ಒಂದು ಕಡೆ ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ (Sudeep birthday) ಸಂಭ್ರಮ ಕರುನಾಡಿನಾದ್ಯಂತ ಸದ್ದು ಮಾಡುತ್ತಿದೆ. ಮತ್ತೊಂದು ಕಡೆ ಸದ್ದೇ ಇಲ್ಲದೆ ಸಮಾಜಮುಖಿ ಕಾರ್ಯಕ್ಕೆ ಅವರು ಮುಂದಾಗಿದ್ದಾರೆ. ಹೌದು, ಗೋ ಸಂಪತ್ತಿನ ಸಂರಕ್ಷಣೆಗಾಗಿ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಕಿಚ್ಚ ಸುದೀಪ್ ಕೈಜೋಡಿಸಿದ್ದಾರೆ. ಈ ಮೂಲಕ ಅವರು ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.
ಸುದೀಪ್ ಅವರನ್ನು ಪುಣ್ಯಕೋಟಿ ರಾಯಭಾರಿಯಾಗಿ ನೇಮಿಸಲಾಗಿದೆ. ಈ ಕುರಿತು ಸಚಿವ ಪ್ರಭು ಬಿ. ಚವ್ಹಾಣ್ ಅಧಿಕೃತ ಆದೇಶವನ್ನೂ ಹೊರಡಿಸಿದ್ದಾರೆ. ಆದೇಶದ ಪ್ರತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಿಚ್ಚ ಸುದೀಪ್ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆಯೂ ವ್ಯಕ್ತವಾಗುತ್ತಿದೆ. ಗೋ ಸಂಪತ್ತಿನ ಸಂರಕ್ಷಣೆಗೆ ಕರ್ನಾಟಕ ಸರ್ಕಾರ ತೊಟ್ಟಿರುವ ಸಂಕಲ್ಪಕ್ಕೆ ಇನ್ನುಮುಂದೆ ಕಿಚ್ಚ ಸುದೀಪ್ ಹೆಗಲು ನೀಡಲಿದ್ದಾರೆ.
ಅಂಚೆ ಇಲಾಖೆ ಗೌರವ
ಕೆಲ ದಿನಗಳ ಹಿಂದೆ ಅಂಚೆ ಇಲಾಖೆಯಿಂದಲೂ ಸುದೀಪ್ ಅವರಿಗೆ ಗೌರವ ಸಲ್ಲಿಸಲಾಗಿತ್ತು. ‘ವಿಶೇಷ ಅಂಚೆ ಲಕೋಟೆ’ ಹೊರತರೋದಕ್ಕೆ ತೀರ್ಮಾನಿಸಲಾಗಿತ್ತು. ಇದು ಸುದೀಪ್ ಹುಟ್ಟಹಬ್ಬಕ್ಕೆ ಮತ್ತಷ್ಟು ಸಂಭ್ರಮ ತಂದಿತ್ತು. ಸಾಧಕರ ಸಾಧನೆ ಸದಾ ನೆನಪಲ್ಲಿ ಉಳಿಯುವಂತೆ ಮಾಡಲು ಅಂಚೆ ಇಲಾಖೆ ‘ವಿಶೇಷ ಅಂಚೆ ಲಕೋಟೆ’ಯನ್ನ ಬಿಡುಗಡೆ ಮಾಡುತ್ತದೆ. ಇದೇ ರೀತಿ 25 ವರ್ಷಗಳ ಸಿನಿ ಜರ್ನಿ ಪೂರ್ಣಗೊಳಿಸಿರುವ ಸುದೀಪ್ ಸಾಧನೆಯನ್ನೂ ಅಂಚೆ ಇಲಾಖೆ ದಾಖಲಿಸುತ್ತಿದೆ. ಹೀಗಾಗಿ ನಟ ಸುದೀಪ್ ಅವರ ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಈ ಬಾರಿಯ ನಟ ಸುದೀಪ್ ಹುಟ್ಟುಹಬ್ಬ ಹಲವು ಸರ್ಪ್ರೈಸ್‌ಗಳ ಜೊತೆಯಲ್ಲೇ ಫ್ಯಾನ್ಸ್‌ಗೆ ತುಂಬಾ ಸ್ಪೆಷಲ್ ಆಗುತ್ತಿದೆ. ಸುದೀಪ್ ಕೂಡ ಬರ್ತ್ ಡೇ ಸಂಭ್ರಮದ ಜೊತೆಯಲ್ಲೇ ಸಮಾಜಮುಖಿ ಕಾರ್ಯಕ್ರಮಕ್ಕೂ ಮುಂದಾಗುತ್ತಿದ್ದಾರೆ. ಇದು ಕಿಚ್ಚನ ಫ್ಯಾನ್ಸ್‌ಗೆ ಮಾದರಿಯೂ ಆಗುತ್ತಿರುವುದು ವಿಶೇಷ.
ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ