Site icon Vistara News

Spandana Vijay Raghavendra: ಲೀನವಾಯ್ತು ಸ್ಪಂದನಾ ಅಸ್ಥಿ!

Spandana Vijay Raghavendra asti Visarajan

ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಸ್ಥಿಯನ್ನು ಕಾವೇರಿ ನದಿಗೆ (Cauvery river) ಅರ್ಪಿಸುವ ಅಸ್ಥಿ ವಿಸರ್ಜನಾ (Asthi visarjane) ಪ್ರಕ್ರಿಯೆ ಶ್ರೀರಂಗಪಟ್ಟಣದ (Srirangapatna) ಕಾವೇರಿ ನದಿ ತೀರದಲ್ಲಿ ನಡೆಯಿತು. ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಮೃತಪಟ್ಟು ಇಂದಿಗೆ ಆಗಸ್ಟ್‌ 11 ಐದು ದಿನ ಕಳೆದಿದೆ. ಸ್ಪಂದನಾ ಕುಟುಂಬಸ್ಥರಿಂದ ಹಾಲುತುಪ್ಪ ಬಿಡುವ ಕಾರ್ಯ ನಡೆದು, ಶ್ರೀರಾಮಪುರದ ಹರಿಶ್ಚಂದ್ರಘಾಟ್​​ನಲ್ಲಿ ಕುಟುಂಬಸ್ಥರ ಪೂಜೆ ಮಾಡಿದ್ದಾರೆ. ಸ್ಪಂದನಾಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಕುಟುಂಬದವರು ಪೂಜೆ ಮಾಡಿದ್ದಾರೆ.

ಕೆಲವು ವಿಧಿವಿಧಾನಗಳು ನಡೆದ ನಂತರ ಕಾವೇರಿ ನದಿಗೆ ಅಸ್ಥಿ ಬಿಟ್ಟಿದ್ದಾರೆ ಕುಟುಂಬ. ಕಾವೇರಿ ನದಿಯಲ್ಲಿ ಅದರಲ್ಲೂ ಶ್ರೀರಂಗಪಟ್ಟಣದಲ್ಲಿ ಅಸ್ಥಿ ಬಿಟ್ಟರೆ ಮುಕ್ತಿ ಸಿಗಲಿದೆ ಎಂಬ ನಂಬಿಕೆ ಇದೆ. ಸ್ಪಂದನಾ ವಿಜಯ ರಾಘವೇಂದ್ರ ಅವರ ಮಗ ಶೌರ್ಯ ಮುಡಿ ತೆಗೆದು ನಂತರ ಪೂಜಾ ಕೈಂಕರ್ಯ ಮುಗಿಸಿದ್ದಾರೆ. ಸ್ಪಂದನಾ ಅವರ ಅಸ್ಥಿ ವಿಸರ್ಜನೆ ನಡೆಯುವ ಸ್ಥಳದಲ್ಲಿ ಸಿದ್ಧತೆ ಮತ್ತು ಪೂಜೆಯ ನೇತೃತ್ವವನ್ನು ರಮೇಶ್ ಶರ್ಮಾ ವಹಿಸಿದ್ದರು.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಬಾಲ್ಯ ಹೇಗಿತ್ತು? ಹಳೆಯ ಫೋಟೊಗಳು ವೈರಲ್‌!

ಬ್ಯಾಂಕಾಕ್‌ ಪ್ರವಾಸದಲ್ಲಿದ್ದ ಸ್ಪಂದನಾ ಅವರು ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ 11.35ಕ್ಕೆ ಥಾಯ್‌ ಏರ್‌ವೇಸ್‌ ವಿಮಾನದ ಮೂಲಕ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅಲ್ಲಿಂದ ರಾತ್ರಿಯೇ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಅವರ ನಿವಾಸಕ್ಕೆ ತರಲಾಗಿತ್ತು.

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಬಾಲ್ಯ ಹೇಗಿತ್ತು? ಹಳೆಯ ಫೋಟೊಗಳು ವೈರಲ್‌!

ಹರಿಶ್ಚಂದ್ರ ಘಾಟ್‌ನ ವಿದ್ಯುತ್‌ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು. ಈಡಿಗ ಸಂಪ್ರದಾಯದಂತೆ ಸರಳವಾಗಿ ನಡೆದ ಸ್ಪಂದನಾ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪತಿ ವಿಜಯ ರಾಘವೇಂದ್ರ ಮತ್ತು ಪುತ್ರ ಶೌರ್ಯ ನೆರವೇರಿಸಿದ್ದರು.

Exit mobile version