Site icon Vistara News

Dunki Box Office: ಮೊದಲ ದಿನವೇ ಅತ್ಯಂತ ಕಡಿಮೆ ಗಳಿಕೆ ಕಂಡ ಶಾರುಖ್‌ ಸಿನಿಮಾ ʻಡಂಕಿʼ!

sharukh Film dunki

ಬೆಂಗಳೂರು: ‘ಪಠಾಣ್‌’ ಮತ್ತು ‘ಜವಾನ್’ ನಂತರ ‘ಡಂಕಿ’ (Dunki Box Office) ಶಾರುಖ್ ಖಾನ್ ಅವರ ಈ ವರ್ಷದ ಮೂರನೇ ಸಿನಿಮಾವಾಗಿದೆ. ಡಿಸೆಂಬರ್ 21ರಂದು ಚಿತ್ರವು ವಿಶ್ವಾದ್ಯಂತ ತೆರೆ ಕಂಡಿದೆ. ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ನಿರ್ದೇಶನವನ್ನು ನೋಡಲು ಮೊದಲ ದಿನವೇ ಅಪಾರ ಸಂಖ್ಯೆಯಲ್ಲಿ ಸಿನಿರಸಿಕರು ಚಿತ್ರಮಂದಿರಗಳಲ್ಲಿ ಬಂದಿದ್ದರು. ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಆರಂಭಿಕ ಅಂದಾಜಿನ ಪ್ರಕಾರ, ಈ ಚಿತ್ರವು ಭಾರತದಲ್ಲಿ ಸುಮಾರು 30 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.

ಶಾರುಖ್ ಖಾನ್ ಅವರ ‘ಡಂಕಿ’ ಡಿಸೆಂಬರ್ 21ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಇಂದು (ಡಿಸೆಂಬರ್ 22 ಬಿಡುಗಡೆಯಾದ ಸಲಾರ್‌ ಜತೆ ಸಿನಿಮಾ ಕ್ಲಾಶ್‌ ಆಗಿದೆ. ‘ಡಂಕಿ’ ಶಾರುಖ್ ಖಾನ್ ಅವರ ಹೃದಯಕ್ಕೆ ಹತ್ತಿರವಾದ ಸಿನಿಮಾವಾಗಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸುವಂತೆ ಶಾರುಖ್‌ ಮನವಿ ಮಾಡಿದ್ದರು. ಇದೀಗ ಸಿನಿಮಾ ಭಾರತದಲ್ಲಿ 30 ಕೋಟಿ ರೂಪಾಯಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. 2023ರ ಶಾರುಖ್‌ ಅವರ ಒಟ್ಟೂ ಸಿನಿಮಾಗಳಲ್ಲಿ ಈ ಸಿನಿಮಾ ಮೊದಲ ದಿನದ ಅತ್ಯಂತ ಕಡಿಮೆ ಸಂಗ್ರಹವಾಗಿದೆ.

2023ರ ಶಾರುಖ್‌ ಅವರ ಮೊದಲ ಸಿನಿಮಾ ಪಠಾಣ್‌ ವಿಶ್ವಾದ್ಯಂತ 106 ಕೋಟಿ ಗಳಿಸಿತು, ಆದರೆ ‘ಜವಾನ್’ ಜಾಗತಿಕವಾಗಿ 129.6 ಕೋಟಿ ರೂ. ಗಳಿಕೆ ಕಂಡಿತ್ತು. ‘ಡಂಕಿ’ ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಸಾಧಾರಣ ಓಪನಿಂಗ್ ನಿರೀಕ್ಷಿಸಲಾಗಿದೆ. ಆದರೆ, ವಾರಾಂತ್ಯದಲ್ಲಿ ಸಂಗ್ರಹಣೆಯಲ್ಲಿ ಏರಿಕೆ ಕಂಡುಬರಬಹುದು ಎಂದು ವರದಿ ಆಗಿವೆ. ಡಿಸೆಂಬರ್ 21ರಂದು, ಚಿತ್ರವು ಶೇಕಡಾ 29.94ರಷ್ಟು ಆಕ್ಯುಪೆನ್ಸಿಯನ್ನು ದಾಖಲಿಸಿದೆ.

ಇದನ್ನೂ ಓದಿ; Shahrukh Khan: ಪಠಾಣ್‌ನಿಂದ ಜವಾನ್‌, ಡಂಕಿ ಸಿನಿಮಾಗಳಿಗೆ ಲಾಭವಾಗುತ್ತಾ? ಶಾರುಖ್‌ ಬಗ್ಗೆ ಭವಿಷ್ಯ ನುಡಿದ ತಜ್ಞರು!

ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್, ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.

Exit mobile version