ಸೋಲು ಗ್ಯಾರಂಟಿ ಎನ್ನುತ್ತಿದ್ದಾರೆ ನೆಟ್ಟಿಗರು.
ಇದನ್ನೂ ಓದಿ: Kannada New Movie: 25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ ‘ಬ್ಲಿಂಕ್’ ಸಿನಿಮಾ!
Get ready to witness the "Double Blockbuster" celebrations of #TilluSquare at the Spectacular Success Meet! 🥳💥
— Ashwin (@Ashwin845727) April 7, 2024
𝑴𝑨𝑵 𝑶𝑭 𝑴𝑨𝑺𝑺𝑬𝑺 for 𝑺𝑻𝑨𝑹 𝑩𝑶𝒀 🌟🔥
TOMORROW @ 6⃣PM ⏰
Our beloved #tarak garu gracing as Chief Guest ❤🔥 pic.twitter.com/qrtwW59Wki
ಸ್ಟಾರ್ಬಾಯ್ ಸಿದ್ದು ಜೊನ್ನಲಗಡ್ಡ ಅವರು 2022ರಲ್ಲಿ ತಮ್ಮ ಹಳೆಯ ಸಂದರ್ಶನವೊಂದರಲ್ಲಿ “ನಾನು ಮುಂದಿನ 3 ವರ್ಷಗಳಲ್ಲಿ 100 ಕೋಟಿ ಚಲನಚಿತ್ರದ ಸ್ಟಾರ್ ಆಗಲು ಬಯಸುತ್ತೇನೆ” ಎಂದು ಹೇಳಿದ್ದರು. ಇದೀಗ ನಟ ಕೇವಲ 2 ವರ್ಷಗಳ ಅವಧಿಯಲ್ಲಿ ಸಾಬೀತುಪಡಿಸಿದ್ದಾರೆ.