Site icon Vistara News

Vijay Raghavendra: ಎದೆಗೊತ್ತಿ ಪ್ರೀತಿಸುವೆ, ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು; ವಿವಾಹ ವಾರ್ಷಿಕೋತ್ಸವಕ್ಕೆ ವಿಜಯ್‌ ರಾಘವೇಂದ್ರ ಭಾವುಕ!

Spandana VijayRaghavendra

ಬೆಂಗಳೂರು: ಆಗಸ್ಟ್‌ 26ರಂದು (ಶನಿವಾರ) ಸ್ಯಾಂಡಲ್‌ವುಡ್‌ ನಟ ವಿಜಯ್‌ ರಾಘವೇಂದ್ರ (Vijay Raghavendra) ಹಾಗೂ ಸ್ಪಂದನಾ ಅವರ 16ನೇ ವರ್ಷದ ಮದುವೆ ವಾರ್ಷಿಕೋತ್ಸವ (Spandana VijayRaghavendra Wedding Anniversary). ಆದರೆ ಆಗಸ್ಟ್ 6ರಂದು ಸ್ಪಂದನಾ ಥೈಲ್ಯಾಂಡ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಈ ನೋವು ರಾಘವೇಂದ್ರ ಎಂದೂ ಮರೆಯಲಾಗದ್ದು. ವಿಜಯ್‌ ರಾಘವೇಂದ್ರ ಅವರು ಪತ್ನಿಯನ್ನು ನೆನೆದು ಭಾವುಕ ಸಾಲುಗಳನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ.

ವಿಜಯ್‌ ರಾಘವೇಂದ್ರ ಅವರು ವಿಡಿಯೊ ಪೋಸ್ಟ್‌ ಮಾಡಿ ʻʻಚಿನ್ನಾ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ… ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ… ಬದುಕನ್ನು ಕಟ್ಟಿ ಸರ್ವಸ್ವವಾದೆ. ಉಸಿರಲ್ಲಿ ಬೆರೆತು ಜೀವಂತವಾದೆ. ಮುದ್ದಾದ ನಗುವಿನಲ್ಲಿದ್ದಿದ್ದ ಶಕ್ತಿ ಪರ್ವತದಷ್ಟು. ಮರೆಯದೆ.. ತೊರೆಯದೆ ಎದೆಗೊತ್ತಿ ಪ್ರೀತಿಸುವೆ. ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟುʼʼಎಂದು ಬರೆದು ಓದಿದ್ದಾರೆ.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರದ್ದು ಪ್ರೇಮ ವಿವಾಹ. ಕೆಫೆ ಕಾಫಿ ಡೇದಲ್ಲಿ ಸ್ಪಂದನಾ ಅವರನ್ನು ವಿಜಯ್ ನೋಡಿದ್ದರು. ಮೊದಲ ನೋಟದಲ್ಲೇ ಅವರಿಗೆ ಸ್ಪಂದನಾ ಇಷ್ಟವಾದರು. ಬಳಿಕ ಧೈರ್ಯದಿಂದ ಅವರನ್ನು ಮಾತನಾಡಿಸಿದರು. ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಪರಿಚಯ ಪ್ರೀತಿ ಆಯಿತು. ಬಳಿಕ ಕುಟುಂಬದವರ ಒಪ್ಪಿಗೆ ಪಡೆದ ಇಬ್ಬರೂ 2007ರ ಆಗಸ್ಟ್ 26ರಂದು ಮದುವೆ ಆದರು.

ಇದನ್ನೂ ಓದಿ: Spandana Vijay Raghavendra: ʻನಾನೆಂದೂ ನಿನ್ನವ, ಕೇವಲ ನಿನ್ನವ’ ಸ್ಪಂದನಾ ಬಗ್ಗೆ ವಿಜಯ್‌ ಭಾವುಕ ಸಾಲು!

2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ 16 ವರ್ಷ ಯಶಸ್ವಿ ಜೀವನ ಸಾಗಿದ್ದರು. ವಿಜಯ್ ರಾಘವೇಂದ್ರ ಅವರ ಲವ್ ಸ್ಟೋರಿಗೆ ಒಂದು ಖುಷಿಯ ಆರಂಭ ಶುರು ಆಗಿತ್ತು. ಪ್ರೀತಿಸಿ ಮದುವೆ ಆದ ಸ್ಪಂದನಾ ಬರೋ ಮುಂಚೇನೂ ವಿಜಯ್ ರಾಘೇವೇಂದ್ರ ಅವರಿಗೆ ಒಂದು ಕನಸಿತ್ತು. ತಾನು ಮದುವೆ ಆಗುವ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಯನ್ನ ಎಂದೂ ನೋಯಿಸಲೇಬಾರದು ಅಂದುಕೊಂಡಿದ್ದರು. ಎಷ್ಟೋ ಬಾರಿ ಇದನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Spandana Vijay Raghavendra: ಇಂದು ಸ್ಪಂದನಾ ನೆನಪಿನ ಶಾಂತಿ ಹೋಮ

ಇದೀಗ ಈ ವಿಡಿಯೊ ಕಂಡು ರಾಘು ಅಭಿಮಾನಿಗಳು ಕೂಡಾ ಭಾವುಕರಾಗಿದ್ದಾರೆ. ವಿಜಯ್ ರಾಘವೇಂದ್ರ ನಟನೆಯ ‘ಕದ್ದ ಚಿತ್ರ’ ಆಗಸ್ಟ್ 25ರಂದು ರಿಲೀಸ್ ಆಗಬೇಕಿತ್ತು. ಆದರೆ, ವಿಜಯ್ ನೋವಿನಲ್ಲಿರುವುದರಿಂದ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಬ್ಯಾಂಕಾಕ್ ಟ್ರಿಪ್​ನಲ್ಲಿದ್ದ ಸ್ಪಂದನಾ ವಿಜಯ್ ರಾಘವೇಂದ್ರ, ಆಗಸ್ಟ್​ 7ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಸ್ಪಂದನಾ ನಿಧನಕ್ಕೆ ಇಡೀ ಸ್ಯಾಂಡಲ್​ವುಡ್ ಕಣ್ಣೀರು ಹಾಕಿತ್ತು.

Exit mobile version