Site icon Vistara News

Samantha Ruth Prabhu: ಸಮಂತಾ ಜೀವನದ ಗುರಿ, ಸಂಕಲ್ಪಗಳೇನು? ಇಂಟರೆಸ್ಟಿಂಗ್‌ ಪೋಸ್ಟ್‌ ಶೇರ್‌ ಮಾಡಿದ ನಟಿ

Samantha Ruth Prabhu

ಬೆಂಗಳೂರು: ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಬಾಲಿಯಲ್ಲಿ ಎಂಜಾಯ್‌ ಮಾಡಿ ಮತ್ತೆ ಮನೆಗೆ ಮರಳಿದ್ದಾರೆ. ಇದೀಗ ಇನ್‌ಸ್ಟಾದಲ್ಲಿ ಡೇಲಿ ರೂಟಿನ್‌ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಹಲವಾರು ಫೋಟೊಗಳ ಜತೆ ಸದ್ಯ ತಾನು ಏನು ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸಮಂತಾ ಶೇರ್‌ ಮಾಡಿಕೊಂಡಿರುವ ಫೋಟೊಗಳಲ್ಲಿ ಅವರ ಇಷ್ಟದ, ನಾಯಿಗಳು ಮತ್ತು ಬೆಕ್ಕು ಪಕ್ಕದಲ್ಲಿ ಮಲಗುವುದು, ಅವುಗಳ ಜತೆ ಕಾಲ ಕಳೆಯುವುದು, ಕೆಲವು ನುಡಿಗಳ ಪೋಸ್ಟ್‌, ಅಷ್ಟೇ ಅಲ್ಲದೇ ಇವೆಲ್ಲ ನನ್ನ ಜೀವನದ ಉದ್ದೇಶ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಸದ್ಯ ಸಮಂತಾ ಒಂದು ವರ್ಷಗಳ ಕಾಲ ಸಿನಿಮಾದಿಂದ ಬ್ರೇಕ್‌ ಪಡೆದು ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್‌ ಜತೆ ಬೆಕ್ಕು ಕ್ಯಾಮೆರಾದತ್ತ ನೋಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಸಮಂತಾ ತಮ್ಮ ಆರೋಗ್ಯದ ಮೇಲೆ ಕೇಂದ್ರೀಕರಿಸಲು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿತ್ತು. ನಟಿ ಮೈಯೋಸಿಟಿಸ್ ಎಂಬ ಆಟೋ ಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖುಷಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಸಿಟಾಡೆಲ್ ಇಂಡಿಯಾ ಇನ್ನೂ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಖುಷಿ ಸಿನಿಮಾದಲ್ಲಿ, ಸಮಂತಾ ವಿಜಯ್ ದೇವರಕೊಂಡ ಅವರೊಂದಿಗೆ ನಟಿಸಿದರೆ, ರಾಜ್ ಮತ್ತು ಡಿಕೆ ಸಿರೀಸ್‌ ಸಿಟಾಡೆಲ್‌ನಲ್ಲಿ ವರುಣ್ ಧವನ್ ಜತೆ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ನಟಿ ಬಾಲಿಯಲ್ಲಿ ಸಖತ್‌ ಎಂಜಾಯ್‌ ಕೂಡ ಮಾಡಿ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಬಾಲಿಯೂ ಮುಂಚೆ ನಟಿ ಕೊಯಮತ್ತೂರಿನ ಸದ್ಗುರುಗಳ ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದರು ಫೋಟೊ ಮತ್ತು ವಿಡಿಯೊಗಳನ್ನು ನಟಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Samantha Ruth Prabhu: ಹೆಚ್ಚಿನ ಚಿಕಿತ್ಸೆಗಾಗಿ 25 ಕೋಟಿ ರೂ. ಸಾಲ ಪಡೆದ್ರಾ ಸಮಂತಾ? ಆ ನಟ ಯಾರು?

ಸಿಟಾಡೆಲ್‌ ಭಾರತೀಯ ವರ್ಷನ್‌ ಸೀರಿಸ್‌ನಲ್ಲಿ ಸಮಂತಾ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿಗೆ ಬಾಲಿವುಡ್‌ ನಟ ವರುಣ್‌ ಧವನ್‌ ಅವರು ಸಾಥ್‌ ನೀಡಿದ್ದಾರೆ. ಸಿಟಾಡೆಲ್‌ ಚಿತ್ರೀಕರಣ ಮುಗಿಸಿದ್ದಾರೆ ನಟಿ. ಸಿಟಾಡೆಲ್‌ ಅಲ್ಲದೆ ಸಮಂತಾ ಅವರು ನಟ ವಿಜಯ್‌ ದೇವರಕೊಂಡ ಅವರ ಜತೆ ‘ಖುಷಿ’ ಸಿನಿಮಾ ಕೂಡ ಶೂಟಿಂಗ್‌ ಮುಗಿಸಿದ್ದು ಪ್ರಚಾರ ಕಾರ್ಯ ಈಗಾಗಲೇ ಶುರುವಾಗಿದೆ.

ಸಮಂತಾ ಅವರಿಗೆ ವಿಜಯ್‌ ದೇವರಕೊಂಡ ಅವರ ಜತೆ ಇದು ಎರಡನೇ ಸಿನಿಮಾವಾಗಿದೆ. ಈ ಹಿಂದೆ 2018ರಲ್ಲಿ ನಟಿ ವಿಜಯ್‌ ಅವರೊಂದಿಗೆ ‘ಮಹಾನಟಿ’ ಸಿನಿಮಾದಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು.

Exit mobile version