ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda) ಮತ್ತು ಮೃಣಾಲ್ ಠಾಕೂರ್ ( Mrunal Thakur) ಅಭಿನಯದ ಚಿತ್ರ ʻಫ್ಯಾಮಿಲಿ ಸ್ಟಾರ್ʼ ಭಾರತದಲ್ಲಿ ಸಾಧಾರಣ ಓಪನಿಂಗ್ (Family Star Box Office) ಪಡೆದುಕೊಂಡಿತ್ತು. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಏಪ್ರಿಲ್ 26 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತೆಲುಗು ಆವೃತ್ತಿಯ ಈ ಸಿನಿಮಾ ತಮಿಳು, ಮಲಯಾಳಂ ಮತ್ತು ಕನ್ನಡ ಡಬ್ಬಿಂಗ್ ಆವೃತ್ತಿಗಳೊಂದಿಗೆ ಲಭ್ಯವಿರಲಿದೆ.
ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಬ್ಬರು ʻʻಸಿನಿಮಾ ಫಸ್ಟ್ ಹಾಪ್ ಹಾಗೂ ಕಾಮಿಡಿ ಚೆನ್ನಾಗಿದೆʼʼಎಂದು ಬರೆದುಕೊಂಡಿದ್ದರು. ʻವಿಜಯ್ ಮತ್ತು ಮೃಣಾಲ್ ಅಭಿನಯ ಸೂಪರ್ʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದರು. ʻʻನನ್ನ ರೇಟಿಂಗ್ – 3.5/5. ಕೌಟುಂಬಿಕ ಮನರಂಜನೆ ಸಿನಿಮಾ ಇದುʼʼಮತ್ತೊಬ್ಬರು ಬರೆದುಕೊಂಡಿದ್ದರು.
ಕೆಲವರು ಇದು ಸರಾಸರಿಗಿಂತ ಕಡಿಮೆ ಚಿತ್ರ ಎಂದು ಹೇಳುತ್ತಿದ್ದರೆ, ಇನ್ನು ಕೆಲವರು ಈ ಚಿತ್ರಕ್ಕಿಂತ ಧಾರಾವಾಹಿ ಉತ್ತಮವಾಗಿದೆ ಎಂದು ಕಮೆಂಟ್ ಮಾಡಿದ್ದರು. ಸಂಗೀತ ಅಷ್ಟಾಗಿ ಆಕರ್ಷಣೀಯವಾಗಿಲ್ಲ ಎಂಬ ಮಾತು ಕೂಡ ಇದೆ. ಈ ಸಿನಿಮಾ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ, ಹೊಸತನವೇನೂ ಇಲ್ಲ ಎಂದಿದ್ದರು.
ಇದನ್ನೂ ಓದಿ: Vijay Deverakonda: ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ವಿಜಯ್ ದೇವರಕೊಂಡ!
ʻಹಾಯ್ ನಾನ್ನʼ (2023), ʻಸೀತಾ ರಾಮಂʼ (2022)ಬಳಿಕ ಮೃಣಾಲ್ ಠಾಕೂರ್ ಅವರ ಮೂರನೇ ತೆಲುಗು ಚಿತ್ರ ಇದು. ʻಫ್ಯಾಮಿಲಿ ಸ್ಟಾರ್ʼ ಸಿನಿಮಾವನ್ನು ಪರುಶುರಾಮ್ ನಿರ್ದೇಶಿಸಿದ್ದಾರೆ. ಈ ಮುಂಚೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʻಗೀತ ಗೋವಿಂದಂʼ (2018) ಸಿನಿಮಾಗೆ ನಿರ್ದೇಶನ ಮಾಡಿದ್ದರು.
The Freelancer (Disney + Hot star)
— Bunny (@jsiddharthxD) February 21, 2024
Scam 2003 ( SonyLiv )
Squid Games 2 ( Netflix )
The Railway Men ( Netflix )
The Family Man ( Amazon Prime )
Hostages ( Disney + Host star)
Special Ops 1 ( Disney + Hostar)
Special Ops 1.5 ( Disney + Hotstar)
Berlin ( Netflix)
Maharani 1/2/3 (…
ʻಫ್ಯಾಮಿಲಿ ಸ್ಟಾರ್ʼ ಚಿತ್ರಕ್ಕೆ ಗೋಪಿಸುಂದರ್ ಸಂಗೀತ ನೀಡಿದ್ದು, ಇದುವರೆಗೆ ಬಿಡುಗಡೆಯಾಗಿರುವ ಮೂರು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.