Site icon Vistara News

Spandana Vijay Raghavendra: ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆ; ಶಿವಣ್ಣ ದಂಪತಿ ಸೇರಿದಂತೆ ಹಲವು ಗಣ್ಯರು ಭಾಗಿ

shivanna at Spandana Vijay Raghavendra 11th day commemoration

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಮರಣೋತ್ತರ ಸಂಸ್ಕಾರ ಕ್ರಿಯೆಗಳು ಇಂದಿನಿಂದ (ಆಗಸ್ಟ್‌ 16) ಮಲ್ಲೇಶ್ವರಂ ನಿವಾಸದಲ್ಲಿ ನೆರವೇರಿದೆ. ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ನಿವಾಸದಲ್ಲಿ ಸ್ಪಂದನಾ ಶಾಂತಿ ಹೋಮದಲ್ಲಿ ಶಿವ ರಾಜ್‌ಕುಮಾರ್ (Shiva rajkumar) ದಂಪತಿ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಭಾಗಿಯಾಗಿದ್ದಾರೆ. ವಿಜಯ ಪತ್ನಿ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಅನು ಪ್ರಭಾಕರ್-‌ ರಘು ಮುಖರ್ಜಿ ದಂಪತಿ, ಲಹರಿ ವೇಲು ಕೂಡ ಭಾಗಿಯಾಗಿದ್ದಾರೆ.

ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರು ಆಗಸ್ಟ್ 06ರಂದು ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ (heart failure) ಇಹಲೋಕ ತ್ಯಜಿಸಿದ್ದರು. ಸಾವಿರಾರು ಜನರ ಅಂತಿಮ ದರ್ಶನದೊಂದಿಗೆ ಅವರ ಅಂತ್ಯಕ್ರಿಯೆ ನಡೆದಿತ್ತು. ಈಡಿಗ ಬಿಲ್ಲವ ಸಂಪ್ರದಾಯದಂತೆ ಉತ್ತರ ಕ್ರಿಯೆ ಪೂಜೆ ನಡೆದಿದೆ. ಮಧ್ಯಾಹ್ನ 1 ಗಂಟೆಯ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಲಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು.

ಇದನ್ನೂ ಓದಿ: Spandana Vijy Raghavendra : ನಾಳೆ ಸ್ಪಂದನಾ ಉತ್ತರಕ್ರಿಯೆ, ಮಲ್ಲೇಶ್ವರಂ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ

ಮುಂಜಾನೆ 08 ಗಂಟೆಯಿಂದ ಹೋಮ ಹವನಗಳು ಆರಂಭವಾಗಿ ಸತತ 3 ಗಂಟೆಗಳ ಕಾಲ ಮಲ್ಲೇಶ್ವರಂ ನಿವಾಸದಲ್ಲಿ ಶಾಂತಿ ಹೋಮ ನಡೆದಿದೆ. ಸುಮಾರು 4000 ಜನರಿಗೆ ತರಹೇವಾರಿ ಸಿಹಿ ಭೋಜನವಿದ್ದು, ವಿಐಪಿಗಳಿಗೆ ಹಾಗೂ ಸಾರ್ವಜನಿಕರಿಗೆ ಒಂದೇ ಜಾಗದಲ್ಲಿ ಊಟದ ವ್ಯವಸ್ಥೆ ಇದೆ ಎಂದು ತಿಳಿಸಲಾಗಿದೆ.

ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ, ಆಬೊಂಡೆ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಉತ್ತರ ಕ್ರಿಯೆಗೆ ಸಿದ್ಧತೆ; ಸರ್ವರಿಗೂ ಆಹ್ವಾನಿಸಿದ ವಿಜಯ ರಾಘವೇಂದ್ರ ಕುಟುಂಬ

ಇದನ್ನೂ ಓದಿ: Spandana Vijay Raghavendra: ಲೀನವಾಯ್ತು ಸ್ಪಂದನಾ ಅಸ್ಥಿ!

ಕಣ್ಣೀರ ಕೋಡಿಗೆ ಕಾರಣವಾದ ಸ್ಪಂದನಾ ನಿರ್ಗಮನ

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರ ಅನುರೂಪ ದಾಂಪತ್ಯ ಎಲ್ಲರ ಗಮನ ಸೆಳೆದಿತ್ತು. ಇಬ್ಬರೂ ಹೃದಯವಂತರಾಗಿ, ಸೌಜನ್ಯದ ನಡವಳಿಕೆಯಿಂದ ಪ್ರೀತಿಪಾತ್ರರಾಗಿದ್ದರು. ಹೀಗಾಗಿ ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಸ್ಪಂದನಾ ಸಾವು ಎಲ್ಲರ ಮನಸ್ಸನ್ನು ಕಲಕಿತ್ತು. ಅದರ ಜತೆಗೆ ಇಷ್ಟು ಸಣ್ಣ ವಯಸ್ಸಿನಲ್ಲಿ ಹೃದಯಾಘಾತವಾಗಿದ್ದು ಎಲ್ಲರ ಹೃದಯ ಹಿಂಡಿತ್ತು. ಅದರ ಜತೆಗೆ ರಾಜ್‌ ಕುಟುಂಬ ಮತ್ತು ಬಂಧುಗಳ ಕುಟುಂಬದಲ್ಲಿ ಬೆನ್ನು ಬೆನ್ನಿಗೆ ಸಂಭವಿಸಿದ ದುರಂತಗಳು ಎಲ್ಲರನ್ನೂ ಕಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ಪಂದನಾ ಸಾವಿಗೆ ನಾಡಿಗೆ ನಾಡೇ ಕಂಬನಿ ಮಿಡಿದಿತ್ತು. ವಿಜಯ ರಾಘವೇಂದ್ರ, ಮಗ ಶೌರ್ಯ ಅವರು ಈ ನೋವನ್ನು ಹೇಗೆ ಭರಿಸಿಕೊಳ್ಳುತ್ತಾರೆ ಎಂದು ಜನರೇ ಮರುಗಿದ್ದರು.

Exit mobile version