ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ ವದಂತಿಗಳು ಹೊಸದೇನಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ರಿಲೇಶನ್‌ಶಿಪ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ವಿಜಯ್ ದೇವರಕೊಂಡ “ಹೌದು.. ನಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ” ಎಂದು ನೇರವಾಗಿಯೇ ಹೇಳಿದ್ದಾರೆ. ಅದು ಕೂಡ ʻʻನನ್ನ ತಂದೆ ತಾಯಿ, ನನ್ನ ಸಹೋದರನೊಂದಿಗೆ, ನಿಮ್ಮೊಂದಿಗೆ..ಹೀಗೆ ನಾವೆಲ್ಲರೂ ಸಂಬಂಧದಲ್ಲಿದ್ದೇವೆʼʼ ಎಂದು ಉತ್ತರ ನೀಡಿದ್ದಾರೆ ವಿಜಯ್ ದೇವರಕೊಂಡ!
ಮಾಧ್ಯಮವೊಂದು ಸಂದರ್ಶನದಲ್ಲಿ “ವಿಜಯ್ ದೇವರಕೊಂಡ ರಿಲೇಶನ್‌ಶಿಪ್‌ನಲ್ಲಿ ಇದ್ದಾರಾ?” ಎಂದು ಪ್ರಶ್ನೆ ಇಟ್ಟಿತ್ತು. ಅದಕ್ಕೆ ನಟ “ಹೌದು, ನನ್ನ ತಂದೆ ತಾಯಿ, ನನ್ನ ಸಹೋದರನೊಂದಿಗೆ, ನಿಮ್ಮೊಂದಿಗೆ ಮತ್ತು ನಾವೆಲ್ಲರೂ ರಿಲೇಶನ್‌ಶಿಪ್‌ನಲ್ಲಿ ಇದ್ದೇವೆ.”ಎಂದು ಉತ್ತರ ನೀಡಿದ್ದಾರೆ. ಈ ಬಾರಿಗೂ ವಿಜಯ್ ದೇವರಕೊಂಡ ಗುಟ್ಟು ಬಿಟ್ಟುಕೊಟ್ಟಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇತ್ತೀಚೆಗಷ್ಟೇ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ವಿಜಯ್ ಅವರ ಕ್ಯಾಪ್ ಧರಿಸಿ ಕಾಣಿಸಿಕೊಂಡಿದ್ದರು. ಇದಕ್ಕೂ ಮೊದಲು, ಮಾಲ್ಡೀವ್ಸ್ ಪ್ರವಾಸದಲ್ಲಿ ಒಟ್ಟಾಗಿ ಇದ್ದರು ಎಂದು ವರದಿಯಾಗಿತ್ತು. ಇದಾದ ಬಳಿಕ ಶೀಘ್ರದಲ್ಲೇ ವಿಜಯ್ ಮತ್ತು ರಶ್ಮಿಕಾ ನಿಶ್ಚಿತಾರ್ಥದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿತ್ತು. ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ವಿಜಯ್ ಅವರು ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Vijay Deverakonda: ರಶ್ಮಿಕಾ ಜತೆಗೆ ಎಂಗೇಜ್‌ಮೆಂಟ್; ಸ್ಪಷ್ಟನೆ ಕೊಟ್ಟ ವಿಜಯ್ ದೇವರಕೊಂಡ!
Vijay :- Akka kadu ra Pinni 🙈💗
— Rashmika Lover's 💗 (@Rashuu_lovers) March 28, 2024
Geetha :- Mari Nenu evaruu 😒
Vijay :- Nuvu pedha Pinni 😉
Geetha :- Inka maraleda nuvu 😤#FamilyStar #VijayDeverakonda #RashmikaMandanna #MrunalThakur pic.twitter.com/fy9u7sjGG6
ವದಂತಿಗಳು ಪ್ರಾರಂಭವಾದದ್ದು ಹೇಗೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್ ಸಕ್ಸಸ್ ಆಗಿತ್ತು. 2019 ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು.
Cute🤍🤍🤍🤍
— ShehZaadi🤍🤍🤍 (@shehzaadi23) March 24, 2024
Vijay Devrakonda
Rashmika Mandana#Vijay Devrakonda#RashmikaMandanna #CoupleGoals #Lovestory pic.twitter.com/GZSeIpCClH
ಸಾಲು ಸಾಲು ಸಿನಿಮಾಗಳು
ಸಿನಿಮಾ ವಿಚಾರಕ್ಕೆ ಬಂದರೆ ವಿಜಯ್ ದೇವರಕೊಂಡ ʻದಿ ಫ್ಯಾಮಿಲಿ ಸ್ಟಾರ್ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಇದರಲ್ಲಿ ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ. ಇತ್ತೀಚೆಗೆ, ರಶ್ಮಿಕಾ ಕೂಡ ವಿಜಯ್ ಅವರ ಸಿನಿಮಾ ಪ್ರಮೋಷನ್ ಮಾಡಿದ್ದರು. ಶುಭಾಶಯಗಳನ್ನು ತಿಳಿಸಿದ್ದರು.
ಇದನ್ನೂ ಓದಿ: Vijay Deverakonda: ಖುಷಿ ಚಿತ್ರದ ಗಳಿಕೆಯಿಂದ 1 ಕೋಟಿ ರೂ. ಫ್ಯಾನ್ಸ್‌ಗೆ ಹಂಚ್ತಾರಂತೆ ವಿಜಯ್ ದೇವರಕೊಂಡ!
ನಟಿ ರಶ್ಮಿಕಾ ಮಂದಣ್ಣ (Rashmika Mandanna) ‘ದಿ ಗರ್ಲ್‌ಫ್ರೆಂಡ್’ ಎಂಬ ರೋಮಾಂಚಕ ಪ್ರೇಮಕಥೆಯಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದಾರೆ. ಏಳು ವರ್ಷಗಳ ವೃತ್ತಿಜೀವನದಲ್ಲಿ ಇದು ನಟಿಯ 24ನೇ ಚಿತ್ರವಾಗಿದೆ.ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.