Site icon Vistara News

ಬಂಕಿಮ ಚಂದ್ರ ಚಟರ್ಜಿ ಕಾದಂಬರಿ ಆಧಾರಿತ ಸಿನಿಮಾ : ರಾಜಮೌಳಿ ಶಿಷ್ಯನೇ ಇದಕ್ಕೆ ನಿರ್ದೇಶಕ !

ಬಂಕಿಮ ಚಂದ್ರ ಚಟರ್ಜಿ

ಬೆಂಗಳೂರು : ಬಾಹುಬಲಿ, ಆರ್‌ಆರ್‌ಆರ್‌ ಸಿನಿಮಾಗಳಿಂದ ಸಾಕಷ್ಟು ಖ್ಯಾತಿ ಪಡೆದ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ಶಿಷ್ಯ ಅಶ್ವಿನ್‌ ಗಂಗರಾಜು ಹೊಸ ಸಿನಿಮಾವೊಂದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. 1770 ಶೀರ್ಷಿಕೆ ಹೊಂದಿದ ಈ ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾ ಆಗಿ ಹೊರಹೊಮ್ಮಲಿದೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಈ ಸಿನಿಮಾ ಘೋಷಿಸಿದ್ದು, ವಿಶೇಷವೆಂದರೆ ಬಂಕಿಮ ಚಂದ್ರ ಚಟರ್ಜಿ ಅವರ ʻಆನಂದಮಠʼ ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ , ಬೆಂಗಾಲಿ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ. ಈ ಸಿನಿಮಾವನ್ನು ಎಸ್‌ಎಸ್‌1 ಎಂಟರ್‌ಟೇನ್‌ಮೆಂಟ್‌ ಮತ್ತು ಪಿಕೆ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್‌, ಸುಜಯ್‌ ಕುಟ್ಟಿ, ಕೃಷ್ಣಕುಮಾರ್‌ ಬಿ, ಮತ್ತು ಸೂರಜ್‌ ಶರ್ಮಾ ನಿರ್ಮಿಸುತ್ತಿದ್ದಾರೆ. ಖ್ಯಾತ ಲೇಖಕ ಮತ್ತು ನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವೆಂದರೆ ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರು ಈ ಸಿನಿಮಾಗೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನ ಪ್ರಕಟವಾಗಿತ್ತು. ಈ ಚಿತ್ರದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ವೀರ ಯೋಧರ ಕುರಿತಾಗಿ ಹೇಳಲು ಹೊರ‌ಟಿದ್ದೇವೆ ಎಂದು ವಿಜಯೇಂದ್ರ ಪ್ರಸಾದ್‌ ಹೇಳಿದರು. ದಸರಾ ವೇಳೆಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಱರ ಆಯ್ಕೆಯಾಗಲಿದ್ದು, ದೀಪಾವಳಿಗೆ ಅಧಿಕೃತ ಘೋಷಣೆಯಾಗಲಿದೆ.

Exit mobile version