Site icon Vistara News

Rajamouli | ರಾಜಮೌಳಿ ಕಿರೀಟಕ್ಕೆ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ

Rajamouli

ಬೆಂಗಳೂರು: ಎಸ್​ಎಸ್​​ ರಾಜಮೌಳಿ (Rajamouli) ಅವರು ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ (New York Film Critics Circle) ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸ್ಟೀವನ್ ಸ್ಪಿಲ್‌ಬರ್ಗ್‌, ಡ್ಯಾರನ್ ಅರೋನೊಫಿಸ್‌ಕಿ, ಸಾರಾ ಪೊಲ್ಲಿ ಮತ್ತು ಗಿನಾ ಪ್ರಿನ್ಸ್-ಬ್ಲೈಥ್‌ವುಡ್ ಅವರ ಪ್ರತಿಸ್ಪರ್ಧಿಗಳ ಮಧ್ಯೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ನ್ಯೂಯಾರ್ಕ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ 1935ರಲ್ಲಿ ಸ್ಥಾಪನೆಯಾದ ಅಮೆರಿಕಾದ ಅತ್ಯಂತ ಹಳೆಯ ವಿಮರ್ಶಕರ ಗುಂಪುಗಳಲ್ಲಿ ಒಂದು. ಈ ತಂಡದಲ್ಲಿ ಪತ್ರಿಕೆ, ನಿಯತಕಾಲಿಕೆ ಮತ್ತು ಆನ್​ಲೈನ್​ ಪ್ರಕಟಣಾ ಸದಸ್ಯರನ್ನು ಹೊಂದಿದೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್‌ನಲ್ಲಿ, ಟಾಡ್ ಫೀಲ್ಡ್ಸ್ ಟಾರ್ (Todd Field’s Tar) ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕೇಟ್ ಬ್ಲಾಂಚೆಟ್ ಅವರ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ನಲ್ಲಿನ (Everything Everywhere All At Once) ಅವರ ಅಭಿನಯಕ್ಕಾಗಿ ಕೆ ಹುಯ್ ಕ್ವಾನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ, ನೋಪ್ (Nope) ಚಿತ್ರಕ್ಕಾಗಿ ಕೇಕ್‌ ಪಾಮರ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದನ್ನೂ ಓದಿ | ಆರ್‌ಆರ್‌ಆರ್‌ ನಂತರ ಈಗ NTR 30: ಬ್ಲ್ಯಾಕ್‌ ಷೇಡ್‌ನಲ್ಲಿ ಮತ್ತೊಂದು ಸಿನಿಮಾ?

RRR ಸಿನಿಮಾ ವಿದೇಶಿ ಮಾರುಕಟ್ಟೆಗಳಲ್ಲಿ ಸಖತ್‌ ಸೌಂಡ್‌ ಮಾಡಿತ್ತು. ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದೆ.

‘ಆರ್​ಆರ್​ಆರ್’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಜೂನಿಯರ್ ಎನ್​ಟಿಆರ್​, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್​ ಮತ್ತು ಇತರೆ ಸಹಕಲಾವಿದರು ನಟಿಸಿದ್ದಾರೆ. ಮಾರ್ಚ್ 2022 ರಲ್ಲಿ ಬಿಡುಗಡೆಯಾದ ‘RRR’ ಚಿತ್ರ ಇಬ್ಬರು ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಪಾತ್ರಗಳನಿಟ್ಟುಕೊಂಡು ಮಾಡಿದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ.

ವಿಶ್ವಾದ್ಯಂತ 1200 ಕೋಟಿ ರೂ ಹೆಚ್ಚು ಗಳಿಕೆ ಕಂಡು ಭಾರತದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು. ಭಾರತೀಯ ಚಲನಚಿತ್ರ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆಯಿತು.

ಇದನ್ನೂ ಓದಿ | ʻಆರ್‌ಆರ್‌ಆರ್‌ʼಗೆ ಸಿಕ್ತು ಸೆನ್ಸಾರ್ ಸರ್ಟಿಫಿಕೇಟ್‌.. ʻಬಾಹುಬಲಿ-2ʼ ಚಿತ್ರವನ್ನೇ ಮೀರಿಸುತ್ತೆ ಈ ಸಿನಿಮಾ..!

Exit mobile version