ಬೆಂಗಳೂರು: ನಟ ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana Vijay Raghavendra) ಅವರು ಕೆಲದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಆಗಸ್ಟ್ 16ರಂದು ಸ್ಪಂದನಾ (vijay raghavendra wife) ಉತ್ತರ ಕ್ರಿಯೆಗೆ (Vijay Raghavendra wife death) ಕುಟುಂಬ ಸಿದ್ಧತೆ ಮಾಡುಕೊಳ್ಳುತ್ತಿದೆ ಜತೆಗೆ ಅಭಿಮಾನಿಗಳಿಗೆ ಭಾಗವಹಿಸುವಂತೆ ವಿಜಯ ಕುಟುಂಬ ಆಹ್ವಾನ ನೀಡಿದ್ದಾರೆ. ಬೆಳಗ್ಗೆ 8 ಗಂಟೆಗೆ ಶಾಂತಿಹೋಮ ಕೂಡ ನಡೆಯಲಿದೆ.
“ನಮ್ಮ ಮನೆಯ ಮಗಳು ಶ್ರೀಮತಿ ಸ್ಟಂದನಾ ವಿಜಯ್ ರಾಘವೇಂದ್ರ (ಅಚ್ಚು) ಅವರು ದಿನಾಂಕ 6/08/2023ರ ಭಾನುವಾರದಂದು ನಮ್ಮನ್ನಗಲಿರುವುದು ನಿಮಗೆಲ್ಲರಿಗೂ ತಿಳಿದ ವಿಷಯ. ಉತ್ತರ ಕ್ರಿಯೆಯನ್ನು ದಿನಾಂಕ 16/08 /2023ರ ಬುಧವಾರದಂದು ಮಲ್ಲೇಶ್ವರದ ಸ್ವಗೃಹದಲ್ಲಿ ಬೆಳಗ್ಗೆ 8 ಗಂಟೆಯಿಂದ ಶಾಂತಿಹೋಮ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನವನ್ನು ಹಮ್ಮಿಕೊಂಡಿದ್ದೇವೆ. ಆದ್ದರಿಂದ ನೀವು ಭಾಗವಹಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಇಂತಿ ಬಿ. ಕೆ. ಶಿವರಾಂ ಹಾಗೂ ಎಸ್. ಎ. ಚಿನ್ನೆಗೌಡರು. ಮತ್ತು ಸಮಸ್ತ ಕುಟುಂಬಸ್ಥರುʼʼಎಂದು ಆಹ್ವಾನ ನೀಡಿದ್ದಾರೆ.
ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸ್ಪಂದನಾ ಅವರು ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ 11.35ಕ್ಕೆ ಥಾಯ್ ಏರ್‌ವೇಸ್ ವಿಮಾನದ ಮೂಲಕ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅಲ್ಲಿಂದ ರಾತ್ರಿಯೇ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಮ್ ಅವರ ನಿವಾಸಕ್ಕೆ ತರಲಾಗಿತ್ತು.
ಇದನ್ನೂ ಓದಿ: Spandana Vijay Raghavendra: ಲೀನವಾಯ್ತು ಸ್ಪಂದನಾ ಅಸ್ಥಿ!
ಹರಿಶ್ಚಂದ್ರ ಘಾಟ್‌ನ ವಿದ್ಯುತ್ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು. ಈಡಿಗ ಸಂಪ್ರದಾಯದಂತೆ ಸರಳವಾಗಿ ನಡೆದ ಸ್ಪಂದನಾ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪತಿ ವಿಜಯ ರಾಘವೇಂದ್ರ ಮತ್ತು ಪುತ್ರ ಶೌರ್ಯ ನೆರವೇರಿಸಿದ್ದರು.