Site icon Vistara News

Jolly Bastiaan: ಪ್ರೇಮಲೋಕ, ಮಾಸ್ಟರ್​ ಪೀಸ್ ಖ್ಯಾತಿಯ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್‌ ಇನ್ನಿಲ್ಲ!

stunt Master Jolly Bastian with puneeth Rajkumar

ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್ (Jolly Bastiaan) ಹೃದಯಾಘಾತದಿಂದ (ಡಿಸೆಂಬರ್ 26) ನಿಧನರಾಗಿದ್ದಾರೆ. ‘ಪ್ರೇಮಲೋಕ’ (Premaloka Movie), ‘ಮಾಸ್ಟರ್​ ಪೀಸ್’ ಸೇರಿ 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಜಾಲಿ ಬಾಸ್ಟಿನ್ ಅವರಿಗೆ 57 ವರ್ಷ ವಯಸ್ಸಾಗಿತ್ತು. ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ

ಕೇರಳದ ಅಲೆಪ್ಪೆಯಲ್ಲಿ ಅವರು 1966ರಲ್ಲಿ ಜನಿಸಿದರು. ಆದರೆ, ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿಯೇ ಶಿಕ್ಷಣ ಪಡೆದರು. ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಆಗ ಅವರಿಗೆ 17 ವರ್ಷ ವಯಸ್ಸು. ಇದನ್ನು ಇನ್‌ಸ್ಟಾದಲ್ಲಿ ಫೋಟೊ ಹಂಚಿಕೊಂಡಿದ್ದರು.

‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು.

ಇದನ್ನೂ ಓದಿ: ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ ಮಾರುತಿರಾವ್‌ ಮಾಲೆ ನಿಧನ

ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು.

‘ಪ್ರೇಮಲೋಕ’, ‘ಪುಟ್ನಂಜ’, ‘ಅಣ್ಣಯ್ಯ’, ‘ಶಾಂತಿ ಕ್ರಾಂತಿ’ ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.‘ಭಲೇ ಚತುರ’ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಜಾಲಿ ದೇಹಕ್ಕೆ ಸಾಕಷ್ಟು ಹಾನಿ ಆಗಿತ್ತು. ಇವರ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

Exit mobile version