-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಂಡಿಯಾಗಿವೆ ನಟಿ ಆಲಿಯಾ ಭಟ್ (Star Saree Trend) ಉಟ್ಟ ಸೀರೆಗಳು! ಹೌದು. ಇದೀಗ ಬಣ್ಣ ಬಣ್ಣದ ಶಿಫಾನ್ ಹಾಗೂ ಜಾರ್ಜೆಟ್ ಸೀರೆಗಳು ಮರಳಿ ಲಗ್ಗೆ ಇಟ್ಟಿವೆ. ಇದಕ್ಕೆ ಪ್ರಮುಖ ಕಾರಣ, ಬಾಲಿವುಡ್ ನಟಿ ಆಲಿಯಾ ಭಟ್ ಎನ್ನುತ್ತಾರೆ ಸೀರೆ ಮಾರಾಟಗಾರರು. ಸೀರೆ ಅಂಗಡಿಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ಇಂತಹ ಸೀರೆಗಳ ಬೇಡಿಕೆ ಕಳೆದೆರೆಡು ದಿನಗಳಿಂದ ಹೆಚ್ಚಾಗಿದೆಯಂತೆ.
ಬೇಡಿಕೆ ಹೆಚ್ಚಾಗಿದ್ದು ಹೇಗೆ?
ಆಲಿಯಾ ಭಟ್, ತಾವು ನಟಿಸಿರುವ ರಾಕಿ ಆ್ಯಂಡ್ ರಾಣಿ ಕೀ ಪ್ರೇಮ್ ಕಿ ಕಹಾನಿ, ಹಿಂದಿ ಸಿನಿಮಾ ಪ್ರಮೋಷನ್‌ಗಳಲ್ಲಿ ನಿರಂತರವಾಗಿ ಇಂತಹ ಮನಮೋಹಕ ಸೀರೆಗಳನ್ನು ಉಟ್ಟು ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಇವು ಸೆಲೆಬ್ರೆಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಲೆಬೆಲ್‌ನ ಸೀರೆಗಳಾಗಿದ್ದು, ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರನ್ನು ಸೆಳೆಯುತ್ತಿವೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿರುವುದು ಪ್ರಮುಖ ಕಾರಣ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಕಾಪಿ ಕ್ಯಾಟ್ ಸೀರೆಗಳ ಹಂಗಾಮ
ತೆರೆ ಮರೆಗೆ ಸರಿದಿದ್ದ, ಈ ಬಗೆಯ ಸೀರೆಗಳು, ಯಾವ ಮಟ್ಟಿಗೆ ಫ್ಯಾಷನ್‌ನಲ್ಲಿ ಮರಳಿ ಚಾಲ್ತಿಗೆ ಬರುತ್ತಿವೆ ಎಂದರೇ, ಈಗಾಗಲೇ ಫ್ಯಾಷನ್ ಲೋಕದಲ್ಲಿ ಕಾಪಿಕ್ಯಾಟ್ ಸೀರೆಗಳು ಸಿದ್ಧಗೊಳುತ್ತಿವೆ. ನೋಡಲು ಸಿಂಪಲ್ ಆಗಿ ಕಾಣುವ ಬಣ್ಣ ಬಣ್ಣದ ಈ ಸಾಫ್ಟ್ ಶಿಫಾನ್ ಹಾಗೂ ಜಾರ್ಜೆಟ್ ಸೀರೆಗಳು, ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸಿವೆ.
ಇದನ್ನೂ ಓದಿ: Star Fashion: ವೈಟ್ ಕಟೌಟ್ ಬಾಡಿಕಾನ್ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ರಚನಾ ಇಂದರ್ ಗ್ಲಾಮರಸ್ ಲುಕ್
ಇದನ್ನೂ ಓದಿ: Star Fashion: ವೈಟ್ ಕಟೌಟ್ ಬಾಡಿಕಾನ್ ಡ್ರೆಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ರಚನಾ ಇಂದರ್ ಗ್ಲಾಮರಸ್ ಲುಕ್
ಲೋಕಲ್ ಬ್ರಾಂಡ್‌ಗಳಲ್ಲೂ ಲಭ್ಯ
ಮನೀಶ್ ಮಲ್ಹೋತ್ರಾ ಲೆಬೆಲ್‌ನ ಸೀರೆಗಳನ್ನು ಸಾಮಾನ್ಯರು ಕೊಳ್ಳುವುದು ಕಷ್ಟ. ಆ ಮಟ್ಟಿಗೆ ದುಬಾರಿ ಬೆಲೆ ಹೊಂದಿರುತ್ತವೆ. ಅದೇ ಸಾಮಾನ್ಯ ಲೆಬಲ್‌ನದ್ದು ಕೈಗೆಟಕುವ ಬೆಲೆಗೆ ದೊರೆಯುತ್ತವೆ. ಐನೂರರಿಂದ ಸಾವಿರ ರೂನೊಳಗೆ ದೊರಕುತ್ತವೆ. ಕೊಂಚ ಬಣ್ಣ ಬದಲಾಗಬಹುದಷ್ಟೇ! ಎನ್ನುವ ಸೀರೆ ಮಾರಾಟಗಾರರಾದ ಅನಿಲ್ ಅವರ ಪ್ರಕಾರ, ಸಾಕಷ್ಟು ಮಹಿಳೆಯರು ಇಂತಹ ಸೀರೆಗಳನ್ನು ತರಿಸಿಕೊಡಲು ಬೇಡಿಕೆ ಇಟ್ಟಿದ್ದಾರಂತೆ.
ಒಟ್ನಲ್ಲಿ, ಸಿನಿಮಾ ಪ್ರಮೋಷನ್ ಜೊತೆಗೆ ಸೀರೆಯ ಪ್ರಮೋಷನ್ ಕೂಡ ಮಾಡುತ್ತಿರುವ ಆಲಿಯಾ ಭಟ್ ಉಟ್ಟಿರುವ ಸೀರೆಯಿಂದಾಗಿ ಇಂತಹ ಸೀರೆಗಳು ಮರಳಿ ಟ್ರೆಂಡ್‌ಗೆ ಬಂದಂತಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
( ಲೇಖಕಿ : ಫ್ಯಾಷನ್ ಪತ್ರಕರ್ತೆ)