Site icon Vistara News

Sudeep birthday | 2 ವರ್ಷಗಳ ನಂತರ ಕಿಚ್ಚ ಸುದೀಪ್‌ ಮತ್ತು ಅಭಿಮಾನಿಗಳ ಸಮಾಗಮ

movie star kiccha sudeepa may join congress party

ಸುದೀಪ್‌ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. 2 ವರ್ಷಗಳಿಂದ ಒಂದಲ್ಲಾ ಒಂದು ಕಾರಣಕ್ಕೆ ನಟ ಸುದೀಪ್‌ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಕೂಡಿಬಂದಿದ್ದು, ಸುದೀಪ್‌ ಅವರ 48ನೇ ಹುಟ್ಟುಹಬ್ಬವನ್ನು (Sudeep birthday) ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಸಾಗಿದೆ.

ರಾಜಧಾನಿ ಬೆಂಗಳೂರಿನ ಜೆ.ಪಿ.ನಗರದ ತಮ್ಮ ನಿವಾಸದಲ್ಲೇ ಅಭಿಮಾನಿಗಳನ್ನು ನಟ ಕಿಚ್ಚ ಸುದೀಪ್‌ ಇಂದು ಭೇಟಿಯಾಗಲಿದ್ದಾರೆ. ಬೆಳಗ್ಗೆ 9ಕ್ಕೆ ನಟ ಸುದೀಪ್‌ ಮತ್ತು ಅಭಿಮಾನಿಗಳ ಸಮಾಗಮಕ್ಕೆ ಸಮಯ ನಿಗದಿ ಮಾಡಲಾಗಿದೆ. ಹೀಗಾಗಿ ಸುದೀಪ್‌ ಅವರನ್ನು ಭೇಟಿ ಮಾಡಲು ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು‌ ಬರಲಿದ್ದಾರೆ. ಇದೇ ಕಾರಣಕ್ಕೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ.

ನಟರಿಂದ ಶುಭಾಶಯ
ನಟ ಸುದೀಪ್‌ ಚಂದನವನದ ಜೊತೆ ಜೊತೆಗೆ ದೇಶದ ವಿವಿಧ ಭಾಷೆಗಳಲ್ಲಿ ನಟಿಸಿ ಮಿಂಚಿದವರು. ಹಿಂದಿ ಚಿತ್ರರಂಗದಲ್ಲೂ ಸುದೀಪ್‌ ಸಾಕಷ್ಟು ಉತ್ತಮ ಸಿನಿಮಾಗಳನ್ನ ನೀಡಿದ್ದರು. ಹೀಗಾಗಿ ಸುದೀಪ್‌ ಅವರಿಗೆ ಬೇರೆ ಬೇರೆ ಭಾಷೆಗಳ ಚಿತ್ರರಂಗದಲ್ಲೂ ಸ್ನೇಹಿತರಿದ್ದಾರೆ. ಮಧ್ಯ ರಾತ್ರಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ನಟ ಸುದೀಪ್‌ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳು ಹಾಗೂ ನಟ-ನಟಿಯರು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಮಧ್ಯರಾತ್ರಿಯಿಂದಲೇ ಸಂಭ್ರಮಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಹಿರಿಯ ನಟರು ಸುದೀಪ್‌ ಅವರಿಗೆ ಹುಟ್ಟುಹಬ್ಬದ ದಿನ ಶುಭಕೋರಿದ್ದಾರೆ. ಇನ್ನೊಂದು ಕಡೆ ಸುದೀಪ್‌ ಅವರ ಹೊಸ ಸಿನಿಮಾಗಳು ಕೂಡ ಘೋಷಣೆಯಾಗುವ ಸಾಧ್ಯತೆ ಇದೆ. ಈಗ ತಾನೆ ಸುದೀಪ್‌ ಹುಟ್ಟುಹಬ್ಬದ ಸಂಭ್ರಮ ಮೇಳೈಸಿದ್ದು, ಜೆ.ಪಿ. ನಗರದಲ್ಲಿ ಅಭಿಮಾನಿಗಳ ಸಾಗರ ನೆರೆಯುತ್ತಿದೆ. ಮತ್ತೊಂದು ಕಡೆ ನಟ ಸುದೀಪ್‌ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Kichcha Sudeep | ಕಿಚ್ಚ ಸುದೀಪ್‌ ಬರ್ತ್‌ ಡೇಗೆ ಅಂಚೆ ಇಲಾಖೆಯಿಂದ ಸ್ಪೆಷಲ್‌ ಗಿಫ್ಟ್!‌

Exit mobile version