Site icon Vistara News

Sreeleela Birthday: ಅಲ್ಲು ಅರ್ಜುನ್‌ ತೋಳಿನಲ್ಲಿ ಶ್ರೀಲೀಲಾ; ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿದ್ರು ಅಂದ್ರು ಫ್ಯಾನ್ಸ್‌!

Sreeleela shakes a leg with Allu Arjun

ಬೆಂಗಳೂರು: ಶ್ರೀಲೀಲಾ ಜನುಮದಿನದ (Sreeleela Birthday) ಪ್ರಯುಕ್ತ ಸಾಲು ಸಾಲು ಸಿನಿಮಾಗಳ ಪೋಸ್ಟರ್‌ ಬಿಡುಗಡೆಗೊಳ್ಳುತ್ತಿದೆ. ಇಷ್ಟೇ ಅಲ್ಲ, ಅಲ್ಲು ಅರ್ಜುನ್‌ ಜತೆ ನಟಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಆಹಾ ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಜಾಹೀರಾತನ್ನು ಚಿತ್ರೀಕರಿಸಿದ್ದಾರೆ. ಇದೀಗ ಆಹಾ ಈ ಪೋಸ್ಟರ್‌ ಹಂಚಿಕೊಂಡಿದೆ. ಮುಂಬರುವ ಜಾಹೀರಾತಿನಲ್ಲಿ ಇವರಿಬ್ಬರು ಒಟ್ಟಿಗೆ ಡ್ಯಾನ್ಸ್‌ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಆಹಾ ಒಟಿಟಿಯನ್ನು ಅಲ್ಲು ಅರವಿಂದ್ ಸ್ಥಾಪಿಸಿದ್ದಾರೆ. ಇದು ತೆಲುಗು ಮತ್ತು ತಮಿಳು ಕಟೆಂಟ್‌ಗಳನ್ನು ಸ್ಟ್ರೀಮ್ ಮಾಡುತ್ತದೆ. ಶ್ರೀಲೀಲಾ ಹುಟ್ಟು ಹಬ್ಬಕ್ಕೆ ಐದಕ್ಕೂ ಹೆಚ್ಚು ಸಿನಿಮಾ ತಂಡಗಳಿಂದ ನಟಿಗೆ ಬರ್ತ್​ಡೇ ವಿಶ್ ಬಂದಿದೆ. ಈ ಮೂಲಕ ನಟಿ ರಶ್ಮಿಕಾ ಮಂದಣ್ಣ ಅವರನ್ನು ಹಿಂದಿಕ್ಕಿದ್ದಾರೆ. ಶ್ರೀಲೀಲಾ ಕನ್ನಡದ ನಟಿ. ಸದ್ಯ ಅವರ ಕೈಯಲ್ಲಿ ಅಧಿಕೃತವಾಗಿ 7ಕ್ಕೂ ಹೆಚ್ಚು ತೆಲುಗು ಸಿನಿಮಾಗಳಿವೆ. ಟಾಲಿವುಡ್‌ ನಟ ಮಹೇಶ್‌ ಬಾಬು (Mahesh Babu ) ಅಭಿನಯದ ‘ಗುಂಟೂರು ಖಾರಂ’ ಸಿನಿಮಾದಲ್ಲಿ (Guntur Kaaram) ಶ್ರೀಲೀಲಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್​ನ ಬೇಡಿಕೆಯ ನಟಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿ ಅವರು ನಟಿಸಿದ್ದಾರೆ. ಈಗ ಟಾಲಿವುಡ್​ನಲ್ಲಿ ಶ್ರೀಲೀಲಾ ಬೇಡಿಕೆ ಹೆಚ್ಚುತ್ತಿದೆ. ಇದೀಗ ಶ್ರೀಲೀಲಾ ಅವರ ಸಾಲು ಸಾಲು ಸಿನಿಮಾಗಳ ಪೋಸ್ಟರ್‌ ಕಂಡು ಅಂತೂ ರಶ್ಮಿಕಾರನ್ನ ಹಿಂದಿಕ್ಕಿದ್ರು ಎಂದು ನೆಟ್ಟಿಗರು ಸೋಷಿಯಲ್‌ ಮೀಡಿಯಾಗಳಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಸಿತಾರಾ ಎಂಟರ್​ಟೇನ್‌ಮೆಂಟ್ಸ್‌​ ಮತ್ತು ಫಾರ್ಚೂನ್​ ಫೋರ್​ ಸಿನಿಮಾಸ್​ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ‘ವಿಡಿ 12’ ಚಿತ್ರದಲ್ಲಿ ಶ್ರೀಲೀಲಾ ವಿಜಯ್‌ ದೇವರಕೊಂಡ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶ್ರೀಲೀಲಾ ಅವರು ‘ಪೆಲ್ಲಿ ಸಂದದ್ʼ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ; Sreeleela Birthday: ಕನ್ನಡತಿ ಶ್ರೀಲೀಲಾಗೆ ಜನುಮದಿನ ಸಂಭ್ರಮ; ನಟಿಯ ‘ಗುಂಟೂರು ಖಾರಂ’ ಸಿನಿಮಾದ ಫಸ್ಟ್‌ ಲುಕ್‌ ಔಟ್‌!

ಟಾಲಿವುಡ್ ಚಿತ್ರರಂಗದ ನಟ ಉಸ್ತಾದ್ ರಾಮ್ ಪೋತಿನೇನಿ ನಟನೆಯ ‘ಬೋಯಾಪಾಟಿ ರ‍್ಯಾಂಪೋ’ (Boyapati Rapo) ಚಿತ್ರದಲ್ಲಿ ನಟಿ ನಾಯಕಿಯಾಗಿ ಮಿಂಚಲಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ʻಭಗವಂತ್‌ ಕೇಸರಿʼ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ (Nandamuri Balakrishna) ಮತ್ತು ನಟಿ ಶ್ರೀಲೀಲಾ (Actress Sreeleela) ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version