Site icon Vistara News

South Indian Film | ಪ್ರೈವೇಟ್‌ ಜೆಟ್‌ ಇರುವ ದಕ್ಷಿಣ ಭಾರತದ ಶ್ರೀಮಂತ ಸೆಲೆಬ್ರಿಟಿಗಳಿವರು

ಹೈದರಾಬಾದ್:‌ ಮುಂಚೆಲ್ಲ ಬಾಲಿವುಡ್‌ ಮುಂದೆ ನಮ್ಮ ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ ಸಣ್ಣವರಂತೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ದಕ್ಷಿಣ ಭಾರತದ ಸಿನಿಮಾಗಳು(South Indian Film) ಬಾಲಿವುಡ್‌ನ್ನೂ ದಾಟಿ ವಿಶ್ವಮಟ್ಟದಲ್ಲಿ ಸದ್ದು ಮಾಡಿವೆ. ಬಾಲಿವುಡ್‌ ಮಂದಿಯಂತೆಯೇ ನಮ್ಮ ದಕ್ಷಿಣದ ಸಿನಿ ತಾರೆಗಳೂ ಕೂಡ ಲಕ್ಸುರಿ ಜೀವನವನ್ನು ಜೀವಿಸಲಾರಂಭಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಲಕ್ಸುರಿ ಕಾರುಗಳ ಜತೆಯಲ್ಲಿ ಪ್ರೈವೇಟ್‌ ಜೆಟ್‌ಗಳನ್ನೂ ಖರೀದಿಸಿದ್ದಾರೆ. ನಮ್ಮಲ್ಲಿ ಯಾರ ಯಾರ ಬಳಿ ಪ್ರೈವೇಟ್‌ ಜೆಟ್‌ ಇದೆ ಎಂದು ಒಮ್ಮೆ ಕಣ್ಣು ಹಾಯಿಸಿಕೊಂಡು ಬರೋಣ.

ರಾಮ್‌ಚರಣ್‌


ಟಾಲಿವುಡ್‌ ನಟ ಚಿರಂಜೀವಿ ಅವರ ಪುತ್ರ ರಾಮ್‌ಚರಣ್‌ ಆರ್‌ಆರ್‌ಆರ್‌ ಸಿನಿಮಾದಲ್ಲಿ ಮಿಂಚಿದ್ದನ್ನು ನೋಡಿರುತ್ತೀರಿ. ಪತ್ನಿ ಉಪಾಸನಾ ಅವರೊಂದಿಗೆ ಸೇರಿಕೊಂಡು ಖಾಸಗಿ ಜೆಟ್‌ನ್ನು ಖರೀದಿಸಿದ್ದಾರೆ. ಹಾಗೆಯೇ ಟಾಲಿವುಡ್‌ನಲ್ಲಿ ಪ್ರೈವೇಟ್‌ ಏರ್‌ಲೈನ್‌ ಸರ್ವೀಸ್‌(ಟ್ರುಜೆಟ್‌) ಹೊಂದಿರುವ ಏಕೈಕ ಸೆಲೆಬ್ರಿಟಿ ಇವರು.


ಜೂ.ಎನ್‌ಟಿಆರ್‌


ಆರ್‌ಆರ್‌ಆರ್‌ ಸಿನಿಮಾದಲ್ಲಿ ರಾಮ್‌ಚರಣ್‌ ಜತೆಯಲ್ಲಿ ನಟಿಸಿರುವ ಇನ್ನೋರ್ವ ನಟ ಜೂನಿಯರ್‌ ಎನ್‌.ಟಿ.ಆರ್‌. ಇವರೂ ಕೂಡ ಲಕ್ಸುರಿ ಜೀವನವನ್ನು ಇಷ್ಟಪಡುವವರು. ಜೂ.ಎನ್‌ಟಿಆರ್‌ 8 ಕೋಟಿ ರೂ. ಮೌಲ್ಯದ ಪ್ರೈವೇಟ್‌ ಜೆಟ್‌ ಖರೀದಿಸಿದ್ದಾರೆ. ಅವರ ಜೆಟ್‌ನ್ನು ಹೈದರಾಬಾದ್‌ನ ಶಮ್ಶಾಬಾದ್‌ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ಪ್ರಭಾಸ್‌

ಬಾಹುಬಲಿ ಸಿನಿಮಾದಲ್ಲಿ ನಟಿಸಿ ಜನರ ಮೆಚ್ಚುಗೆ ಪಡೆದಿದ್ದ ನಟ ಪ್ರಭಾಸ್‌ ಕೂಡ ಪ್ರೈವೇಟ್‌ ಜೆಟ್‌ ಮಾಲೀಕರಾಗಿದ್ದಾರೆ. ಅವರು ಆಗಾಗ ಇದೇ ಜೆಟ್‌ನಲ್ಲಿ ಪ್ರವಾಸ ತೆರಳುವುದನ್ನು ಗಮನಿಸಬಹುದು.

ಅಲ್ಲು ಅರ್ಜುನ್‌


ಪುಷ್ಪಾ: ದಿ ರೈಸ್‌ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟ ಅಲ್ಲು ಅರ್ಜುನ್‌ ಕೂಡ ಪ್ರೈವೇಟ್‌ ಜೆಟ್‌ ಖರೀದಿಸಿದ್ದಾರೆ. ಇತ್ತೀಚೆಗೆ ಉದಯ್‌ಪುರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದಕ್ಕೆ ನಟ ತನ್ನ ಕುಟುಂಬದೊಂದಿಗೆ ಪ್ರೈವೇಟ್‌ ಜೆಟ್‌ನಲ್ಲಿ ತೆರಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.


ನಯನತಾರಾ

ಕೇವಲ ನಟರು ಮಾತ್ರವಲ್ಲ ನಟಿಯರೂ ಕೂಡ ಲಕ್ಸುರಿ ಜೀವನ ನಡೆಸುತ್ತಿದ್ದಾರೆ. ಟಾಲಿವುಡ್‌ನ ಪ್ರಸಿದ್ಧ ನಟಿ ನಯನತಾರಾ ಇತ್ತೀಚೆಗೆ ಪತಿ ವಿಘ್ನೇಶ್‌ ಶಿವನ್‌ ಅವರೊಂದಿಗೆ ಸೇರಿಕೊಂಡು ಜೆಟ್‌ ಖರೀದಿಸಿದ್ದಾರೆ. ಕುಟುಂಬದೊಂದಿಗೆ ಆ ಜೆಟ್‌ನಲ್ಲಿ ಪ್ರವಾಸ ತೆರಳಿದ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇವರಷ್ಟೇ ಅಲ್ಲದೆ ಮಹೇಶ್‌ ಬಾಬು, ಪೂಜಾ ಹೆಗಡೆ, ನಾಗಾರ್ಜುನ, ಪವನ್‌ ಕಲ್ಯಾಣ್‌ ಸೇರಿ ಅನೇಕರ ಬಳಿ ಪ್ರೈವೇಟ್‌ ಜೆಟ್‌ಗಳಿವೆ.

ಇದನ್ನೂ ಓದಿ: RRR Movie | ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಆ ಜಾಗ ಈಗ ಯುದ್ಧದ ಸ್ಥಳ! ಯಾವುದು ಆ ಜಾಗ?

Exit mobile version