ಬೆಂಗಳೂರು: ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ‘ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದರು. ಡೇಟಿಂಗ್‌ನಿಂದ ನಿಶ್ಚಿತಾರ್ಥ, ವಿವಾಹದವರೆಗಿನ ತಮ್ಮ ಪ್ರಯಾಣವನ್ನು ಚರ್ಚಿಸಿದ್ದರಿಂದ ಈ ಸಂಚಿಕೆಯು ಸಾಕಷ್ಟು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯಿತು. ಮೊದಲ ಬಾರಿಗೆ ಅವರ ಮದುವೆಯ ವೀಡಿಯೊವನ್ನು ಈ ವೇದಿಕೆಯಲ್ಲಿ ಜೋಡಿ ಹಂಚಿಕೊಂಡಿದೆ. ಮೆಚ್ಚುಗೆಯ ಜತೆಗೆ ಜೋಡಿ ಭಾರಿ ಟ್ರೋಲ್‌ಗೆ ಕೂಡ ಗುರಿಯಾದರು. ರಣವೀರ್ ಸಿಂಗ್ ಜತೆ ರಿಲೇಷನ್ಶಿಪ್ನಲ್ಲಿ ಇದ್ದಾಗಲೇ ಬೇರೆಯವರ ಜತೆಗೂ ಡೇಟಿಂಗ್ ಮಾಡಿದ್ದೆ ಎಂಬ ಸತ್ಯವನ್ನು ದೀಪಿಕಾ ಎಪಿಸೋಡ್ನಲ್ಲಿ ಒಪ್ಪಿಕೊಂಡರು. ಕಾಲೇಜು ಫೆಸ್ಟ್ನಲ್ಲೂ ಈ ಬಗ್ಗೆ ಹಾಸ್ಯ ಮಾಡಲಾಗಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಆಕ್ಟ್ ಆಗಿ ಪರಿವರ್ತಿಸಲಾಗಿದೆ.
ವಿಡಿಯೊದಲ್ಲಿ, ರಣಬೀರ್ ಕಪೂರ್, ಯುವರಾಜ್ ಸಿಂಗ್, ನಿಹಾರ್ ಪಾಂಡ್ಯ ಮತ್ತು ಸಿದ್ಧಾರ್ಥ್ ಮಲ್ಯ ಅವರೊಂದಿಗಿನ ಸಂಬಂಧಗಳು ಸೇರಿದಂತೆ ದೀಪಿಕಾ ಪಡುಕೋಣೆ ಅವರ ಹಿಂದಿನ ಸಂಬಂಧಗಳನ್ನು ತಮಾಷೆಯಾಗಿ ತೋರಿಸಲಾಗಿದೆ. ಕ್ಲಿಪ್ ವೈರಲ್ ಆದ ನಂತರ, ಅಭಿಮಾನಿಗಳು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಈ ವರ್ತನೆಯನ್ನು ನಾಚಿಕೆಗೇಡು ಎಂದು ಫ್ಯಾನ್ಸ್ ಟೀಕಿಸಿದ್ದಾರೆ.
ʻಬಾಜಿರಾವ್ ಮಸ್ತಾನಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಿಭಾಯಿಸಿದ್ದ ಪಾತ್ರದ ರೀತಿಯಲ್ಲಿ ವೇಷ ಹಾಕೊಂಡ ವಿದ್ಯಾರ್ಥಿಯೊಬ್ಬರು ವೇದಿಕೆಗೆ ಬಂದು ನಿಂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಎಲ್ಇಡಿ ಪರದೆಯ ಮೇಲೆ ಸಿದ್ದಾರ್ಥ್ ಮಲ್ಯ, ಉಪೆನ್ ಪಟೇಲ್, ರಣಬೀರ್ ಕಪೂರ್, ಯುವರಾಜ್ ಸಿಂಗ್, ರಣವೀರ್ ಸಿಂಗ್ ಮುಂತಾದವರ ಫೋಟೊಗಳು ಬಂದಿವೆ.
ಇದನ್ನೂ ಓದಿ: Deepika Padukone: ಟ್ರೋಲ್‌ಗಳಿಗೆ ಕ್ಯಾರೆ ಎನ್ನದೇ ʻಲುಕ್ಕಿಂಗ್ ಲೈಕ್ ಎ ವಾವ್ʼ ರೀಲ್ಸ್ ಮಾಡಿದ ದೀಪಿಕಾ!
This BHU , Varanasi Uttar Pradesh
— Ashish Singh (@AshishSinghKiJi) November 8, 2023
Memes are ok But This is character assassination of Indian actress Deepika Padukone!
It's just show the mindset of cheapest! It's shameful act! pic.twitter.com/KhK3oQrulX
ಕ್ಲಿಪ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ʻʻಇದು ಸಾಂಸ್ಕೃತಿಕ ಕಾರ್ಯಕ್ರಮವೇ? ? ಅವರ ಸಂಸ್ಕೃತಿ ಸ್ಪಷ್ಟವಾಗಿ ತೋರುತ್ತಿದೆʼʼಎಂದು ಕಮೆಂಟ್ ಮಾಡಿದ್ದಾರೆ. “ಇದು ಸ್ವೀಕಾರಾರ್ಹವಲ್ಲ.. ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು!”ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಶೋನಲ್ಲಿ ದೀಪಿಕಾ ಹೇಳಿದ್ದೇನು?
ದೀಪಿಕಾ ಅವರು ತಮ್ಮ ಡೇಟಿಂಗ್ ಕುರಿತಾಗಿ ರಣವೀರ್ ಮುಂದೆಯೇ ಶೋನಲ್ಲಿ ಮಾತನಾಡಿದ್ದರು. ಅದು ರಣವೀರ್ ಕೋಪಕ್ಕೆ ಕಾರಣವಾಗಿತ್ತು. ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ದರು. ಇದಕ್ಕೆ ದೀಪಿಕಾ ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರುವುದಕ್ಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ’ ಎಂದಿದ್ದರು.