Site icon Vistara News

Spandana Vijay Raghavendra: ಆತುರವೇನಿತ್ತು ಸ್ಪಂದನಾ? ಕಂಬನಿ ಮಿಡಿದ ಗಣ್ಯರು!

Spandana Vijay Puneeth Rajkumar DK shivakumar

ಬೆಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಮ್ ಅವರ ಮಗಳು ಸ್ಪಂದನಾ(Spandana Vijay Raghavendra). ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. 2007ರ ಆಗಸ್ಟ್ 26ರಂದು ಇವರು ಹಸಮಣೆ ಏರಿದ್ದರು. ಇನ್ನು, 19 ದಿನ ಕಳೆದಿದ್ದರೆ ಈ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವುದರಲ್ಲಿತ್ತು. ಅದಕ್ಕೂ ಮೊದಲೇ ವಿಧಿ ಇವರ ಬಾಳಲ್ಲಿ ಆಟವಾಡಿದೆ. ವಿಜಯ್‌ ಅಭಿಮಾನಿಗಳು, ಸೇರಿದಂತೆ ಅನೇಕ ಗಣ್ಯರು ಟ್ವೀಟ್‌ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಟ್ವೀಟ್‌ ಮಾಡಿ ʻʻಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್‌ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳುʼʼಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Spandana Vijay Raghavendra: ಸ್ಯಾಂಡಲ್‌ವುಡ್‌ ಸಾವಿನ ಸರಣಿಗೆ ಸ್ಪಂದನಾ ಸೇರ್ಪಡೆ; ಅಗಲಿದ ಯುವಜೀವಗಳು

Exit mobile version