ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ (Mrunal Thakur) ಅಭಿನಯದ ‘ಫ್ಯಾಮಿಲಿ ಸ್ಟಾರ್‘ (Family Star) ಸೆನ್ಸಾರ್‌ಶಿಪ್ ಹೈದರಾಬಾದ್‌ನಲ್ಲಿ ನಡೆದಿದೆ. ಸೆಂಟ್ರಲ್ ಬ್ಯೂರೋ ಆಫ್ ಫಿಲ್ಮ್ ಸರ್ಟಿಫಿಕೇಶನ್ ಸಿನಿಮಾಗೆ `ಯು/ಎ’ ಪ್ರಮಾಣಪತ್ರವನ್ನು ನೀಡಿದೆ. ಕೌಟುಂಬಿಕ ಕಥಾಹಂದರದ ಸಿನಿಮಾ ಆಗಿದ್ದರೂ ಕೂಡ ಸೆನ್ಸಾರ್ ಮಂಡಳಿ (Censor Board) ಕತ್ತರಿ ಪ್ರಯೋಗ ಮಾಡಿದೆ. ಬೈಗುಳಗಳಿಗೆ ಕತ್ತರಿ ಹಾಕಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.
ಪರಶುರಾಮ್ ನಿರ್ದೇಶನದ ‘ಫ್ಯಾಮಿಲಿ ಸ್ಟಾರ್’ ಬಿಡುಗಡೆಗೂ ಮುನ್ನವೇ ಭಾರೀ ಸುದ್ದಿ ಮಾಡಿದೆ. ಚಿತ್ರ 2 ಗಂಟೆ 40 ನಿಮಿಷ ಕಾಲ ಇದೆ. ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ಬೈಗುಳುಗಳು ಇರುವುದರಿಂದ ಚಿಕ್ಕ ಮಕ್ಕಳ ವೀಕ್ಷಣೆಗೆ ಪೋಷಕರ ಮಾರ್ಗದರ್ಶನ ಬೇಕು ಎಂಬ ಕಾರಣಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅವರ ಆನ್-ಸ್ಕ್ರೀನ್ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.
ಇದನ್ನೂ ಓದಿ: Vijay Deverakonda: ಹೌದು… ನಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದ ವಿಜಯ್ ದೇವರಕೊಂಡ!
ರಶ್ಮಿಕಾ ಮಂದಣ್ಣ ಬರ್ತ್ಡೇ ದಿನವೇ ಸಿನಿಮಾ ರಿಲೀಸ್
ರಶ್ಮಿಕಾ ಮಂದಣ್ಣ (Rashmika Mandanna’s birthday) ಅವರು ಏಪ್ರಿಲ್ 5ರಂದು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ.
ಚಿತ್ರದ ಪ್ರಚಾರದ ಭಾಗವಾಗಿ, ವಿಜಯ್ ದೇವರಕೊಂಡ ಇತ್ತೀಚೆಗೆ “ಕಿಟ್ಟಿ ಪಾರ್ಟಿ” ಚಾಟ್‌ನಲ್ಲಿ ಭಾಗವಹಿಸಿದ್ದರು. ಈ ಸಂವಾದದ ಸಮಯದಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರ ಜನ್ಮದಿನವೇ ಸಿನಿಮಾ ರಿಲೀಸ್ ಏಕೆ? ಎಂಬ ಪ್ರಶ್ನೆ ಕೇಳಲಾಗಿತ್ತು. ಆಗ ವಿಜಯ್ ಈ ಬಗ್ಗೆ ಮಾತನಾಡಿ ʻʻ”ಹೌದು, ಅಂದು ರಶ್ಮಿಕಾ ಅವರ ಜನ್ಮದಿನ. ಇದು ನಮಗೆ ಅದೃಷ್ಟ ಎಂದು ನಾನು ಭಾವಿಸುತ್ತೇನೆ” ಎಂದು ನಗುತ್ತ ಮಾತಿಗೆ ಫುಲ್ ಸ್ಟಾಪ್ ಇಟ್ಟರು.
ಸಂದೀಪ್ ರೆಡ್ಡಿ ವಂಗಾ ಅವರ ರಣಬೀರ್ ಕಪೂರ್ ಅಭಿನಯದ ʻಅನಿಮಲ್ʼ (2023) ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ರಶ್ಮಿಕಾ ʻಫ್ಯಾಮಿಲಿ ಸ್ಟಾರ್ʼನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಬಹುಶಃ ಮದುವೆಯ ಹಾಡಿನಲ್ಲಿ ನಟಿ ಕಾಣಿಸಿಕೊಳ್ಳಬಹುದು ಎಂಬ ಗುಸುಗುಸು ಇದೆ. ಆದರೆ, ಚಿತ್ರತಂಡ ಈ ಮಾಹಿತಿಯನ್ನು ರಿವೀಲ್ ಮಾಡಿಲ್ಲ.
ಇದನ್ನೂ ಓದಿ: Blast In Factory: ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟಕ್ಕೆ ಐವರು ಬಲಿ
ಫ್ಯಾಮಿಲಿ ಸ್ಟಾರ್ʼ ಚಿತ್ರಕ್ಕೆ ಗೋಪಿಸುಂದರ್ ಸಂಗೀತ ನೀಡಿದ್ದು, ಇದುವರೆಗೆ ಬಿಡುಗಡೆಯಾಗಿರುವ ಮೂರು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಷ್ ನಿರ್ಮಿಸಿರುವ ಈ ಚಿತ್ರ ಬಿಡುಗಡೆಗೆ ತಯಾರಾಗಿದೆ.