ಬೆಂಗಳೂರು: ವನಿತಾ ವಿಜಯಕುಮಾರ್ (Vanitha Vijaykumar) ತಮಿಳಿನ ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ. ಅಷ್ಟೇ ಅಲ್ಲದೇ ಇತ್ತೀಚೆಗೆ ನರೇಶ್-ಪವಿತ್ರಾ ಲೋಕೇಶ್ ಅಭಿನಯ ಮತ್ತೆ ಮದುವೆ ಸಿನಿಮಾದಲ್ಲಿ ರಮ್ಯಾ ಅವರ ಪಾತ್ರ ನಿಭಾಯಿಸಿರುವ ನಟಿ. ವನಿತಾ ವಿಜಜ್‌ಕುಮಾರ್ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದರು. ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು.ಆದರೆ ನಟನೆಗಿಂತ ಹೆಚ್ಚು ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ವನಿತಾ ವಿಜಯಕುಮಾರ್ ಅವರು ನಾಲ್ಕನೇ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ನಟಿ ಈ ಹಿಂದೆ ಮೂರು ಬಾರಿ ಮದುವೆಯಾಗಿದ್ದು, ಮೂರು ಮಕ್ಕಳ ತಾಯಿಯಾಗಿದ್ದಾರೆ. ಈ ಸುದ್ದಿಗೆ ಸಂಬಂಧಿಸಿದಂತೆ ವನಿತಾ ಅವರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಮದುವೆ ಬಗ್ಗೆ ಪ್ರಶ್ನೆ ಕೇಳಿರುವ ಅಭಿಮಾನಿಯೊಬ್ಬರಿಗೆ, “ಒಂದು ಅನಿರೀಕ್ಷಿತ ತಿರುವಿಗಾಗಿ ಕಾಯಿರಿ” ಎಂದು ವನಿತಾ ಉತ್ತರಿಸಿದ್ದಾರಂತೆ!
ಎರಡೂ ಮದುವೆಗಳು ಅಂತ್ಯ!
ಒಮ್ಮೆ ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ಜತೆ ಪ್ರೀತಿಯಲ್ಲಿದ್ದರು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಇಬ್ಬರೂ ತಮ್ಮ ಸಂಬಂಧವನ್ನು ಜಗಳದಲ್ಲಿಯೇ ಅಂತ್ಯಗೊಳಿಸುತ್ತಾರೆ. ಬಳಿಕ ಪೀಟರ್ ಪೌಲ್ ಜತೆ ವಿವಾಹವಾದರೂ, ಅದು ಕೂಡ ಬೇಗನೇ ಕೊನೆ ಆಯ್ತು. ಪೀಟರ್ (vanitha vijayakumar husband peter paul) ಮದುವೆಯನ್ನು ಮೊದಲ ಪತ್ನಿ ತೀವ್ರ ವಿರೋಧಿಸಿದ್ದರು. ವನಿತಾ ಜತೆ ಮದುವೆಯಾಗಿದ್ದೇ ಗೊತ್ತಿಲ್ಲ ಎಂದು ಮೊದಲ ಪತ್ನಿ ಬೀದಿ ರಂಪ ಮಾಡಿದ್ದರು.
ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು
ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ. ತಂದೆ ವಿಜಯಕುಮಾರ್ ಮತ್ತು ಆಕೆಯ ಸಹೋದರ ಅರುಣ್ ವಿಜಯ್ ಈ ನಟನಿಂದ ದೂರವೇ ಉಳಿಸಿದ್ದಾರೆ.
2000ರಲ್ಲಿ, ವನಿತಾ ವಿಜಯ್‌ಕುಮಾರ್ ಅವರು ನಟ ಆಕಾಶ್ ಅವರೊಂದಿಗೆ ಮದುವೆಯಾದರು. ಈ ದಂಪತಿಗೆ ಮಗ ಕೂಡ ಇದ್ದ. ಆದರೆ 2005ರಲ್ಲಿ ವಿಚ್ಛೇದನ ಪಡೆದು ಆಕಾಶ್ ಅವರಿಂದ ದೂರವಾದರು. ನಂತರ 2007ರಲ್ಲಿ ಉದ್ಯಮಿ ಆನಂದ್ ಜಯ್ ರಾಮನ್ ಎಂಬುವವರ ಜೊತೆಗೆ ವನಿತಾ ಎರಡನೇ ಮದುವೆಯಾದರು. ಆದರೆ 2012ರಲ್ಲಿ ಅವರೊಂದಿಗೂ ಹೊಂದಾಣಿಕೆ ಕೊರತೆಯಿಂದ ದಾಂಪತ್ಯಕ್ಕೆ ಕೊನೆ ಹಾಡಿದರು. ಬಳಿಕ 2020ರಲ್ಲಿ ಫೋಟೋಗ್ರಾಫರ್ ಪೀಟರ್ ಪೌಲ್ ಮದುವೆಯಾದರು. ಆದರೆ ನಾಲ್ಕೇ ತಿಂಗಳಲ್ಲಿ ಈ ಮದುವೆ ಕೂಡ ಮುರಿದುಬಿತ್ತು.
ತ್ಯಾಗರಾಜನ್ ನಿರ್ದೇಶನದಲ್ಲಿ ತಯಾರಾದ ಅಂದಗನ್ ಎಂಬ ತಮಿಳು ಚಿತ್ರದಲ್ಲಿ ವನಿತಾ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಶಾಂತ್ ನಾಯಕನಾಗಿ ಸಿಮ್ರಾನ್, ಪ್ರಿಯಾ ಆನಂದ್, ಕಾರ್ತಿಕ್ ಮತ್ತು ಸಮುದ್ರಕನಿ ನಟಿಸಿದ್ದಾರೆ. ಈ ಚಿತ್ರವನ್ನು ಸ್ಟಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಾಂತಿ ತ್ಯಾಗರಾಜನ್ ಮತ್ತು ಪ್ರೀತಿ ತ್ಯಾಗರಾಜನ್ ನಿರ್ಮಿಸಿದ್ದಾರೆ.