Site icon Vistara News

Spy Movie : ಸುಭಾಷ್‌ ಚಂದ್ರಬೋಸ್‌ ಜೀವನ ಕಥೆಯ ʼಸ್ಪೈʼ ಟೀಸರ್‌ ರೋಚಕ!

#image_title

ನವದೆಹಲಿ: ಟಾಲಿವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ʼಸ್ಪೈʼ(Spy Movie). ʼಕಾರ್ತಿಕೇಯ-2ʼ ಬಳಿಕ ಅಖಿಲ್ ಸಿದ್ಧಾರ್ಥ್ ನಟಿಸುತ್ತಿರುವ ಆಕ್ಷನ್ ಪ್ಯಾಕ್ಡ್‌ ಕಥಾಹಂದರವಿರುವ ಈ ಚಿತ್ರದ ಟೀಸರ್‌ನ್ನು ದೆಹಲಿಯ ರಾಜಪಥದಲ್ಲಿರುವ ಸುಭಾಷ್ ಚಂದ್ರಬೋಸ್ ಪುತ್ಥಳಿ ಮುಂದೆ ಅನಾವರಣ ಮಾಡಲಾಗಿದೆ.

ಈ ಸಿನಿಮಾದಲ್ಲಿ ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳು, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಚಾರಿಕೆಯ ಪಾತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ಅಭಿನಯಿಸಿದ್ದಾರೆ. ಅವರಿಗೆ ಐಶ್ವರ್ಯ ಮೆನನ್ ನಾಯಕಿಯಾಗಿ, ಸಾನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Ayalaan Movie: ತಮಿಳು ನಟ ಶಿವಕಾರ್ತಿಕೇಯನ್ ‘ಅಯಲಾನ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್
ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರೂ ಆಗಿರುವ ಗ್ಯಾರಿ. ಬಿ. ಎಚ್ ಅವರು ಸ್ಪೈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ʼಎವರುʼ ಮತ್ತು ʼಹಿಟ್ʼ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ED ಎಂಟರ್‌ಟೈನ್‌ಮೆಂಟ್‌ ಅಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ.


ಸ್ಪೈ ಸಿನಿಮಾದ ಪೋಸ್ಟರ್ ಹಾಗೂ ಗ್ಲಿಂಪ್ಸ್ ನಿರೀಕ್ಷೆ ಹೆಚ್ಚಿಸಿದ್ದು, ಸಿನಿಮಾದಲ್ಲಿ ನಿಖಿಲ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತೋರಿಸಿಕೊಟ್ಟಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಮೂಡಿ ಬರುತ್ತಿರುವ ಚಿತ್ರಕ್ಕೆ ರಾಜಶೇಖರ್ ರೆಡ್ಡಿ ನಿರ್ಮಾಣದ ಜೊತೆಗೆ ಕಥೆ ಕೂಡ ಬರೆದಿದ್ದು, ಗ್ಯಾರಿ ಬಿ.ಎಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಐಶ್ವರ್ಯ ಮೆನನ್, ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.


ಹೈ ಬಜೆಟ್‌ನಲ್ಲಿ ತಯಾರಾಗಲಿರುವ ʼಸ್ಪೈʼ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ಮೆರುಗು ಸಿಕ್ಕಿದೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಕ್ಕಿದೆ. ಸ್ಪೈ ಜೂನ್ 29ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

Exit mobile version