Site icon Vistara News

Video: ಹಾರರ್​ ದೃಶ್ಯಗಳು, ಜತೆಗೊಂದಿಷ್ಟು ರೊಮ್ಯಾನ್ಸ್​​; ರಾಘಣ್ಣ ಅಭಿನಯದ ಸ್ತಬ್ಧ ಚಿತ್ರದ ಟೀಸರ್​ ರಿಲೀಸ್​

Sthabdha Kannada Movie Teaser Release Today May 21

#image_title

ಪ್ರತಾಪ್​ ಸಿಂಹ ರೆಡ್ಡಿ-ಹರ್ಷಿಕಾ ಪೂಣಚ್ಛ ಅಭಿನಯದ ಸ್ತಬ್ಧ ಚಿತ್ರದ ಟೀಸರ್ (Sthabdha Teaser)​ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್​ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇಂದು ಟೀಸರ್​ನ್ನು ಅವರೇ ಬಿಡುಗಡೆ ಮಾಡಿದ್ದಾರೆ. ಇಡೀ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇಂದು 1.52 ನಿಮಿಷದ ಟೀಸರ್ ಬಿಡುಗಡೆಯಾಗಿದ್ದು, ಸಸ್ಪೆನ್ಸ್​, ಥ್ರಿಲ್ಲರ್​, ಹಾರರ್​ ಮತ್ತು ಆ್ಯಕ್ಷನ್, ಜತೆಗೆ ಒಂದಷ್ಟು ರೊಮ್ಯಾಂಟಿಕ್ ಸೀನ್ ಇರುವ​ ಸಿನಿಮಾ ಎಂಬುದು ಇದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದಹಾಗೇ, ಬಹುನಿರೀಕ್ಷಿತ ಸ್ತಭ್ಧ ಚಿತ್ರ ಜೂನ್​ 9ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಸ್ತಬ್ಧ ಚಲನಚಿತ್ರ ಸಾಯಿ ಸಾಗರ್​ ಫಿಲ್ಮ್​ ಫ್ಯಾಕ್ಟರಿ ಬ್ಯಾನರ್​ನಡಿ ನಿರ್ಮಾಣಗೊಂಡಿದ್ದು, ಇದರ ನಿರ್ಮಾಪಕರು ಡಾ. ಡಿ.ವಿ.ವಿದ್ಯಾಸಾಗರ್​. ಲಾಲಿ ರಾಘವ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ​ ಮತ್ತು ಸಂಗೀತ ನಿರ್ದೇಶಕ ಆರವ್​ ರಿಶಿಕ್. ಹಾಗೇ, ಹಂಸಲೇಖ ಸಾಹಿತ್ಯ ಮತ್ತು ಸಾಹಸ ದೃಶ್ಯಗಳ ನಿರ್ದೇಶನವನ್ನು ಥ್ರಿಲ್ಲರ್​ ಮಂಜು ಮಾಡಿದ್ದಾರೆ. 2022ರ ಜನವರಿಯಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆದಿತ್ತು. ಅದಾಗಿ ಕೆಲವೇ ತಿಂಗಳಲ್ಲಿ ಮೊದಲ ಮೋಶನ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಮೋಶನ್ ಪೋಸ್ಟರ್ ಬಿಡುಗಡೆಯಾದಾಗಲೇ ಸಿನಿಮಾ ಬಗ್ಗೆ ಕುತೂಹಲ ಮೂಡಿತ್ತು. ಇನ್ನು ಇದರಲ್ಲಿ ಹರ್ಷಿಕಾ ಪೂಣಚ್ಛ ಅವರು ರಾಘವೇಂದ್ರ ರಾಜಕುಮಾರ್ ಮಗಳಾಗಿ ಅಭಿನಯಿಸುತ್ತಿದ್ದಾರೆ. ಈ ಬಗ್ಗೆ ಅವರು ಚಿತ್ರದ ಮುಹೂರ್ತದ ವೇಳೆ ಮಾತನಾಡುತ್ತ, ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದರು.

ಇಲ್ಲಿದೆ ನೋಡಿ ಸ್ತಬ್ಧ ಕನ್ನಡ ಚಿತ್ರದ ಟೀಸರ್

Exit mobile version