Site icon Vistara News

Shilpa Shetty: ಮಗಳಿಗೋಸ್ಕರ ಚೆಂದವಾಗಿ ರೂಮ್‌ ಸಿದ್ಧಪಡಿಸಿದ ಶಿಲ್ಪಾ ಶೆಟ್ಟಿ: ಇಲ್ಲಿದೆ ಫೋಟೊ!

Step inside Shilpa Shettys daughters room 2

ಬೆಂಗಳೂರು: ನಟಿ ಶಿಲ್ಪಾ ಶೆಟ್ಟಿ (Shilpa Shetty) ಮಗಳು ಸಮೀಷಾಗೋಸ್ಕರವಾಗಿ ಮಗಳ ರೋಮ್‌ ಅನ್ನು ಹಲವಾರು ಪ್ರಾಣಿಗಳ ಚಿತ್ರದೊಂದಿಗೆ ತಯಾರು ಮಾಡಿಸಿದ್ದಾರೆ. ಶಿಲ್ಪಾ ಶೆಟ್ಟಿ ಇನ್‌ಸ್ಟಾ ಸ್ಟೋರಿಯಲ್ಲಿ ಈ ಕ್ಲಿಪ್ ಹಂಚಿಕೊಂಡಿದ್ದಾರೆ. ನೀಲಿ, ಗುಲಾಬಿ ಮತ್ತು ಬಿಳಿ ಬಣ್ಣಗಳಿಂದ ರೂಮ್‌ ಚೆಂದವಾಗಿ ಕಂಡಿದೆ. ಗೋಡೆಗಳ ಒಂದು ಬದಿಯಲ್ಲಿ ಆನೆ ಮತ್ತು ಜಿರಾಫೆ ಮತ್ತು ಚಿಟ್ಟೆಗಳು ಸೇರಿದಂತೆ ಹಲವಾರು ಪ್ರಾಣಿಗಳನ್ನು ಚಿತ್ರಿಸಲಾಗಿದೆ. ಕೆಲವು ಸಸ್ಯಗಳು ಸಹ ಭಾಗವಾಗಿದ್ದವು.

ಸಮೀಷಾ ಅವರ ಆಟದ ಸ್ಥಳಗಳಲ್ಲಿ ಸುತ್ತಲೂ ಬಲೆಯಿಂದ ಕೂಡಿತ್ತು. ಮಲಗುವ ಹಾಸಿಗೆಯಲ್ಲಿ ಹಲವಾರು ಆಟ ಸಾಮಾನುಗಳು ಚೆಂದವಾಗಿ ಕಂಡಿವೆ. ಶಿಲ್ಪಾ ಅವರು ವಿಡಿಯೊ ಜತೆಗೆ, “ಸಮೀಷಾಳ ಹೊಸ ರೂಮ್‌ ಚೆಂದವಾಗಿ ಕಾಣಿಸಲು ನನಗೆ ಸಹಾಯ ಮಾಡಿದ್ದಕ್ಕಾಗಿ ನನ್ನ ಪ್ರಿಯತಮೆ ಮಿನಲ್‌ಚೋಪ್ರಾ ಅವರಿಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಧ್ಯವಿಲ್ಲʼʼಎಂದು ಬರೆದುಕೊಂಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ 2020ರಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದಾರೆ. ಮಾಡೆಲಿಂಗ್ ಮಾಡುತ್ತ ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ. 1993ರಲ್ಲಿ ಥ್ರಿಲ್ಲರ್ ʻಬಾಜಿಗರ್ʼ ಸಿನಿಮಾದ ನಟನೆಗಾಗಿ ಫಿಲಂ ಫೇರ್ ಅವಾರ್ಡ್‌ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಶಿಲ್ಪಾ ಶೆಟ್ಟಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾರನ್ನು ಶಿಲ್ಪಾ ಶೆಟ್ಟಿ ವಿವಾಹವಾದರು. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ.

ಇದನ್ನೂ ಓದಿ: Shilpa Shetty: ಬೆಂಗಳೂರಿಗೆ ಬಂದ ಶಿಲ್ಪಾ ಶೆಟ್ಟಿ; ಸೆಲ್ಫಿ ಹಂಚಿಕೊಂಡ ಬಾಲಿವುಡ್ ಬೆಡಗಿ

ಇನ್‌ಸ್ಟಾ ಸ್ಟೋರಿಯಲ್ಲಿ ಕ್ಲಿಪ್ ಶೇರ್‌ ಮಾಡಿಕೊಂಡ ಶಿಲ್ಪಾ ಶೆಟ್ಟಿ

ಕೆ.ಡಿ ಸಿನಿಮಾದಲ್ಲಿ ಸತ್ಯವತಿಯಾಗಿ ಮಿಂಚಲಿರುವ ಶಿಲ್ಪಾ ಶೆಟ್ಟಿ

ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಇರುವ ʻಕೆಡಿ’ ಸಿನಿಮಾದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬದಂದು ಚಿತ್ರತಂಡ, ಶಿಲ್ಪಾ ಶೆಟ್ಟಿ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿತ್ತು.

ಶಿಲ್ಪಾ ಶೆಟ್ಟಿ ಕೂಡಾ ತಮ್ಮ ಪೋಸ್ಟರನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಬಹಳ ಎಕ್ಸೈಟ್‌ ಆಗಿದ್ದರು. ರೆಟ್ರೋ ಲುಕ್‌ನಲ್ಲಿ ಕಾರೊಂದರ ಮುಂದೆ ಬ್ಯಾಗ್‌ ಹಿಡಿದು ನಿಂತಿರುವ ಶಿಲ್ಪಾ ಶೆಟ್ಟಿ ಲುಕ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ.

Exit mobile version