ಬೆಂಗಳೂರು: ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ (Subi Suresh) ಕೇರಳದ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ಸುಬಿ ಸುರೇಶ್ ಅವರಿಗೆ 41 ವರ್ಷ ವಯಸ್ಸಾಗಿತ್ತು. ಕಿರುತೆರೆ ನಟಿ, ಹಾಸ್ಯ ಕಲಾವಿದೆ ಹಾಗೂ ಟಿವಿ ಶೋ ನಿರೂಪಕಿಯೂ ಆಗಿರುವ ಇವರು ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದ ಕಾರಣ ಅವರು ಬದುಕಿ ಉಳಿಯಲಿಲ್ಲ. ಬುಧವಾರ (ಫೆಬ್ರವರಿ 22) ಬೆಳಗ್ಗೆ ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಹಲವು ಸೆಲೆಬ್ರಿಟಿಗಳು ಕೂಡ ಸಂತಾಪ ಸೂಚಿಸಿದ್ದಾರೆ.
ಸುಬಿ ಸುರೇಶ್ ಅವರು ಸೂರ್ಯ ಟಿವಿಯ “ಕುಟ್ಟಿ ಪಟ್ಟಾಳಂ” (‘Kutty Pattalam’), ಮಕ್ಕಳ ಕಾರ್ಯಕ್ರಮ ಮತ್ತು ಮಜವಿಲ್ ಮನೋರಮಾ ಅವರ “ಮೇಡ್ ಫಾರ್ ಈಚ್ ಅದರ್” ಕಾರ್ಯಕ್ರಮಗಳನ್ನು ನಿರೂಪಿಸಿದ್ದರು. ಸುಬಿ ಸುರೇಶ್ ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ, ಎವರ್ ಗ್ರೀನ್ ಕಾಮಿಡಿ ಶೋ ‘ಸಿನಿಮಾಲಾ’ಗೆ (Cinemala) ಎಂಟ್ರಿ ಕೊಟ್ಟ ನಂತರ ಮನೆಮಾತಾಗಿದ್ದರು. ‘ಸಿನಿಮಾಲಾ’ ಕಾರ್ಯಕ್ರಮ ನಡೆಸಿಕೊಡುವ ಶೈಲಿ ವೀಕ್ಷಕರಿಗೆ ಇಷ್ಟ ಆಗಿತ್ತು.
ಇದನ್ನೂ ಓದಿ: NTR 30: ತಾರಕರತ್ನ ನಿಧನದಿಂದಾಗಿ ಎನ್‌ಟಿಆರ್ 30 ಸಿನಿಮಾದ ಈವೆಂಟ್ ಮುಂದೂಡಿಕೆ
ʻಹ್ಯಾಪಿ ಹಸ್ಬೆಂಡ್ಸ್’ (‘Happy Husbands’), ‘ಕಂಕಣಸಿಂಹಾಸನಂ’ (‘Kankanasimhasanam’) ಮತ್ತು ಹೆಚ್ಚಿನ ಸಿನಿಮಾಗಳಲ್ಲಿ ಹಾಸ್ಯ ಪಾತ್ರಧಾರಿಯಾಗಿ ನಿಭಾಯಿಸಿದ್ದಾರೆ. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.