Site icon Vistara News

SS Rajamouli : ಆರ್​ಎಸ್​ಎಸ್​ ಕಥೆ ಓದಿ ಗಳಗಳನೆ ಅತ್ತಿದ್ದ ರಾಜಮೌಳಿ; ಸಿನಿಮಾ ಮಾಡುವ ಬಗ್ಗೆಯೂ ಮಾತಾಡಿದ ನಿರ್ದೇಶಕ

#image_title

ಹೈದರಾಬಾದ್ : ದಕ್ಷಿಣ ಭಾರತದ ಪ್ರಸಿದ್ಧ ನಿರ್ದೇಶಕ ಎಸ್.ಎಸ್.ರಾಜಮೌಳಿ (SS Rajamouli) ಅವರ ‘ಆರ್ ಆರ್ ಆರ್’ ಸಿನಿಮಾ ದಾಖಲೆಗಳನ್ನು ನಿರ್ಮಿಸಿ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ ರಾಜಮೌಳಿ ಅವರು ಆರ್ಎಸ್ಎಸ್ ಕಥೆಯನ್ನೂ ಸಿನಿಮಾ ಮಾಡುವ ಬಗ್ಗೆ ಮಾತನ್ನು ಆಡಿದ್ದಾರೆ.

ಇದನ್ನೂ ಓದಿ: Viral Video : ಹಾಸ್ಟೆಲ್ ಊಟ ಹೀಗಿರತ್ತೆ ನೋಡಿ! ಐರನ್ ಚಪಾತಿ ವಿಡಿಯೊ ವೈರಲ್
ರಾಜಮೌಳಿ ಅವರ ತಂದೆ, ಪ್ರಸಿದ್ಧ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಆರ್ಎಸ್ಎಸ್ ಬಗ್ಗೆ ಕಥೆಯೊಂದನ್ನು ಬರೆದಿದ್ದಾರಂತೆ. ಅದನ್ನು ಓದಿರುವ ರಾಜಮೌಳಿ ಅವರು ಕಣ್ಣೀರು ಹಾಕಿರುವುದಾಗಿ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, “ನನಗೆ ಆರ್‌ಎಸ್‌ಎಸ್ ಬಗ್ಗೆ ಹೆಚ್ಚು ತಿಳಿದಿಲ್ಲ. ಸಂಸ್ಥೆ ಹೇಗೆ ರೂಪುಗೊಂಡಿತು, ಅವರ ನಿಖರವಾದ ನಂಬಿಕೆಗಳು ಯಾವುವು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಆದರೆ ನಾನು ನನ್ನ ತಂದೆ ಬರೆದಿರುವ ಕಥೆಯನ್ನು ಓದಿದ್ದೇನೆ. ಅದು ಅತ್ಯಂತ ಭಾವನಾತ್ಮಕವಾಗಿದೆ. ಆ ಕಥೆ ಓದುವಾಗ ನಾನು ಅನೇಕ ಬಾರಿ ಅತ್ತಿದ್ದೇನೆ” ಎಂದು ಹೇಳಿದ್ದಾರೆ.

ಆ ಕಥೆಗೆ ನಿರ್ದೇಶನ ಮಾಡಿ ಸಿನಿಮಾ ರೂಪದಲ್ಲಿ ಹೊರ ತರುವ ಯೋಚನೆ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, “ನಾನು ಓದಿದ ಕಥೆ ತುಂಬಾ ಭಾವನಾತ್ಮಕ ಮತ್ತು ತುಂಬಾ ಚೆನ್ನಾಗಿದೆ. ಆದರೆ ಅದು ಸಮಾಜದ ಬಗ್ಗೆ ಏನು ಸೂಚಿಸುತ್ತದೆ ಎಂದು ತಿಳಿದಿಲ್ಲ. ನನ್ನ ತಂದೆ ಆ ಸ್ಕ್ರಿಪ್ಟ್ ಅನ್ನು ಬೇರೆ ಯಾವುದಾದರೂ ಸಂಸ್ಥೆ ಅಥವಾ ನಿರ್ಮಾಪಕರಿಗಾಗಿ ಬರೆದಿದ್ದಾರೆಯೇ ಎಂದು ನನಗೆ ಖಚಿತವಿಲ್ಲ. ಆ ಕಥೆಯನ್ನು ನಿರ್ದೇಶಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ನಿರ್ದೇಶಿರುತ್ತೇನೆ. ಏಕೆಂದರೆ ಅದು ತುಂಬಾ ಸುಂದರವಾದ, ಮಾನವೀಯ, ಭಾವನಾತ್ಮಕ ಕಥೆಯಾಗಿದೆ. ಆದರೆ ಆ ಕಥೆಯ ಪರಿಣಾಮಗಳ ಬಗ್ಗೆ ನನಗೆ ತಿಳಿದಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Viral News: ಕಾಂಟ್ಯಾಕ್ಟ್‌ ಲೆನ್ಸ್‌ ಹಾಕಿಕೊಂಡು ಮಲಗಿದವನ ಒಂದು ಕಣ್ಣನ್ನೇ ತಿಂದುಹಾಕಿದ ಕೀಟಗಳು

ವಿಜಯೇಂದ್ರ ಪ್ರಸಾದ್‌ ಅವರು ಬಾಹುಬಲಿ, ಆರ್‌ಆರ್‌ಆರ್, ಮಗಧೀರ, ಮಣಿಕರ್ಣಿಕಾ ಮತ್ತು ಮೆರ್ಸಲ್ ಅಂತಹ ಅದ್ಭುತ ಸಿನಿಮಾಗಳಿಗೆ ಕಥೆ ಬರೆದಿದ್ದಾರೆ. ಅವರ ಮುಂಬರುವ ಕೆಲವು ಸಿನಿಮಾಗಳಲ್ಲಿ ‘ಅಪರಾಜಿತ ಅಯೋಧ್ಯೆ’ ಮತ್ತು ‘ಪವನ್ ಪುತ್ರ ಭಾಯಿಜಾನ್’ ಕೂಡ ಸೇರಿಕೊಂಡಿವೆ.

Exit mobile version