ಬೆಂಗಳೂರು : ಜನಪ್ರಿಯ ತೆಲುಗು ಕಂಠದಾನ ಕಲಾವಿದ ಎ. ಶ್ರೀನಿವಾಸ ಮೂರ್ತಿ (Srinivasa Murthy) ಅವರು ಅನಾರೋಗ್ಯದಿಂದ ಜನವರಿ 27 ಶುಕ್ರವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಟಾಲಿವುಡ್‌ನಲ್ಲಿ ನೆಗೆಟಿವ್ ರೋಲ್‌ಗಳಿಗೆ ಧ್ವನಿ ನೀಡುವುದರಲ್ಲಿ ಖ್ಯಾತಿ ಪಡೆದಿದ್ದರು. ವಿಶೇಷವಾಗಿ ತಮಿಳು ನಟ ಸೂರ್ಯ ಅವರಿಗೆ ಶಾಶ್ವತವಾಗಿ ಕಂಠದಾನ ಮಾಡಿದ್ದಾರೆ.
ಶ್ರೀನಿವಾಸ್ ಅವರು 1990ರಲ್ಲಿ ಟಾಲಿವುಡ್‌ನಲ್ಲಿ ಡಬ್ಬಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅರ್ಜುನ್ ಸರ್ಜಾ ಅಭಿನಯದ, ‘ಒಕೆ ಒಕ್ಕಡು’ ಸಿನಿಮಾದಲ್ಲಿ ಮೊದಲು ಕಂಠದಾನ ಮಾಡಿದ್ದಾರೆ. ಈ ಸಿನಿಮಾ ಎ. ಶ್ರೀನಿವಾಸ ಮೂರ್ತಿ ಅವರಿಗೆ ಟಾಲಿವುಡ್‌ನಲ್ಲಿ ಬ್ರೇಕ್ ನೀಡಿತು. ಇತರ ಜನಪ್ರಿಯ ತಮಿಳು ತಾರೆಗಳಾದ ಅಜಿತ್ ಮತ್ತು ಚಿಯಾನ್ ವಿಕ್ರಮ್ ಅವರಂತಹ ನಟರಿಗೆ ಕಂಠದಾನ ಮಾಡಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ತೆಲುಗಿನಲ್ಲಿ ಮತ್ತು ಕನ್ನಡ ನಟ ಉಪೇಂದ್ರ ಅವರ ತೆಲುಗು ಆವೃತ್ತಿಯಲ್ಲಿ ಡಬ್ಬಿಂಗ್ ನೀಡಿದ್ದಾರೆ.
ಇದನ್ನೂ ಓದಿ: Anganawadi workers | ಪ್ರತಿಭಟನೆ ವೇಳೆ ಅನಾರೋಗ್ಯಕ್ಕೀಡಾದ ಅಂಗನವಾಡಿ ಕಾರ್ಯಕರ್ತೆ ನಿಧನ
ಇದನ್ನೂ ಓದಿ: Dr. Manjappa: ನಾಲ್ಕು ತಲೆಮಾರಿಗೆ ಚಿಕಿತ್ಸೆ ನೀಡಿದ್ದ 2 ರೂಪಾಯಿ ವೈದ್ಯ ಖ್ಯಾತಿಯ ಡಾ. ಮಂಜಪ್ಪ ನಿಧನ
ಇತ್ತೀಚೆಗೆ ಅವರು ಅಜಿತ್ ಅವರ ‘ವಿಶ್ವಾಸಂ’ ಮತ್ತು ಆರ್.ಮಾಧವನ್ ಅವರ ʻರಾಕೆಟ್ರಿ; ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದಾರೆ. ಡಬ್ಬಿಂಗ್ ಮಾಡುವುದರ ಜತೆಗೆ ಒಂದೆರಡು ತೆಲುಗು ಚಲನಚಿತ್ರಗಳಲ್ಲಿ ಅಭಿನಯಸಿದ್ದಾರೆ. ಶ್ರೀನಿವಾಸ ಮೂರ್ತಿ ಅವರು ಹಿರಿಯ ಹಿನ್ನೆಲೆ ಗಾಯಕ ಎವಿಎನ್ ಮೂರ್ತಿಯವರ ಪುತ್ರ. ಸಂದರ್ಶನವೊಂದರಲ್ಲಿ, ಅವರು ಡಬ್ಬಿಂಗ್ ಕಲಾವಿದರಾಗಿ ಯಶಸ್ಸನ್ನು ನೋಡುವ ಬದಲು ತಮ್ಮ ಜೀವನದಲ್ಲಿ ಸಾಕಷ್ಟು ಆರ್ಥಿಕ ತೊಂದರೆಗಳನ್ನು ಎದುರಿಸುವುದಾಗಿ ಹೇಳಿಕೊಂಡಿದ್ದರು.