ಬೆಂಗಳೂರು: ನಿರ್ಮಾಪಕ ಬೋನಿ ಕಪೂರ್ (Boney Kapoor) ಪತ್ನಿ ಶ್ರೀದೇವಿ ಅವರ ಪುಣ್ಯತಿಥಿ (Sridevi Death Anniversary) ಹಿನ್ನೆಲೆಯಲ್ಲಿ ಅವರೊಂದಿಗಿನ ನೆನಪುಗಳನ್ನು ಫೋಟೊ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್ ನಟಿ ಶ್ರೀದೇವಿ 2018ರ ಫೆಬ್ರವರಿ 24ರಂದು ನಿಧನರಾದರು. ಪತಿ ಬೋನಿ ಕಪೂರ್ ಅವರು ಶ್ರೀದೇವಿ ಜತೆಗಿನ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ವೇಷಭೂಷಣದಲ್ಲಿರುವ ಶ್ರೀದೇವಿ ಅವರೊಂದಿಗಿನ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೊ ಹಂಚಿಕೊಂಡು “1984ರಲ್ಲಿ ತೆಗೆದ ನಮ್ಮ ಮೊದಲ ಚಿತ್ರ.” ಎಂದು ಕ್ಯಾಪ್ಷನ್ ಬರೆದಿದ್ದಾರೆ. ಶ್ರೀದೇವಿ ಕೆನ್ನೆಗೆ ಮುತ್ತಿಟ್ಟಿರುವ ಮತ್ತೊಂದು ಚಿತ್ರವನ್ನು ಹಂಚಿಕೊಂಡ ಬೋನಿ, “ಜಸ್ಟ್ ಎಕ್ಸ್‌ಪ್ರೆಸ್” ಎಂದು ಬರೆದಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದಂಪತಿ ಲಿಪ್‌ಲಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ʻʻಅವಳು ಪ್ರೀತಿಯಲ್ಲಿ ಬಿದ್ದಾಗ” ಎಂದು ಕ್ಯಾಪ್ಷನ್ ನೀಡಿದ್ದಾರೆ.
ಶ್ರೀದೇವಿ ಅವರನ್ನು ನೆನೆದು ನಟ ಸರಳ ಭಾವಚಿತ್ರವನ್ನು ಹಂಚಿಕೊಂಡು , ‘ನೀನು ನಮ್ಮನ್ನು ಬಿಟ್ಟು ಹೋಗಿ 5 ವರ್ಷ ಆಯಿತು. ನಿನ್ನ ನೆನಪು ಮತ್ತು ಪ್ರೀತಿಯೇ ನಮ್ಮನ್ನು ಮುಂದುವರಿಸುತ್ತಿದೆ. ಅವು ನಮ್ಮ ಜತೆ ಸದಾ ಇರುತ್ತವೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actress Sridevi : ಶ್ರೀದೇವಿಯನ್ನು ನೆನಪಿಸಿಕೊಂಡ ಕುಟುಂಬ; ನಿನಗಾಗಿ ಇಂದಿಗೂ ಹುಡುಕುವೆ ಎಂದ ಜಾಹ್ನವಿ
ಇದನ್ನೂ ಓದಿ: Actress Sridevi : ಚೀನಾದ 6000 ತೆರೆಗಳಲ್ಲಿ ಬಿಡುಗಡೆಯಾಗಲಿದೆ ಶ್ರೀದೇವಿಯ ʼಇಂಗ್ಲಿಷ್ ವಿಂಗ್ಲಿಷ್ʼ
ಅವರ ಮಗಳು ಜಾಹ್ನವಿ ಕಪೂರ್ ಈ ಸಂದರ್ಭದಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ‘ಅಮ್ಮಾ… ಈಗಲೂ ನಾನು ನಿಮಗಾಗಿ ಎಲ್ಲ ಕಡೆಗಳಲ್ಲಿ ಹುಡುಕುತ್ತಿದ್ದೇನೆ. ನಿಮಗೆ ಹೆಮ್ಮೆ ತರುವೆನೆಂಬ ಭರವಸೆಯಲ್ಲಿ ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವೆ. ನಾನು ಎಲ್ಲಿಯೇ ಹೋದರೂ ಏನೇ ಮಾಡಿದರೂ ಅದು ನಿಮ್ಮಿಂದಲೇ ಶುರುವಾಗುತ್ತದೆ ಹಾಗೂ ನಿಮ್ಮಲ್ಲೇ ಮುಗಿಯುತ್ತದೆ’ ಎಂದು ಜಾಹ್ನವಿ ಕಪೂರ್ ಇನ್ಸ್ಟಾಗ್ರಾಮ್ನಲ್ಲಿಪೋಸ್ಟ್ ಮಾಡಿದ್ದಾರೆ.