Site icon Vistara News

Upendra Birthday | UI ತಂಡದಿಂದ ಸ್ಪೆಷಲ್‌ ವಿಡಿಯೊ: ಸೇಬಿನ ಹಾರದಲ್ಲಿ ಮಿಂಚಿದ ರಿಯಲ್ ಸ್ಟಾರ್!

Upendra Birthday

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಜನ್ಮದಿನ (ಸೆ.೧೮) ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದಲೇ ಅವರ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದರು. ಯುಐ ಸಿನಿಮಾ ಮೂಲಕ ಮತ್ತೆ ಉಪೇಂದ್ರ ನಿರ್ದೇಶನಕ್ಕೆ ಮರಳಿರುವುದು ಫ್ಯಾನ್ಸ್‌ಗೆ ದೊಡ್ಡ ಗಿಫ್ಟ್‌ ಕೊಟ್ಟಂತಾಗಿದೆ. ಈ ನಡುವೆ ಯುಐ ಸಿನಿಮಾ ತಂಡ ಒಂದು ವಿಶಿಷ್ಟ ವಿಡಿಯೊ ರಿಲೀಸ್‌ ಮಾಡಿದೆ.

ಏನಿದೆ ವಿಡಿಯೊದಲ್ಲಿ?
ಉಪ್ಪಿ ನಿರ್ದೇಶಕನ ಸೀಟಲ್ಲಿ ಕುಳಿತುಕೊಂಡಿದ್ದಾರೆ. ಮಾನಿಟರ್‌ ನೋಡುತ್ತಾ ಇರುತ್ತಾರೆ. ʻʻಸ್ವಲ್ಪ ಆಚೆ ಬನ್ನಿ ಸರ್‌. ಇವತ್ತು ನಿಮ್ಮ ಅಭಿಮಾನಿಗಳ ದಿನ. ಪ್ರಜಾ ಪ್ರಭುಗಳು ನಿಮಗೋಸ್ಕರ ಕಾಯ್ತಿದ್ದಾರೆ. ಬನ್ನಿ ಸಾರ್” ಎಂದು ಕ್ಯಾಮರಾ ಹಿಂದಿನಿಂದ ಡೈಲಾಗ್ ಬರುತ್ತಿದ್ದಂತೆಯೇ ಉಪ್ಪಿ ಥಮ್ಸ್ ಅಪ್ ಮಾಡುತ್ತಾರೆ. ನಂತರ ʻಕಮಿಂಗ್ ಸೂನ್ʼ ಎಂದು ಉಪ್ಪಿ ಹೇಳುತ್ತಾರೆ. ಇದೀಗ ಈ ವಿಡಿಯೊ ನೋಡಿ ಉಪ್ಪಿ ಫ್ಯಾನ್ಸ್‌ ಸಖತ್‌ ಕ್ಯೂರಿಯಸ್‌ ಆಗಿದ್ದಾರೆ. ಸಿನಿಮಾ ರಿಲೀಸ್ ಆಗುತ್ತೆ ಅಂತಾನಾ? ಇಲ್ಲಾ ಟೀಸರ್ ಬಿಡುತ್ತಾರಾ? ಟ್ರೈಲರ್ ಬಿಡ್ತಾರಾ? ಹೀಗೆ ನೂರೆಂಟು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ | Upendra Birthday : ನಮ್ ಉಪ್ಪಿ ಬಾಸ್ ಜತೆ ಸೆಲ್ಫಿ ತಗೋಳ್ಬೇಕು ಅನ್ನೋ ಆಸೆ ಅಷ್ಟೇ!

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಉಪ್ಪಿ ತ್ರಿಶೂಲಂ, ಕಬ್ಜಾ, ಬುದ್ಧಿವಂತ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬುದ್ಧಿವಂತ-2 ಸಿನಿಮಾ ಪೋಸ್ಟರ್‌ ಕೂಡ ರಿವೀಲ್‌ ಆಗಿದೆ. ಕಬ್ಜ ಚಿತ್ರತಂಡ ಜನ್ಮದಿನದ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ಟೀಸರ್‌ ಬಿಡುಗಡೆ ಮಾಡಿದ್ದು ಮಿಲಿಯನ್ ಗಟ್ಟಲೆ ವೀವ್ಸ್ ಪಡೆದುಕೊಂಡಿದೆ.

ಉಪೇಂದ್ರ ನಿವಾಸದ ಬಳಿ ಅಭಿಮಾನಗಳ ಸಾಗರವೇ ಹರಿದುಬಂದಿದೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿವಾಸದಲ್ಲಿ ಅಭಿಮಾನಿಗಳು ರಿಯಲ್ ಸ್ಟಾರ್ ದರ್ಶನಕ್ಕೆ ಕಾದು ನಿಂತಿದ್ದರು. ಉಪೇಂದ್ರ ಅಭಿಮಾನಿಗಳನ್ನು ಭೇಟಿಯಾಗಿ ಪ್ರೀತಿಯ ಶುಭ ಹಾರೈಕೆಗಳನ್ನು ಸ್ವೀಕರಿಸಿದ್ದಾರೆ. ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಹ ಫುಲ್ ಖುಷ್ ಆಗಿ ಸೆಲ್ಫಿ ತೆಗೆಸಿಕೊಂಡಿದ್ದಾರೆ. ರಾತ್ರಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಉಪ್ಪಿಗಾಗಿ ಫ್ಯಾನ್ಸ್ ವಿವಿಧ ಬಗೆಯ ಕೇಕ್ ತರಿಸಿದ್ದರು, ನಂತರ ಹೂವಿನ ಬುಟ್ಟಿಯಿಂದ ಹೂವಿನ ಸುರಿಮಳೆ ಸುರಿಸಿದರು. ಸೇಬಿನ ಹಾರದಲ್ಲಿ ಉಪ್ಪಿ ಕಂಗೊಳಿಸಿದರು.

ಇದನ್ನೂ ಓದಿ | Upendra Birthday : ಉಪ್ಪಿ ಬರ್ತಡೇಯಲ್ಲೊಬ್ಬ ಕ್ರೇಜಿ ಫ್ಯಾನ್!

Exit mobile version