Site icon Vistara News

SS Rajamouli: 10 ಭಾಗಗಳಲ್ಲಿ ಮಹಾಭಾರತ ಸಿನಿಮಾ: ಕನಸಿನ ಪ್ರಾಜೆಕ್ಟ್‌ ಬಗ್ಗೆ ರಾಜಮೌಳಿ ಹೇಳಿದ್ದೇನು?

SS Rajamouli On His Dream Project 'Mahabharata'

ಬೆಂಗಳೂರು: ಈಗಾಗಲೇ ಟಾಲಿವುಡ್‌ನಲ್ಲಿ ರಾಮಾಯಣವನ್ನೇ ಆಧಾರವಾಗಿಸಿಕೊಟ್ಟುಕೊಂಡು ಓಂ ರಾವತ್ `ಆದಿಪುರುಷ್‌’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೇ ಜೂನ್‌ 16ರಂದು ತೆರೆ ಕಾಣುತ್ತಿದೆ. ಇದರ ಬೆನ್ನಲ್ಲೇ ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli) ಮಹಾಭಾರತ ಕತೆಯನ್ನು ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮದ ಮುಂದೆ ರಾಜಮೌಳಿ ಈ ಬಗ್ಗೆ ಮಾತನಾಡಿ ʻʻ ಮಹಾಭಾರತ ನನ್ನ ನೆಚ್ಚಿನ ಕತೆ, ಕನಿಷ್ಠ 10 ಭಾಗ​ಗಳಲ್ಲಿ ಆ ಕತೆಯನ್ನು ಸಿನಿಮಾ ಮಾಡಬಹುದು. ಅದು ನನ್ನ ಆಸೆʼʼ ಎಂದು ಹೇಳಿಕೊಂಡಿದ್ದಾರೆ. 

ಈ ಹಿಂದೆ, ರಾಜಮೌಳಿ ಅವರು ಮೂಲ ಮಹಾಭಾರತಕ್ಕೆ ತಮ್ಮದೇ ಸ್ಕ್ರಿಪ್ಟ್ ಮಾಡುವುದಾಗಿ ಹೇಳಿಕೊಂಡಿದ್ದರು. ಅದೆಷ್ಟೋ ಬಾರಿ ರಾಜಮೌಳಿ ಮಹಾಭಾರತ ಕಥೆ ತಮಗೆ ಅಚ್ಚುಮೆಚ್ಚು ಎಂದು ಹೇಳಿಕೊಂಡಿದ್ದರು. ಮಹಾಭಾರತ ಕತೆಯನ್ನು ತೆರೆಗೆ ತರಬೇಕು ಎಂಬುದು ರಾಜಮೌಳಿಯ ಆಸೆ. ಈ ಬಗ್ಗೆ ಅವರೇ ಈಗ ಮತ್ತಷ್ಟು ವಿವರ ನೀಡಿದ್ದಾರೆ.

“ನಾನು ಮಹಾಭಾರತವನ್ನು ನಿರ್ಮಿಸುವ ಹಂತಕ್ಕೆ ಬಂದರೆ, ದೇಶದಲ್ಲಿ ಲಭ್ಯವಿರುವ ಮಹಾಭಾರತದ ಆವೃತ್ತಿಗಳನ್ನು ಓದಲು ನನಗೆ ಒಂದು ವರ್ಷ ಬೇಕಾಗುತ್ತದೆ. ಮಹಾಭಾರತ ನನ್ನ ನೆಚ್ಚಿನ ಕತೆ, ಕನಿಷ್ಠ 10 ಭಾಗ​ಗಳಲ್ಲಿ ಆ ಕತೆಯನ್ನು ಸಿನಿಮಾ ಮಾಡಬಹುದು. ಮಹಾಭಾರತಕ್ಕೆ ನಾನು ಬರೆಯುವ ಪಾತ್ರಗಳು ನೀವು ಹಿಂದೆ ನೋಡಿದ ಅಥವಾ ಓದಿದಂತೆಯೇ ಇರುವುದಿಲ್ಲ. ನಾನು ಮಹಾಭಾರತವನ್ನು ನನ್ನದೇ ಆದ ರೀತಿಯಲ್ಲಿ ಹೇಳುತ್ತೇನೆ. ಆದರೆ ಮಹಾಭಾರತ ಕಥೆ ಒಂದೇ ಆಗಿರುತ್ತದೆʼʼ ಎಂದು ರಾಜಮೌಳಿ ಹೇಳಿದ್ದಾರೆ.

ಇದನ್ನೂ ಓದಿ: Time’s 100 Most Influential List : ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್‌ ಖಾನ್, ಎಸ್ ಎಸ್ ರಾಜಮೌಳಿ

ಮಹೇಶ್‌ ಬಾಬು ಜತೆ ಬ್ಯುಸಿಯಾದ ರಾಜಮೌಳಿ

ಸದ್ಯ ರಾಜಮೌಳಿ ಅವರು ಮಹೇಶ್‌ ಬಾಬು ಜತೆ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದಲ್ಲಿ ಕಾಡಿನಲ್ಲಿ ನಡೆಯುವ ಸಾಹಸಮಯ ದೃಶ್ಯಗಳು ಸಾಕಷ್ಟಿವೆ ಎಂದು ವರದಿಯಾಗಿದೆ. ಭಾರತದ ಕೆಲವು ನಗರಗಳು, ಅಮೆಜಾನ್ ಕಾಡುಗಳು, ದುಬೈ ಮರುಭೂಮಿ ಸೇರಿದಂತೆ ಇನ್ನೂ ವಿಶೇಷ ಪ್ರದೇಶಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್‌ ಅಧಿಕೃತವಾಗಿ ಆರಂಭವಾಗಲಿದೆ. ಈ ಸಿನಿಮಾ ಬಗ್ಗೆ ಆರ್‌ಆರ್‌ಆರ್‌ ಬಿಡುಗಡೆಯಾಗುವ ಮುಂಚೆಯೇ ಘೋಷಣೆ ಮಾಡಿದ್ದರು ರಾಜಮೌಳಿ.

ರಾಜಮೌಳಿ ಅವರು ಈ ಸಿನಿಮಾಗಾಗಿ ಮಹೇಶ್‌ ಬಾಬು ಅವರ ಲುಕ್‌ ಮತ್ತು ಮ್ಯಾನರಿಸಂ ಬದಲಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್‌ ಭರದಿಂದ ಸಾಗಿದ್ದು, ಈ ಡೈನಾಮಿಕ್ ಜೋಡಿ ತೆರೆ ಮೇಲೆ ಬರುವುದನ್ನು ಸಿನಿಪ್ರಿಯರು ಕಾಯುತ್ತಿದ್ದಾರೆ. ರಾಜಮೌಳಿ ಜತೆಗಿನ ಈ ಚಿತ್ರ ಮಹೇಶ್‌ ಬಾಬು ಅವರ 29ನೇ ಸಿನಿಮಾ ಆಗಿದೆ. ತಾತ್ಕಾಲಿಕವಾಗಿ SSMB29 ಹೆಸರು ನೀಡಲಾಗಿದೆ. ಮತ್ತು ಈ ಸಿನಿಮಾದಲ್ಲಿ ಆರ್‌ಆರ್‌ಆರ್‌ಗಿಂತ ಹೆಚ್ಚು ವಿಎಫ್‌ಎಕ್ಸ್‌ ತಂತ್ರಜ್ಞಾನ ಬಳಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: NTR 30: ಎನ್‌ಟಿಆರ್‌ 30 ಮುಹೂರ್ತ; ರಾಜಮೌಳಿಗೆ ಜೂನಿಯರ್ ಎನ್‌ಟಿಆರ್ ಬೆಚ್ಚಗಿನ ಅಪ್ಪುಗೆ

ರಾಜಮೌಳಿ, ಕೆ.ಎಲ್‌. ನಾರಾಯಣ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅರಣ್ಯದಲ್ಲೇ ಚಿತ್ರೀಕರಣ ಮಾಡುವುದೆಂದರೆ ರಾಜಮೌಳಿಗೆ ಇಷ್ಟ. ಈ ಸಿನಿಮಾದಲ್ಲಿ ಕಾಡಿನ ದೃಶ್ಯಗಳು ಫೋಕಸ್‌ ಎನ್ನಲಾಗುತ್ತಿರುವುದರಿಂದ ಸಿನಿಮಾ ಪ್ರಿಯರ ಕ್ರೇಜ್‌ ಹೆಚ್ಚಾಗಿದೆ.

Exit mobile version