Site icon Vistara News

Spandana Vijay Raghavendra: ವಿವಾಹ ವಾರ್ಷಿಕೋತ್ಸವಕ್ಕೆ ಕೆಲವೇ ದಿನ ಬಾಕಿ; ಸ್ಪಂದನಾ ಕೊನೇ ಕ್ಷಣದ ಫೋಟೊಗಳಿವು!

Spandana Vijay Raghavendra wife with family

ಬೆಂಗಳೂರು: ಖ್ಯಾತ ಚಿತ್ರ ನಟ ವಿಜಯ ರಾಘವೇಂದ್ರ (Actor Vijay Raghavendra) ಅವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರು ಹೃದಯಾಘಾತದಿಂದ (Heart attack) ಆಗಸ್ಟ್‌ 7ರಂದು ನಿಧನರಾಗಿದ್ದಾರೆ. ಸ್ಪಂದನಾ ಹಾಗೂ ವಿಜಯ್ ಅವರು ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಇದ್ದರು. ಕೇವಲ 19 ದಿನಗಳು ಬಾಕಿಯಿತ್ತು. ಅದಕ್ಕೂ ಮೊದಲೇ ಸ್ಪಂದನಾ ಮೃತಪಟ್ಟಿದ್ದಾರೆ. ವಿಜಯ್‌ ಅವರು ನಿರಂತರವಾಗಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ವಿಜಯ್ ಹಾಗೂ ಸ್ಪಂದನಾ ಬ್ಯಾಂಕಾಕ್​​ಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಸ್ಪಂದನಾಗೆ ಹೃದಯಾಘಾತ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಬ್ಯಾಂಕಾಕ್​​ನಲ್ಲೇ ನಡೆಯಲಿದೆ. ಮಂಗಳವಾರ ಆಗಸ್ಟ್​​ 8ರಂದು ಅವರ ಮೃತದೇಹ ಬೆಂಗಳೂರಿಗೆ ಬರಲಿದೆ.

ಸ್ಪಂದನಾ ಅವರಿಗೆ ಅವರ ವಯಸ್ಸು ಇನ್ನೂ 40ಕ್ಕಿಂತ ಕಡಿಮೆ ಇದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರ ಸಾವಿಗೆ ಕಾರಣ ಸಡನ್‌ ಕಾರ್ಡಿಯಾಕ್‌ ಡೆತ್‌ (Sudden Cardiac death) ಹೇಳಲಾಗುತ್ತಿದೆ. ಮಾಜಿ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್ ಅವರ ಮಗಳು ಸ್ಪಂದನಾ. ವಿಜಯ್ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. 2007ರ ಆಗಸ್ಟ್ 26ರಂದು ಇವರು ಹಸಮಣೆ ಏರಿದ್ದರು. ಸ್ಪಂದನಾ ನಿಧನ ವಾರ್ತೆಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಸ್ಪಂದನಾ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. 2016ರಲ್ಲಿ ರಿಲೀಸ್ ಆದ ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರಗೆ ಜತೆಯಾಗಿ ಸ್ಪಂದನಾ ನಟಿಸಿದ್ದರು.

ಇದನ್ನೂ ಓದಿ: Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ

ಏನಿದು Sudden Cardiac Death?

ತನ್ನ ಆಗಮನದ ಸೂಚನೆಯನ್ನು ನೀಡಿದ ಒಂದು ತಾಸಿನೊಳಗೇ ಸಂಭವಿಸುವ ಹೃದಯಾಘಾತವಿದು. ಹಾಗಾಗಿ ಈ ಸೂಚನೆಯನ್ನು ಸ್ಪಷ್ಟವಾಗಿ ಗ್ರಹಿಸಿದ ವ್ಯಕ್ತಿಗೂ ಜೀವ ಉಳಿಸಿಕೊಳ್ಳುವುದಕ್ಕೆ ಸ್ವಲ್ಪವೇ ಹೊತ್ತು ಕೈಯಲ್ಲಿರುತ್ತದೆ. ಸೂಚನೆ ಗ್ರಹಿಕೆಗೇ ಬಾರದಿದ್ದರೆ, ಕಥೆ ಮುಗಿಯುತ್ತದೆ. “ಇಂಥ ಘಟನೆಗಳು ಹೊಸದೂ ಅಲ್ಲ, ಮೊದಲೂ ಅಲ್ಲ. ಎಷ್ಟೋ ಬಾರಿ ವ್ಯಕ್ತಿಗಳು ನಿದ್ದೆಯಲ್ಲೇ ನಿಧನರಾಗಿರುತ್ತಾರೆ. ಆಗಲೂ ಯಾವ ಸೂಚನೆಯೂ ದೊರೆಯುವುದಿಲ್ಲ. ಕೆಲವೊಮ್ಮೆ ವ್ಯಾಯಾಮ ಮಾಡುವಾಗ ಅಥವಾ ಕ್ರೀಡೆಯಲ್ಲಿರುವಾಗಲೂ ಇದು ಸಂಭವಿಸಬಹುದು. ಇಂಥ ಘಟನೆಗಳಲ್ಲಿ ಶೇ. ೮೦ರಷ್ಟು ಪ್ರಕರಣಗಳಲ್ಲಿ ಮೊದಲೇ ಇದ್ದ ಹೃದಯ ತೊಂದರೆ ತಿಳಿದಿರುವುದಿಲ್ಲ. ಕೆಲವೊಮ್ಮೆ ಆನುವಂಶಿಕ ಕಾರಣಗಳಿದ್ದು, ಪತ್ತೆಯಾಗಿರುವುದಿಲ್ಲ. ಸ್ಥೂಲಕಾಯ, ಕುಡಿತ ಅಥವಾ ಫೈಬ್ರೋಸಿಸ್‌ ಸಮಸ್ಯೆಗಳೂ ಇದ್ದಿರಬಹುದು” ಎನ್ನುವುದು ಹೃದಯ ತಜ್ಞ ಡಾ. ಪ್ರದೀಪ್‌ ಕುಮಾರ್‌ ಅವರ ಅಭಿಪ್ರಾಯ.

ಇದನ್ನೂ ಓದಿ: Heart Attack : ಸ್ಪಂದನಾ ಅವರನ್ನು ಬಲಿ ಪಡೆದ ಹೃದಯಾಘಾತ; ಏನಿದು Sudden Cardiac Death?

ಚಿಕ್ಕ ವಯೋಮಾನದವರು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು, ಜಿಮ್‌ ಉತ್ಸಾಹಿಗಳು, ಕ್ರೀಡಾಪಟುಗಳು- ಇಂಥ ಹಲವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ನಿಧನರಾಗಿದ್ದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಅದರಲ್ಲೂ ನಟರು, ಕ್ರೀಡಾಪಟುಗಳಂಥ ಖ್ಯಾತನಾಮರು ಹೀಗೆ ಸಾವನ್ನಪ್ಪಿದ್ದಾಗ ಈ ದುರದೃಷ್ಟಕರ ಘಟನೆಯನ್ನು ಹಳಿಯುವುದು ಕೇಳಿಬರುತ್ತದೆ. ಜೊತೆಗೆ, ಕಳ್ಳನಂತೆ ಬಂದು ಜೀವ ಕಸಿಯುವ ಈ ಅವಸ್ಥೆಯ ಬಗ್ಗೆ ಜನರಲ್ಲಿ ಆತಂಕ, ಶಂಕೆ ಸಹಜವಾಗಿ ಮೂಡಿಬರುತ್ತಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸಡನ್‌ ಕಾರ್ಡಿಯಾಕ್‌ ಡೆತ್‌ (ಎಸ್‌ಸಿಡಿ) ಎಂದು ಹೇಳಲಾಗುತ್ತದೆ.

Exit mobile version