Site icon Vistara News

Sudeep Puneeth | ಸುದೀಪ್-ಪುನೀತ್‌ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ

Sudeep Puneeth

ನಟ ಸುದೀಪ್‌ ಹುಟ್ಟುಹಬ್ಬವನ್ನ ಕರುನಾಡಿನಾದ್ಯಂತ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ನಟ ಸುದೀಪ್‌ ಅವರ ಬರ್ತ್‌ ಡೇ ಸಂಭ್ರಮ ಟ್ರೆಂಡ್‌ ಸೃಷ್ಟಿಸಿದೆ. ಆದರೆ ವಿಶೇಷವೆಂಬಂತೆ ಈ ಹುಟ್ಟುಹಬ್ಬ, ಸುದೀಪ್​ ಹಾಗೂ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Sudeep Puneeth) ನಡುವಿನ ಬಾಂಧವ್ಯಕ್ಕೂ ಸಾಕ್ಷಿಯಾಗಿದೆ.

ಸುದೀಪ್‌‌ ಫ್ಯಾನ್ಸ, ಕಿಚ್ಚ & ಅಪ್ಪು ನಡುವಿನ ಸ್ನೇಹ ಸಂಬಂಧವನ್ನು ಮತ್ತೊಮ್ಮೆ ಜಗತ್ತಿಗೆ ತಿಳಿಸುತ್ತಿದ್ದಾರೆ. ಕಿಚ್ಚ ಸುದೀಪ್ ಭೇಟಿಗೆ ಬಂದಿದ್ದ ಅಭಿಮಾನಿಗಳ ಬಳಿ ಅಪ್ಪು ಫೋಟೋ ಕೂಡ ಇರುವುದು ಸ್ನೇಹ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಮತ್ತೊಂದು ಕಡೆ ಸೋಷಿಯಲ್‌ ಮೀಡಿಯಾದಲ್ಲೂ ದಿವಂಗತ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಸಂಭ್ರಮದಿಂದ ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

ಸುದೀಪ್‌ ಹಾಗೂ ದಿವಂಗತ ಡಾ. ಪುನೀತ್‌ ಗೆಳೆತನಕ್ಕೆ ದಶಕಗಳ ಇತಿಹಾಸವಿದೆ. ಇಬ್ಬರೂ ಬಾಲ್ಯದ ಗೆಳೆಯರು ಹಾಗೂ ಉತ್ತಮ ಸ್ನೇಹಿತರು. ಕರ್ನಾಟಕ ರತ್ನ ಅಪ್ಪು ಕಂಡರೆ ಸುದೀಪ್‌ಗೆ ಪ್ರೀತಿ, ಕಿಚ್ಚ ಸುದೀಪ್‌ ಅವರನ್ನ ಕಂಡರೆ ಅಪ್ಪು ಅವರಿಗೆ ಗೌರವ. ಹೀಗೆ ಇಬ್ಬರ ನಡುವೆ ಹಲವು ದಶಕಗಳಿಂದ ಸುಮಧುರವಾದ ಬಾಂಧವ್ಯ ಇದೆ. ಚಿಕ್ಕ ವಯಸ್ಸಿನಲ್ಲಿ ತೆಗೆಸಿದ್ದ ಫೋಟೋ ಅಂದರೆ ಇಬ್ಬರ ಬಾಲ್ಯದ ಫೋಟೋ ಅಮರವಾಗಿ ಅಭಿಮಾನಿಗಳನ್ನ ಸೆಳೆಯುತ್ತಿದೆ. ಈ ಫೋಟೋ ಸುದೀಪ್‌ ಹುಟ್ಟುಹಬ್ಬ ಸಂಭ್ರಮದಲ್ಲೂ ಕಂಡುಬಂದಿದ್ದು ವಿಶೇಷ.

ಅಪ್ಪು ಬೆಂಬಲ
ವಿಕ್ರಾಂತ್‌ ರೋಣ ರಿಲೀಸ್‌ ಆಗಿದ್ದ ಸಂದರ್ಭದಲ್ಲೂ ಅಪ್ಪು ಹಾಗೂ ಸುದೀಪ್‌ ಫೋಟೋ ವೈರಲ್‌ ಆಗಿತ್ತು. ಅಪ್ಪು ಫ್ಯಾನ್ಸ್‌ ನಟ ಸುದೀಪ್‌ ಸಿನಿಮಾಗೆ ಸಪೋರ್ಟ್‌ ಮಾಡಿದ್ದರು. ಆ ಸಮಯದಲ್ಲಿ ಖುದ್ದು ಕಿಚ್ಚ ಸುದೀಪ್‌ ಟ್ವೀಟ್‌ ಮೂಲಕ ಅಪ್ಪು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು. ಇದೇ ಸ್ನೇಹ ಬಾಂಧವ್ಯ ಮತ್ತೊಮ್ಮೆ ಮೇಳೈಸಿದ್ದು, ಸುದೀಪ್‌ ಬರ್ತ್‌ ಡೇ ಸಂಭ್ರಮದಲ್ಲಿ ಮತ್ತೊಮ್ಮೆ ಈ ಫೋಟೋ ವೈರಲ್‌ ಆಗಿದೆ.

2 ವರ್ಷಗಳಿಂದ ಒಂದಲ್ಲಾ ಒಂದು ಕಾರಣಕ್ಕೆ ನಟ ಸುದೀಪ್‌ ತಮ್ಮ ಅಭಿಮಾನಿಗಳ ಜೊತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಕೂಡಿಬಂದಿದ್ದು, ಮಧ್ಯ ರಾತ್ರಿಯಿಂದಲೇ ಸೆಲೆಬ್ರೇಷನ್‌ ಶುರುವಾಗಿದೆ.. ನಟ ಸುದೀಪ್‌ ಅವರನ್ನು ಭೇಟಿ ಮಾಡಲು ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು‌ ಆಗಮಿಸಿದ್ದಾರೆ. ಇದೇ ಕಾರಣಕ್ಕೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದಾರೆ. ಅಪ್ಪು ಅವರ ಅಭಿಮಾನಿ ಬಳಗದಿಂದಲೂ ಸುದೀಪ್‌ ಅವರಿಗೆ ಹುಟ್ಟುಹಬ್ಬದ ಶುಭಾಹಾರೈಕೆ ಹರಿದು ಬರುತ್ತಿದೆ.

ಇದನ್ನೂ ಓದಿ: Sudeep Birthday | ನಟ ಸುದೀಪ್‌ ಹುಟ್ಟುಹಬ್ಬ ಸಂಭ್ರಮ: ಅಭಿಮಾನಿಗಳ ಪ್ರೀತಿಗೆ ಕಿಚ್ಚ ಭಾವುಕ

Exit mobile version